Ticker

6/recent/ticker-posts

Ad Code

Responsive Advertisement

ಮಧುಗಿರಿ: ವರುಣನ ಆರ್ಭಟಕ್ಕೆ ತತ್ತರಿಸಿದ ಅಗಸರ ಹೊಳೆ ಸೇತುವೆ

ಮಧುಗಿರಿ :ವರುಣನ ಆರ್ಭಟಕ್ಕೆ ಮೊದಲು ಜನರು ಮಾತ್ರ ತತ್ತರಿಸಿದ್ದರು ಆದರೆ ಈಗ ರಸ್ತೆ, ಗುಡಿಸಲು, ಹಳೆಮನೆಗಳು ಸಹ ನೆಲಸಮವಾಗುವಂತ್ತಾಗಿದೆ. 


ಜನರ ಸ್ಥಿತಿ ಕೂಡ ಹೇಳತೀರದು. ಜನತೆಯ ಪರಿಸ್ಥಿತಿ ಹೇಗಿದೆ ಎಂದರೆ ಮಳೆ ಬಿಟ್ಟೂಬಿಡದೇ ಸುರಿಯುತ್ತಿದೆ. 

ಮಧುಗಿರಿಯಿಂದ  ಹಿಂದೂಪುರ, ಮತ್ತು ಮಧುಗಿರಿಯಿಂದ ಗೌರಿಬಿದನೂರು, ಮುಖ್ಯ ರಸ್ತೆಯು ಒಂದೇ ಆಗಿದ್ದು ಮೊದಲು ರಸ್ತೆಯ ಪ್ರಯಾಣ ಸುಖಕರವಾಗಿತ್ತು. 

ಆದರೆ ಈಗ ಅಗಸರ ಹೊಳೆ ಸೇತುವೆ ಬಳಿ ಇಂದು ವಾಹನ ಸವಾರರು ಪರದಾಡುವಂತಾಗಿದೆ. 

ಕಾರಣವಿಷ್ಟೇ ಅಗಸರ ಹೊಳೆ ಸೇತುವೆ ಹಳೆಯದಾಗಿದ್ದು, ವರುಣನ ಆರ್ಭಟಕ್ಕೆ ಇಂದು ದುರಸ್ತಿ ಗೊಂಡಿದೆ .ವಾಹನ ಸವಾರರು ಸಂಚರಿಸಲು ಮುಖ್ಯರಸ್ತೆ ಇದಾಗಿದ್ದರಿಂದ ವಾಹನ ಸವಾರರಿಗೆ ರಸ್ತೆ ಇಲ್ಲದಂತಾಗಿ ಬೈಪಾಸ್ ರಸ್ತೆಯ ಮೂಲಕ ಸಂಚರಿಸುವಂತಾಗಿದೆ. 

ಆದ್ದರಿಂದ ಯಾವುದೇ ವಾಹನಗಳನ್ನು ಮತ್ತು ಸಂಚಾರವನ್ನು ಅಗಸರ ಹೊಳೆಯ ಮೂಲಕ ಸ್ಥಗಿತಗೊಂಡಿದು. ವರುಣನ ಆರ್ಭಟ ದಿನೇದಿನೇ ಹೆಚ್ಚಾಗಿದ್ದು, ಈ ರೀತಿಯ ಸೇತುವೆಗಳು ದುರಸ್ತಿ ಆಗುವ ಅಪಾಯ ಕೂಡ ಹೆಚ್ಚಿದೆ.

ಸಂಬಂಧಪಟ್ಟ ಅಧಿಕಾರಿಗಳು ಇಂತಹ ಅಪಾಯದ ಸ್ಥಿತಿಯಲ್ಲಿರುವ ಸೇತುವೆಗಳನ್ನು ಗಮನಿಸಿದರೆ ಒಳಿತು ಹಾಗೂ ಪ್ರಯಾಣಿಕರು ಸಹ ಇಂತಹ ಸಂದರ್ಭಗಳಲ್ಲಿ ವೇಗ ಮಿತಿಯನ್ನು ಕಡಿಮೆ ಮಾಡಿಕೊಂಡು ಎಚ್ಚರಿಕೆಯಿಂದ ಚಲಿಸಿದರೆ ಅವರಿಗೂ ಮತ್ತು ಅವರ ಕುಟುಂಬ ವರ್ಗಕ್ಕೂ ಒಳಿತಾದಿತು.

                ವರದಿ:ನಾಗೇಶ್ ಜೀವಾ ಮಧುಗಿರಿ

Post a Comment

0 Comments

Ad Code

Responsive Advertisement