Ticker

6/recent/ticker-posts

Ad Code

Responsive Advertisement

ನಾಪತ್ತೆ ಪ್ರಕರಣ ಅತಿಹೆಚ್ಚು; ಓಡಿಹೋದ ಹುಡುಗಿಯರೇ ಹೆಚ್ಚು

ನವೆಂಬರ್ 26, ಕಾರವಾರ: ಕಳೆದ ಮೂರು ವರ್ಷಗಳಂದೀಚಿಗೆ ನಾಪತ್ತೆ ಪ್ರಕರಣಗಳು ಉತ್ತರಕನ್ನಡ ಜಿಲ್ಲೆಯಲ್ಲಿ ಹೆಚ್ಚಾಗಿ ಕಂಡುಬ0ದಿದೆ. ಅದರಲ್ಲೂ ಈ ವರ್ಷದ ಕೆಲವು ತಿಂಗಳುಗಳಿ0ದ ಬರೋಬ್ಬರಿ 232 ನಾಪತ್ತೆ ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಮಹಿಳೆಯರು, ಯುವತಿಯರು ಹೆಚ್ಚಾಗಿದ್ದಾರೆನ್ನುವುದು ಆತಂಕದ ವಿಚಾರ.


ಜಿಲ್ಲೆಯಲ್ಲಿ ಕೋವಿಡ್ಗೂ ಮುಂಚೆ, ಅಂದರೆ 2019ರಲ್ಲಿ 257 ಪ್ರಕರಣಗಳು ದಾಖಲಾಗಿದ್ದವು. ಈ ಪೈಕಿ 236 ಪ್ರಕರಣಗಳಲ್ಲಿ ನಾಪತ್ತೆಯಾದವರನ್ನು ಪೊಲೀಸರು ಹುಡುಕಿದ್ದರೆ, 21 ಇನ್ನೂ ತನಿಖೆಯಲ್ಲಿದ್ದವು. ಕೋವಿಡ್ ಸಮಯದಲ್ಲಿ ಲಾಕ್ ಡೌನ್ ಇದ್ದರೂ ಕೂಡ, ಅಂದರೆ 2020ರಲ್ಲಿ 212 ನಾಪತ್ತೆ ಪ್ರಕರಣ ದಾಖಲಾಗಿ, 197 ಮಂದಿ ಪತ್ತೆಯಾಗಿದ್ದಾರೆ. 15 ಮಂದಿಗಾಗಿ ಇನ್ನೂ ಹುಡುಕಾಟ ಮುಂದುವರಿದಿದೆ. ಈ ಎರಡು ವರ್ಷದಲ್ಲಿ ನಾಪತ್ತೆ ಪ್ರಕರಣದ ಅಂಕಿ-ಅ0ಶ ಸಾಧಾರಣವಾಗಿತ್ತೆಂದು ಪರಿಗಣಿಸಿದರೆ, 2021, ಅಂದರೆ ಪ್ರಸ್ತುತ ವರ್ಷದ ಅಂಕಿ-ಅ0ಶ ಗಾಬರಿ ಹುಟ್ಟಿಸುವಂಥದ್ದು!!

ಪ್ರೀತಿ ಪ್ರೇಮ ಅನೈತಿಕ ಸಂಬ0ಧಗಳು: ಇಷ್ಟೊಂದು ಪ್ರಕರಣಗಳಲ್ಲಿ ಬಹುತೇಕವು ಒಪ್ಪಿತ ನಾಪತ್ತೆ, ಅಂದರೆ ಪ್ರೀತಿ-ಪ್ರೇಮ, ಅನೈತಿಕ ಸಂಬ0ಧ ಇತ್ಯಾದಿ ವೈಯಕ್ತಿಕ ಕಾರಣಗಳಿಂದಾಗಿ ಮನೆ ಬಿಟ್ಟು ಹೋದವರಾಗಿದ್ದಾರೆ. ಬೆರಳೆಣಿಕೆಯಷ್ಟು ಪ್ರಕರಣಗಳಲ್ಲಿ ಅಪಹರಣದ ಶಂಕೆ ಇದ್ದು, ಇನ್ನೂ ಕೆಲವು ಮಾನಸಿಕವಾಗಿ ಅಸ್ವಸ್ಥಗೊಂಡು ನಾಪತ್ತೆಯಾದವರಾಗಿದ್ದಾರೆ ಎನ್ನುತ್ತವೆ ಪೊಲೀಸ್ ಮೂಲಗಳು.

50ಕ್ಕೂ ಹೆಚ್ಚು ಮಂದಿ ಇನ್ನೂ ಪತ್ತೆ ಇಲ: 2021ರ ವರ್ಷ ಮುಗಿಯಲು ಇನ್ನೂ ಒಂದು ತಿಂಗಳು ಬಾಕಿ. ಆದರೆ ಪ್ರಸ್ತುತ ನವೆಂಬರ್ ತಿಂಗಳನ್ನು ಹೊರತುಪಡಿಸಿ ಜನವರಿಯಿಂದ ಅಕ್ಟೋಬರ್ ವರೆಗೆ 232 ಪ್ರಕರಣ ದಾಖಲಾಗಿದೆ. ಇದು ಹತ್ತು ತಿಂಗಳ ಅಂಕಿ-ಅ0ಶವಾದರೆ, ನವೆಂಬರ್ ಒಂದೇ ತಿಂಗಳಲ್ಲಿ 20ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ ಎನ್ನುತ್ತವೆ ಪೊಲೀಸ್ ಮೂಲಗಳು. ಈ ಹತ್ತು ತಿಂಗಳಲ್ಲಿ ದಾಖಲಾದ 232 ಪ್ರಕರಣಗಳ ಪೈಕಿ 194 ಮಂದಿ ಪತ್ತೆಯಾಗಿದ್ದಾರೆ. 38 ಮಂದಿಯದ್ದು ಇನ್ನೂ ಸುಳಿವಿಲ್ಲ. ಇನ್ನು ಈ ತಿಂಗಳಿನದ್ದೂ ಸೇರಿದರೆ 50ಕ್ಕೂ ಹೆಚ್ಚು ಮಂದಿ ಎಲ್ಲಿದ್ದಾರೆ, ಹೇಗೆ ನಾಪತ್ತೆಯಾಗಿದ್ದಾರೆಂಬ ಕಾರಣವೇ ನಿಗೂಢವಾಗಿದೆ.

ಲಾಕ್ ಡೌನ್ ಎಫೆಕ್ಟ್: ಈ ನಾಪತ್ತೆ ಪ್ರಕರಣಗಳಲ್ಲಿ ವಿವಾಹಿತ ಮಹಿಳೆಯರು, ಶಾಲಾ- ಕಾಲೇಜು ಯುವತಿಯರು ಹೆಚ್ಚಾಗಿದ್ದು, ಇದಕ್ಕೆ ಸಾಮಾಜಿಕ ಜಾಲತಾಣಗಳೇ ಹೆಚ್ಚು ಕಾರಣವಾಗಿದೆ. ಫೇಸ್ ಬುಕ್, ವಾಟ್ಸಪ್ ನಂಥ ಸಾಮಾಜಿಕ ಜಾಲತಾಣಗಳಲ್ಲಿ ಪ್ರೀತಿಯ ಬಲೆಗೆ ಬಿದ್ದು ಮನೆ ತೊರೆದವರು ಹೆಚ್ಚಿದ್ದು, ಕೋವಿಡ್ ಲಾಕ್ ಡೌನ್ ಕಾರಣದಿಂದಾಗಿ ಸಾಮಾಜಿಕ ಜಾಲತಾಣಗಳ ಬಳಕೆ ಅತಿಯಾಗಿರುವುದು ಇದಕ್ಕೆಲ್ಲ ಕಾರಣ ಎನ್ನುತ್ತವೆ ಬಲ್ಲ ಮೂಲಗಳು.

ಪೊಲೀಸ್ ವರಿಷ್ಠಾಧಿಕಾರಿಗಳು ಏನಂತಾರೆ: ಇನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ ಪೆನ್ನೇಕರ್ ಅವರು ವರ್ಗಾವಣೆಗೊಂಡು ಜಿಲ್ಲೆಗೆ ನಿಯುಕ್ತಿಗೊಂಡು ಅರ್ಧ ತಿಂಗಳಾಗಿದೆ. ನಾಪತ್ತೆ ಪ್ರಕರಣಗಳ ಬಗ್ಗೆ ಅಧೀನ ಅಧಿಕಾರಿಗಳಿಂದ ಮಾಹಿತಿ ಪಡೆದಿರುವ ಅವರು, ಇನ್ನೂ ಪತ್ತೆಯಾಗದವರ ಬಗ್ಗೆ ಅಧ್ಯಯನ ನಡೆಸಿದ್ದಾರೆ. ನಾಪತ್ತೆ ಪ್ರಕರಣಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾನು ಬಂದ ಬಳಿಕ ಅಧಿಕಾರಿಗಳೊಂದಿಗೆ ಈ ಬಗ್ಗೆ ಚರ್ಚೆ ನಡೆಸಿದ್ದೇನೆ. ಇನ್ನೂ ಪತ್ತೆಯಾಗದ ಹಳೆಯ ಪ್ರಕರಣಗಳು ಸಾಕಷ್ಟಿವೆ ಎಂಬುದು ಗಮನಕ್ಕೆ ಬಂದಿದೆ. ಕೆಲವು ಪ್ರಕರಣಗಳಲ್ಲಿ ಮಹಿಳೆಯರು ಪರಿಚಿತರೊಂದಿಗೆ ನಾಪತ್ತೆಯಾಗಿರುವುದು ಇದೆ. ಇನ್ನೂ ಕೆಲವುದರಲ್ಲಿ ಯುವತಿಯರು ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯವಾದ ಅಪರಿಚಿತರೊಂದಿಗೆ ನಾಪತ್ತೆಯಾದ ಪ್ರಕರಣಗಳೂ ಇವೆ. ಹೀಗಾಗಿ ಹೆಚ್ಚು ವರ್ಷಗಳಿಂದ ಇನ್ನೂ ಪತ್ತೆಯಾಗದ ಪ್ರಕರಣಗಳಿಗೆ ಹೆಚ್ಚು ಮಹತ್ವ ನೀಡಿ, ಅವರನ್ನು ಪತ್ತೆ ಮಾಡುವ ಕಾರ್ಯ ಮಾಡಲಾಗುವುದು. ಜೊತೆಗೆ ಈ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನೂ ಮಾಡಲಾಗುವುದು ಎಂದರು.


Post a Comment

0 Comments

Ad Code

Responsive Advertisement