Ticker

6/recent/ticker-posts

Ad Code

Responsive Advertisement

ದೇಶದ ರೈತರು, ಕಾಂಗ್ರೆಸ್ ಮತ್ತು ವಿರೋಧ ಪಕ್ಷಗಳಿಗೆ ದೊರೆತ ಜಯ

ರೈತರನ್ನು ಖಲಿಸ್ತಾನಿ ಉಗ್ರರು - ದೇಶದ್ರೋಹಿಗಳು-ನಕಲಿ ರೈತರು - ಲಾಬಿ ಗುಂಪುಗಳ ಏಜೆಂಟರು ಎಂದು ಕರೆದಿದ್ದ ಬಿಜೆಪಿ ನಾಯಕರು ಪಂಚರಾಜ್ಯಗಳ ಚುನಾವಣಾ ಸೋಲಿನ ಭೀತಿಯಲ್ಲಿ ಕೃಷಿ ಕಾಯ್ದೆ ಹಿಂಪಡೆದ ಮೋದಿ ಸರ್ಕಾರ : ಕೆಪಿಸಿಸಿ ವಕ್ತಾರ ಡಿ. ಬಸವರಾಜ್  ಐದು ರಾಜ್ಯಗಳ ಚುನಾವಣೆ ಉದ್ದೇಶದಿಂದ ಕೃಷಿ ಕಾಯ್ದೆಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಕೈಬಿಟ್ಟಿದ್ದಾರೆಯೇ ಹೊರತು ರೈತರ ಮೇಲಿನ ಗೌರದಿಂದಲ್ಲಾ ರೈತರು, ಬಡವರು, ಕಾರ್ಮಿಕರು, ಹಿಂದುಳಿದವರ ಬಗ್ಗೆ ಪ್ರಧಾನಿ ಮೋದಿ ಹಾಗೂ ಬಿಜೆಪಿಗೆ ಕನಿಷ್ಟ ಕಾಳಜಿ ಇಲ್ಲವೆಂದು ಕೆಪಿಸಿಸಿ ವಕ್ತಾರರು ಹಾಗೂ ರೇಷ್ಮೆ ನಿಗಮದ ಮಾಜಿ ಅಧ್ಯಕ್ಷರಾದ ಡಿ. ಬಸವರಾಜ್ ಮೋದಿ ನಡೆಯನ್ನು ಟೀಕಿಸಿದ್ದಾರೆ. 

ಇತ್ತೀಚೆಗೆ ನಡೆದ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಆದ ಸೋಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಬಾರಿ ಆಘಾತ ನೀಡಿದೆ. ಕೃಷಿ ಕಾಯ್ದೆಗಳು ಹಿಂದಿ ಭಾಷಿಕರ ರಾಜ್ಯಗಳ ಚುನಾವಣೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯನ್ನು ಗುಪ್ತಚರ ಇಲಾಖೆಗಳ ವರದಿಯಿಂದ ಮನಗಂಡ ನಂತರ ಇದೀಗ ಕೃಷಿ ಕಾಯ್ದೆಗಳನ್ನು ಕೈಬಿಡುವ ನಿರ್ಧಾರ ಪ್ರಕಟಿಸಿದ್ದಾರೆಂದು ಅವರು ತಿಳಿಸಿದರು.  

ಕಳೆದ ಒಂದು ವರ್ಷಕ್ಕೂ ಅಧಿಕ ದಿನಗಳಿಂದ ಅನ್ನದಾತರು ಮಳೆ, ಚಳಿ, ಬಿಸಿಲು ಎನ್ನದೇ  ತಮ್ಮ ಹಕ್ಕುಗಳಿಗಾಗಿ ಬೀದಿಗೆ ಬಿದ್ದು ಹೋರಾಟ ನಡೆಸಿದರು. ಮುಷ್ಕರ ನಿರತ ರೈತರನ್ನು   ಖಲಿಸ್ತಾನಿ ಉಗ್ರರು - ದೇಶದ್ರೋಹಿಗಳು-ನಕಲಿ ರೈತರು - ಲಾಬಿ ಗುಂಪುಗಳ ಏಜೆಂಟರು ಎಂದು ಕರೆದಿದ್ದ ಬಿಜೆಪಿ ನಾಯಕರು ಪಂಚರಾಜ್ಯಗಳ ಚುನಾವಣಾ ಸೋಲಿನ ಭೀತಿಯಲ್ಲಿ ಕೃಷಿ ಕಾಯ್ದೆ ಹಿಂಪಡೆದ ಮೋದಿ ಸರ್ಕಾರದ ನಾಟಕವಾಗಿದೆ ಇಂದು ಪ್ರಧಾನಿ ನರೇಂದ್ರ ಮೋದಿ ರೈತರ ಕ್ಷಮೆ ಕೇಳುವ ಮೂಲಕ ಅಧಿಕಾರದ ಕುರ್ಚಿಗಾಗಿ ಹಂಬಲಿಸುತ್ತಿದ್ದಾರೆ. ಅಧಿಕಾರ ದೊರೆತ ನಂತರ ಇದಕಿಂತಲೂ ಕರಾಳ ಕಾಯ್ದೆಗಳನ್ನು ತರುತ್ತಾರೆಂದು ಡಿ. ಬಸವರಾಜ್ ದೂರಿದರು. 

ಚಳುವಳಿ ನಿರತ 700ಕ್ಕೂ ಅಧಿಕ ಹುತ್ಮಾತ ರೈತರ ಬಲಿದಾನ ಹೊಣೆಯನ್ನು ಮೋದಿ ಸರ್ಕಾರ  ಹೋರಲೇ ಬೇಕು ಹುತ್ಮಾತ ರೈತ ಕುಟುಂಬಗಳಿಗೆ ಕನಿಷ್ಟ ತಲಾ ರೂ. ಇಪ್ಪತ್ತೆöÊದು ಲಕ್ಷ ಪರಿಹಾರವನ್ನು ನೀಡಲೇಬೇಕು. ಜೊತೆಗೆ ಮೃತ ರೈತರ ಕುಟುಂಬಗಳ ಕ್ಷಮೆಯಾಚಿಸಬೇಕೆಂದು ಅವರು ಆಗ್ರಹಿಸಿದ್ದಾರೆ. ರೈತರ ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆಯನ್ನು ವೈಜ್ಞಾನಿಕವಾಗಿ ನಿಗದಿಪಡಿಸುವ ಶಾಶ್ವತ ಆಯೋಗವನ್ನು 

ಸರ್ಕಾರ ರಚಿಸಬೇಕು. ಆ ಆಯೋಗದಲ್ಲಿ ರೈತರ ಪ್ರತಿನಿಧಿಗಳು, ಕೃಷಿ ವಿಜ್ಞಾನಿಗಳು, ಕೃಷಿ ಆರ್ಥಿಕ ತಜ್ಞರನ್ನು  ಕೃಷಿ ಆಯೋಗದ ಸದಸ್ಯರನ್ನಾಗಿ ನೇಮಿಸಬೇಕು. ಕೃಷಿ ಹಂಗಾಮಿನಲ್ಲಿ ರೈತರ ಬೆಳೆಗಳು ಕಟಾವಿಗೆ ಬರುವ ಮುನ್ನ ಕನಿಷ್ಟ ಬೆಂಬಲ ಬೆಲೆಯನ್ನು ಎಲ್ಲಾ ರೀತಿಯ ಬೆಳೆಗಳಿಗೆ ದೇಶಾದ್ಯಂತ ಘೋಷಿಸಬೇಕು. 

ಎಣ್ಣೆಕಾಳುಗಳು, ಆಹಾರ ಧಾನ್ಯಗಳು, ಹಣ್ಣು ತರಕಾರಿ, ಕಬ್ಬು, ಭತ್ತ, ತೋಟಗಾರಿಕಾ ಬೆಳೆಗಳು, ಪ್ಲಾಟೇಷನ್ ಬೆಳೆಗಳಾದ ಕಾಫಿ, ಯಾಲಕ್ಕಿ, ಸಾಂಬಾರು ಪದಾರ್ಥ ಸೇರಿದಂತೆ ಎಲ್ಲಾ ಬೆಳೆಗಳನ್ನು ಕನಿಷ್ಟ ಬೆಂಬಲ ಬೆಲೆಯ ಆಯೋಗದ ವ್ಯಾಪ್ತಿಗೆ ತರಬೇಕು. ಶಿಘ್ರವಾಗಿ ಹಾಳಾಗುವ ಹಣ್ಣು, ಟೊಮೊಟೊ, ತರಕಾರಿ ಬೆಳೆಗಳ ಸಂಸ್ಕರಣ ಘಟಕಗಳನ್ನು ಆರಂಭಿಸಿ ಕೃಷಿಕರ ನೆರವಿಗೆ ಬರಬೇಕು. ಇಂತಹ ವೈಜ್ಞಾನಿಕ ಕ್ರಮಗಳನ್ನು ಕೈಗೊಳ್ಳದೇ ಚುನಾವಣಾ ಉದ್ದೇಶದಿಂದ ಗಿಮಿಕ್‌ಗಳ ಮೂಲಕ ಮತದಾರರನ್ನು ಮರಳು ಮಾಡಲು ಹೊರಟರೇ ಬಿಜೆಪಿಯು ಮನೆಗೆ ಹೊಗುವ ಕಾಲ ದೂರವಿಲ್ಲ. 

ಮೋದಿ ಮಿತ್ರರಾದ ಅಂಬಾನಿ, ಆದಾನಿ ತರಹದ ಉದ್ಯಮಿಗಳ ಹಿತಾಸಕ್ತಿಯನ್ನು ಕಾಪಾಡಲು ದೇಶ ವಾಸಿಗಳನ್ನು ಬೆಲೆ ಏರಿಕೆ ಸುಳಿಗೆ ಸಿಲುಕಿಸಿದ್ದ ಮೋದಿಯವರಿಗೆ ಚುನಾವಣಾ ಸೋಲಿನ ಬಯ ಕಾಡುತ್ತಿದೆ. ಆದುದರಿಂದಲೇ ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ಭರ್ಜರಿ ನಾಟಕವನ್ನು ಆಡುತ್ತಿದ್ದಾರೆಂದು ಟೀಕಿಸಿದರು. 

ದೇಶದಲ್ಲಿ ಜಾರಿಗೆ ಬಂದಿರುವ ಜಿ.ಎಸ್.ಟಿ. ಕಾಯ್ದೆಯು ಅವೈಜ್ಞಾನಿಕವಾಗಿದೆ ಇದನ್ನು ಸರಿಪಡಿಸಬೇಕು ಜೊತೆಗೆ ಜೆಎಸ್‌ಟಿಯಿಂದ ಸಂಗ್ರಹವಾದ ಹಣವನ್ನು ನ್ಯಾಯಸಮ್ಮತವಾಗಿ ರಾಜ್ಯಗಳಿಗೆ ಒಕ್ಕೂಟ ಸರ್ಕಾರ ನೀಡಬೇಕು ಹೆಚ್ಚು ಜಿಎಸ್‌ಟಿ ನೀಡುವ ರಾಜ್ಯಗಳಿಗೆ ಹೆಚ್ಚಿನ ಹಣವನ್ನು ನೀಡಬೇಕು. ತಾರತಮ್ಯ ನೀತಿ ಅನುಸರಿಸಿದರೆ ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾಗಲಿದೆ 

ಕಳೆದ 7 ವರ್ಷಗಳಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ನೋಟ್ ಅಮಾನ್ಯಕರಣ, ಜಿಎಸ್‌ಟಿ, ಕೃಷಿ ಕಾಯ್ದೆಗಳು ಮತ್ತು ಕಾರ್ಮಿಕ ಕಾಯ್ದೆಗಳು ಸೇರಿದಂತೆ ಎಲ್ಲಾ ಕಾಯ್ದೆಗಳು ಜನವಿರೋಧಿ ಕಾಯ್ದೆಗಳಾಗಿವೆ ಎಂದು ಕಾಂಗ್ರೆಸ್ ಟೀಕಿಸಿದೆ. 

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸಂಕಟ ಬಂದಾಗ ವೆಂಕಟರಮಣ ಎಂದು ಕೃಷಿ ಕಾಯ್ದೆಗಳನ್ನು ಹಿಂಪಡೆಯುತ್ತಿದ್ದಾರೆ. ಆದರೆ ಅವರು ಕುರ್ಚಿ ಹಿಡಿದ ನಂತರ ಇದಕ್ಕಿಂತಲೂ ಕರಾಳ ಕಾಯ್ದೆಗಳನ್ನು ಜಾರಿಗೊಳಿಸುತ್ತಾರೆ. ಇದಕ್ಕೆ ಪರಿಹಾರವೆಂದರೆ ದೇಶದ ಜನತೆ ಮೋದಿಯನ್ನು ಅಧಿಕಾರದಿಂದ ಇಳಿಸಿದಾಗ ಮಾತ್ರ ಭಾರತ ದೇಶ ಉದ್ದಾರವಾಗುತ್ತದೆಂದು ಡಿ. ಬಸವರಾಜ್ ಅಭಿಪ್ರಾಯ ಪಟ್ಟರು. 

ಕೃಷಿ ಕಾಯ್ದೆ ಹಿಂಪಡೆದ ಮೋದಿಗೆ ಕಪಾಳ ಮೋಕ್ಷವಾಗಿದೆ : ಕೆ. ಚಮನ್‌ಸಾಬ್

ದಾವಣಗೆರೆ ಮಹಾನಗರಪಾಲಿಕೆಯ ಹಿರಿಯ ಸದಸ್ಯ ಕೆ. ಚಮನ್‌ಸಾಬ್‌ರವರು ಮಾತನಾಡಿ ಭಾರತ ದೇಶ ಜಗತ್ತಿನಲ್ಲಿಯೇ ಅತ್ಯುನ್ನತ ಸವಿಂಧಾನವನ್ನು ಹೊಂದಿದ್ದು, ವಿವಿಧತೆಯಲ್ಲಿ ಏಕತೆ ಹೊಂದಿರುವ ದೇಶವಾಗಿದೆ ಎಂದು ತಿಳಿಸಿದ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಒಂದು ವರ್ಗದ ಜನರಿಗಾಗಿ ಕೃಷಿ ಕಾಯ್ದೆಗಳನ್ನು ಜಾರಿಗೆ ತಂದರು. ರೈತರ ಅಡಿಗೆ ಮುಳ್ಳು ಹಾಕಿದರು. ಬಿಜೆಪಿ ಜನರನ್ನು ಬಿಟ್ಟು ದೆಹಲಿಯ ಕೆಂಪುಕೋಟಿಯ ಮೇಲೆ ಧ್ವಜವನ್ನು ಹಾರಿಸಿ ರೈತರಿಗೆ ಕೆಟ್ಟ ಹೆಸರು ತರಲು ಹವಣಿಸಿದರು. ಇದೀಗ ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ಮೂಲಕ ದುರಂಕಾರಿ ಪ್ರಧಾನಮಂತ್ರಿ ಕೃಷಿಕಾಯ್ದೆಗಳನ್ನು ಹಿಂಪಡೆದಿದ್ದರು ಸಹ ಅವರಿಗೆ ಕಾಪಾಳ ಮೋಕ್ಷವಾಗಿದೆ ದೇಶದ ಜನರು ಮೋದಿಯವರನ್ನು ಇದೀಗ ಗೌರವಿಸುತ್ತಿಲ್ಲ ಎಂದು ಅವರು ತಿಳಿಸಿದರು. 

ರೈತರ ಹಾಗು ಎಪಿಎಂಸಿ ಸಂಬ0ಧ ಅಪ್ಪಾ ಮಕ್ಕಳ ಸಂಬAಧದ ರೀತಿಯಲ್ಲಿತ್ತು.

ಬಹುರಾಷ್ಟಿçಯ ಕಂಪನಿಯಗಳಿಗೆ ಲಾಭ ಮಾಡಲು ತಂದ ಕಾಯ್ದೆಗಳಾಗಿದ್ದವು : 

ಜಿ.ಎಸ್. ಮಂಜುನಾಥ ಗೌಡ 

ದಾವಣಗೆರೆ ಮಹಾನಗರಪಾಲಿಕೆಯ ಸದಸ್ಯರಾದ ಜಿ.ಎಸ್. ಮಂಜುನಾಥಗೌಡ ಗಡಿಗೂಡಾಳ್ ಇವರು ಮಾತನಾಡಿ ಭಾರತ ದೇಶದಲ್ಲಿ ರೈತರು ಹಾಗೂ ಎಪಿಎಂಸಿಯ ಸಂಬAಧ ಅಪ್ಪಾಮಕ್ಕಳ ಸಂಬAಧದ ರೀತಿಯಲ್ಲಿತ್ತು. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕರಾಳ ಕೃಷಿ ಕಾಯ್ದೆಗಳನ್ನು ಬಹುರಾಷ್ಟಿçಯ ಕಂಪನಿಗಳಿಗೆ ಲಾಭ ಮಾಡಲು ತಂದ ಕಾಯ್ದೆಗಳಾಗಿದ್ದವು. ರೈತರಿಗೆ ತಾವು ಬೆಳೆಗಳಿಗೆ ಸೂಕ್ತ ಬೆಲೆ ಸರ್ಕಾರ ನಿಗಧಿಪಡಿಸಬೇಕು 10 ವರ್ಷಗಳ ಹಿಂದೆ ರೈತರು ಬಳಸುವ ಡಿಸೇಲ್ ದರ ಈಗಿನ ದರ ತುಲಾನೆ ಮಾಡಬೇಕು. ಗೊಬ್ಬರ ಹಾಗೂ ಬೀಜದ ದರಗಳು ಈ ಮೊದಲು ಯಾವ ದರದಲ್ಲಿ ದೊರೆಯುತ್ತಿದ್ದವು. ಈಗಿನ ದರ ಏನಾಗಿದೆ ಎಂಬ ಬಗ್ಗೆ ಸರ್ಕಾರ ಚಿಂತನೆ ಮಾಡಬೇಕು. ನಂತರ ಸೂಕ್ತ ಬೆಲೆಯನ್ನು ನಿಗಧಿಪಡಿಸಬೇಕೆಂದು ಅವರು ಒತ್ತಾಯಿಸಿದರು. 

ಪತ್ರಿಕಾಗೋಷ್ಠಿಯಲ್ಲಿ ದಾವಣಗೆರೆ ಮಹಾನಗರಪಾಲಿಕೆಯ ಹಿರಿಯ ಸದಸ್ಯರುಗಳಾದ ಕೆ. ಚಮನ್ ಸಾಬ್ ಹಾಗೂ ಜಿ.ಎಸ್. ಮಂಜುನಾಥಗೌಡ ಗಡಿಗೂಡಾಳ್, ಕಾಂಗ್ರೆಸ್ ಮುಖಂಡರಾದ ಭಾರತ್ ಕಾಲೋನಿಯ ಜಗದೀಶ್, ಆರ್.ಬಿ.ಝಡ್ ಬಾಷಾ, ದಾದಾಪೀರ್, ಮಹೇಶ್, ಇತರರು ಹಾಜರಿದ್ದರು. 


Post a Comment

0 Comments

Ad Code

Responsive Advertisement