Ticker

6/recent/ticker-posts

Ad Code

Responsive Advertisement

ವಿದ್ಯಾರ್ಥಿ ಜೀವನದಲ್ಲಿ ಶಿಸ್ತನ್ನು ಅಳವಡಿಸಿಕೊಂಡು ವಿಧ್ಯಾಭ್ಯಾಸ ಮಾಡಬೇಕು

ಮಧುಗಿರಿ :ವಿದ್ಯಾರ್ಥಿ ಜೀವನದಲ್ಲಿ ಶಿಸ್ತನ್ನು ಅಳವಡಿಸಿಕೊಂಡು ವಿಧ್ಯಾಭ್ಯಾಸ ಮಾಡಬೇಕು ಎಂದು ಸಿಪಿಐ ಎಂ.ಸರ್ದಾರ್ ತಿಳಿಸಿದರು.  ಪಟ್ಟಣದ ಪುರಸಭೆ ಆವರಣದಲ್ಲಿರುವ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಮೌಲಾನಾ ಆಜಾದ್ ಮಾದರಿ ಶಾಲೆಯ ವತಿಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಐಕ್ಯತಾ ಸಪ್ತಾಹ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಸಿಪಿಐ ಎಂ.ಎಸ್ ಸರ್ದಾರ್ ರವರು ವಿದ್ಯೆ ಸಾದಕನ ಸ್ವತ್ತೇ ಹೊರತು ಸೋಮಾರಿಗಳ ಸ್ವತ್ತಲ್ಲ. ವಿದ್ಯಾರ್ಥಿ ಜೀವನ ಬಹಳಷ್ಟು ಅಮೂಲ್ಯವಾದುದು. ಪ್ರತಿಯೊಬ್ಬರೂ ತಮ್ಮ ವಿದ್ಯಾರ್ಥಿ ಜೀವನದಲ್ಲಿ ಶಿಸ್ತನ್ನು ಅಳವಡಿಸಿಕೊಂಡು ವಿಧ್ಯಾಭ್ಯಾಸ ಮಾಡಿದಲ್ಲಿ ಮಾತ್ರ ಯಶಸ್ಸು ಸಾಧ್ಯ ಎಂದರು.



ಜಿಲ್ಲಾ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ ಶಬ್ಬೀರ್ ಅಹಮದ್ ಮಾತನಾಡಿ ಅಲ್ಪ ಸಂಖ್ಯಾತರ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಈ ಯೋಜನೆಯನ್ನು ಸದುಪಯೋಗಪಡಿಸಿಕೊಂಡು ಯಶಸ್ಸು ಗಳಿಸಿ ಎಂದರು.   ಮಹಿಳಾ ಮತ್ತು ಕಲ್ಯಾಣ ಇಲಾಖೆಯ ನೇತ್ರಾವತಿ ಮಾತನಾಡಿ      ದೌರ್ಜನ್ಯದಿಂದ ಮುಕ್ತಿ  ಅಂದರೆ ಏನು ಹಾಗೆ ಸಮಾಜದಲ್ಲಿ ಯಾವ ರೀತಿ ದೌರ್ಜನ್ಯ ಆಗುತ್ತಿದೆ  ಅದರಲ್ಲೂ ಮುಖ್ಯವಾಗಿ ಮಹಿಳೆಯರ ಮೇಲೆ ಮಾನಸಿಕವಾಗಿ, ದೈಹಿಕವಾಗಿ, ಭಾವನಾತ್ಮಕವಾಗಿ, ಲೈಂಗಿಕವಾಗಿ, ಹಿಂಸೆ ಆಗುತ್ತಾ ಇದ್ದು ಅದರಿಂದ ಮುಕ್ತಿ ಹೊಂದುವುದು ಹೇಗೆ ಈ ದೌರ್ಜನ್ಯ ಎಂಬುವುದು ಮಹಿಳೆಯರ ಮೇಲೆ ಅಲ್ಲದೆ ಪುರುಷರ ಮೇಲೆ ಕೂಡ ಆಗುತ್ತಿದೆ ಇದರಿಂದ ಮುಕ್ತಿ ಹೊಂದುವುದು ಹೇಗೆ ಎನ್ನುವುದರ ಬಗ್ಗೆ ತಿಳಿಸಿದರು.   ಕಾರ್ಯಕ್ರಮದಲ್ಲಿ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ತಾಲೂಕು ವಿಸ್ತರಣಾಧಿಕಾರಿ ತಿಪ್ಪೇಸ್ವಾಮಿ, ಮೌಲಾನಾ ಆಜಾದ್ ಶಾಲೆಯ ಮುಖ್ಯ ಶಿಕ್ಷಕ ಸಿ. ಗುರುಮೂರ್ತಿ, ಹಾಸ್ಟೆಲ್ ವಾರ್ಡನ್ ಗಳಾದ ವಿ.ಪಿ. ವೆಂಕಟೇಶ್, ಉಮಾಶಂಕರ್, ಅನಿತಾಲಕ್ಷ್ಮೀ, ಶೃತಿ,  ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಸಿಬ್ಬಂದಿ ಇದ್ದರು.

Post a Comment

0 Comments

Ad Code

Responsive Advertisement