Ticker

6/recent/ticker-posts

Ad Code

Responsive Advertisement

ಯಶವಂತಪುರ: ಕಾರ್ಮಿಕ ಇಲಾಖೆಯಿಂದ ಕಟ್ಟಡ ಕಾರ್ಮಿಕರಿಗೆ ಆರೋಗ್ಯ ಶಿಬಿರ

 ಬೆಂಗಳೂರು : ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ವತಿಯಿಂದ ಯಶವಂತಪುರದ ಕೆ.ಎನ್.ಎಕ್ಸ್ ಟೆನ್ಶನ್ ನಲ್ಲಿ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಮತ್ತು ಅವರ ಕುಟುಂಬದವರಿಗೆ ಕಟ್ಟಡ ಕಾರ್ಮಿಕ ಮಂಡಳಿ ಉಪ ವಿಭಾಗ -01 ರವರ ಸಹಯೋಗದೊಂದಿಗೆ ಉಚಿತ 3 ದಿನಗಳ ಆರೋಗ್ಯ ಶಿಬಿರವನ್ನು ಆಯೋಜಿಸಲಾಗಿದ್ದು, ಸಂಘದ ಗೌರವಾಧ್ಯಕ್ಷ  ಎನ್.ಶಂಕರ್ ರೆಡ್ಡಿರವರು ಉದ್ಘಾಟನೆ ಮಾಡಿದರು. 

ಈ ಸಂದರ್ಭದಲ್ಲಿ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಪೂರ್ಣಿಮ ಕೆ.ಬಿ., ರಾಜ್ಯ ಪ್ರಧಾನ ಕಾರ್ಯದರ್ಶಿ ಶುಭ ರೆಡ್ಡಿ,  ರಾಜ್ಯ ಸಂಘಟನಾ ಕಾರ್ಯದರ್ಶಿ ಪುರುಷೋತ್ತಮ  ರೆಡ್ಡಿ, ರಾಜ್ಯ ಯುವ ಪ್ರಧಾನ ಕಾರ್ಯದರ್ಶಿ  ಶ್ರೀನಿವಾಸ ವಿ., ಬೆಂಗಳೂರು ನಗರ ಜಿಲ್ಲಾ  ಅಧ್ಯಕ್ಷ ಕೆ.ಪಿ. ವೇಣುಗೋಪಾಲ ರೆಡ್ಡಿ,  ಬೆಂಗಳೂರು ನಗರ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಆರ್. ಗೋವಿಂದರಾಜು, ಬೆಂಗಳೂರು ನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವಿ ಗಣೇಶ್  ಮುಂತಾದವರು ಉಪಸ್ಥಿತರಿದ್ದರು.

Post a Comment

0 Comments

Ad Code

Responsive Advertisement