ನವೆಂಬರ್ 16, ಬೆಂಗಳೂರು: ಸತತವಾಗಿ ಸುರಿಯುತ್ತಿರುವ ಮಳೆಗೆ ಬಯಲುಸೀಮೆ ಜಿಲ್ಲೆಗಳಾದ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರಗಳು ಮಲೆನಾಡಿನಂತಾಗಿವೆ. ಕಲ್ಲುಬಂಡೆಗಳಿಂದ ಆವೃತ್ತವಾಗಿದ್ದ ಇಲ್ಲಿನ ಬೆಟ್ಟಗಳು ಉತ್ತಮ ಮಳೆಯ ಪರಿಣಾಮ ಹಸಿರಿನ ಕಾನನದಂತೆ ಕಾಣುತ್ತಿದೆ. ಜಲಧಾರೆಗಳಿಗೆ ಜೀವಕಳೆ ಬಂದಿದೆ. ಪ್ರವಾಸಿಗರಿಗೆ ಬಯಲುಸೀಮೆಯ ತಾಣಗಳ ಕೈಬೀಸಿ ಕರೆಯುತ್ತಿವೆ.
ನಂದಿಬೆಟ್ಟ, ಚನ್ನಗಿರಿ ಬೆಟ್ಟಗಳಲ್ಲಿ 5 ನದಿಗಳ ಉಗಮವಾಗುತ್ತವೆ. ನಂತರ ಮುಂದಿನ ಕೆರೆಗಳನ್ನು ತುಂಬಿಸಿಕೊಂಡು ಹರಿಯುತ್ತವೆ. ಈ ಬಾರಿ ಮಳೆಯಿಂದ ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೆರೆಗಳು ತುಂಬಿ ತುಳುಕುತ್ತಿವೆ. ಅನೇಕ ವರ್ಷಗಳಿಂದ ತುಂಬಿರದ ಕೆರೆಗಳು ಈ ಬಾರಿ ತುಂಬಿ ಕೋಡಿ ಹರಿದಿರುವ ಉದಾಹರಣೆಗಳು ಇದೆ.ಕೆರೆಗಳು ತುಂಬಿದರ ಪರಿಣಾಮವಾಗಿ ಪಕ್ಷಿಗಳು ಕೆರೆಗಳ ಕಡೆಗೆ ಧಾವಿಸುತ್ತಿದ್ದು ಕೆರೆಗಳು ಪಕ್ಷಿಧಾಮಗಳಂತೆ ಕಂಗೊಳಿಸುತ್ತಿವೆ.
ವಾರ್ತಾ ಜಾಲ

0 Comments