ಶ್ರೀ ವಿಜಯದಾಸರ ಆರಾಧನೆ ಪ್ರಯುಕ್ತ, ದಾಸವಾಣಿ ಸಂಸ್ಥೆ ಬೆಂಗಳೂರು ಇವರು ಆಯೋಜಿಸಿದ್ದ ಶ್ರೀ ವಿಜಯದಾಸರ ಗಾಯನ ಸ್ಪರ್ಧೆ ಮತ್ತು ದಾಸವಾಣಿ ಕಾರ್ಯಕ್ರಮ ದಿನಾಂಕ 13-11-2021 ರಂದು ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, ಶೇಷಾದ್ರಿಪುರಂ, ಬೆಂಗಳೂರಿನಲ್ಲಿ ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಡಾ ಎನ್ ಜಿ ವಿಜಯಲಕ್ಷ್ಮಿ ಅವರು ಮತ್ತು ಶ್ರೀ ನಾರಾಯಣ ಮೂರ್ತಿ ಅವರು ವೇದಿಕೆಯನ್ನು ಅಲಂಕರಿಸಿದರು.
ಕಾರ್ಯಕ್ರಮದಲ್ಲಿ ವಿಜಯದಾಸರ ಗಾಯನ ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಖ್ಯಾತ ಗಾಯಕರಿಂದ ದಾಸವಾಣಿ ಕಾರ್ಯಕ್ರಮ ನಡೆಯಿತು. ಮೊದಲಿಗೆ ಕುಮಾರಿ ದಿಶಾ ಪುರಾಣಿಕ್ ಅವರಿಂದ ಸ್ವಾಗತ ಗೀತೆ ಪ್ರಾರಂಭವಾಯಿತು, ನಂತರ ವಿದುಷಿ ಶ್ರೀಮತಿ ವಿಜಯ ಭಟ್, ಶ್ರೀಮತಿ ಮಾನಸ ಕುಲಕರ್ಣಿ, ಶ್ರೀಮತಿ ಸ್ರೋತಸ್ವಿನಿ, ಕುಮಾರಿ ಭಾವನಾ ಉಮೇಶ್, ಕುಮಾರಿ ವಾಣಿಶ್ರೀ R ಹಾಗು ಪೂರ್ಣಿಮಾ ಕುಲ್ಕರ್ಣಿ ಅವರು ಶ್ರೀ ವಿಜಯದಾಸರ ಹಾಡುಗಳನ್ನು ಹಾಡಿದರು. ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಪದ್ಮಜಾ ಪುರಾಣಿಕ್ ಮತ್ತು ಶ್ರೀಮತಿ ರಾಧಿಕಾ ಜೋಶಿ ಅವರು ನಿರ್ವಹಿಸಿದರು.
ಶ್ರೀಮತಿ ಶ್ರುತಿ ಯೋಗೇಶ್ ಮತ್ತು ಶ್ರೀಮತಿ ಉಮಾ ದೇಸಾಯಿ ಅವರ ಸಹಯೋಗದೊಂದಿಗೆ ವಿಜೇತರಿಗೆ ಶ್ರೀಮತಿ ಚಂದ್ರಿಕಾ ಗಿರೀಶ್,ಶ್ರೀ ಜಿ.ಹನುಮಂತರಾವ್, ಶ್ರೀ ವರದೇಂದ್ರ ಕೋಟಿ ಹಾಗು ಶ್ರೀಮತಿ ವನಜಾ ಕೋಟಿ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಕಾರ್ಯಕ್ರಮದ ಆಯೋಜಕರು, ದಾಸವಾಣಿ ಸಂಸ್ಥಾಪಕರಾದ ಶ್ರೀ ಸುಧೀಂದ್ರ ದೇಸಾಯಿ ಮತ್ತು ಶ್ರೀ ಜಯರಾಜ್ ಕುಲ್ಕರ್ಣಿ ಅವರು ಉಪಸ್ಥಿತರಿದ್ದರು. ತೀರ್ಥ ಪ್ರಸಾದದೊಂದಿಗೆ ಕಾರ್ಯಕ್ರಮ ಮುಕ್ತಾಯವಾಗಿತು.
0 Comments