Ticker

6/recent/ticker-posts

Ad Code

Responsive Advertisement

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಅಯೋಗಗಳ ಸಮ್ಮೇಳನ ಮಕ್ಕಳ ಮೇಲೆ ಕೋವಿಡ್ ಸಾಂಕ್ರಾಮಿಕ ಪರಿಣಾಮಗಳ ಬಗ್ಗೆ ಚರ್ಚೆ

ಕರ್ನಾಟಕ ರಾಜ್ಯ ಮಕ್ಕಳ  ಹಕ್ಕುಗಳ ರಕ್ಷಣಾ ಆಯೋಗವು ನವೆಂಬರ್ 11 ರಂದು “ದಕ್ಷಿಣ ಭಾರತದ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಗಳ ಸಮ್ಮೇಳನ -ಕೋವಿಡ್-19 ಸಾಂಕ್ರಾಮಿಕ  ರೋಗ ಹಾಗೂ ಮಕ್ಕಳ ಮೇಲೆ ಉಂಟಾದ ಪರಿಣಾಮಗಳ  ಕುರಿತ ಕಾರ್ಯಕ್ರಮದ ಉದ್ಘಾಟನೆಯನ್ನು ನವೆಂಬರ್ 08 ರಂದು ಬೆಳಿಗ್ಗೆ 10.00ಕ್ಕೆ ಹೊಟೆಲ್ ಕ್ಯಾಪಿಟಲ್, ರಾಜಭವನ ರಸ್ತೆ, ಬೆಂಗಳೂರು ಇಲ್ಲಿ ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಕ್ರಮದಲ್ಲಿ ನೆರೆಯ ರಾಜ್ಯಗಳಾದ ಗೋವಾ, ತೆಲಂಗಾಣ, ಮಹಾರಾಷ್ಟ ಮತ್ತು ಕೇರಳ ರಾಜ್ಯಗಳ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಗಳ  ಅಧ್ಯಕ್ಷರು ಮತ್ತು ಮಾನ್ಯ ಸದಸ್ಯರುಗಳು ಭಾಗವಹಿಸಿ, ಗಡಿ ಭಾಗದ ಮಕ್ಕಳ ಹಕ್ಕುಗಳ ಸಮಸ್ಯೆಗಳ ಕುರಿತು ಚರ್ಚಿಸಲಿದ್ದಾರೆ.  ಇದೇ ಕಾರ್ಯಕ್ರಮದಲ್ಲಿ ಆಯೋಗವು  ನವೆಂಬರ್ ಮಾಹೆಯನ್ನು  “ಮಕ್ಕಳ ಹಕ್ಕುಗಳ ಮಾಸಾಚರಣೆ”ನ್ನಾಗಿ ಆಚರಿಸುವ ನಿಟ್ಟಿನಲ್ಲಿ “ಸಾರ್ವಜನಿಕ ಅಹವಾಲು ವಿಚಾರಣಾ” ಕಾರ್ಯಕ್ರಮದ ಮೂಲಕ ಮಕ್ಕಳು ಸಾಂಕ್ರಾಮಿಕ ಸಂದರ್ಭದಲ್ಲಿ ಎದುರಿಸಿದ ¸ಮಸ್ಯೆಗಳು ಹಾಗೂ ಇನ್ನಿತರ ಮಕ್ಕಳ ಹಕ್ಕುಗಳ ಉಲ್ಲಂಘನೆಗೆ ಸಂಬAಧಪಟ್ಟ ಸಮಸ್ಯೆಗೆ ವ್ಯಕ್ತಪಡಿಸಲು ªಮಕ್ಕಳಿಗೆ ಸೂಕ್ತ ವೇದಿಕೆಯನ್ನು ಕಲ್ಪಿಸಿ ಕೊಡಲು ಚಿಂತನೆಯನ್ನು ನಡೆಸಿರುತ್ತದೆ. ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಿಂದ ನಡೆಸಿದ ಅಧ್ಯಯನಗಳ ವರದಿಗಳನ್ನು  ಬಿಡುಗಡೆ ಮಾಡಲಾಗುತ್ತದೆ

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ  ಇಲಾಖೆ ಹಾಗೂ UNICEF ಸಂಸ್ಥೆ , ಹೈದ್ರಾಬಾದ್ ಇವರುಗಳ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿರುತ್ತದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖಾ ಸಚಿವರು, ಸರ್ಕಾರದ ಮುಖ್ಯಕಾರ್ಯದರ್ಶಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ.


Post a Comment

0 Comments

Ad Code

Responsive Advertisement