ಬೆಂಗಳೂರು : ಕರ್ನಾಟಕ ರಾಜ್ಯ ಟ್ರಾನ್ಸ್‌ಪೋರ್ಟ್ ಮತ್ತು ಅರ್ಥ್ ಮೂವರ್ಸ ಅಸೋಸಿಯೇಶನ್ ವತಿಯಿಂದ ಯಶವಂತಪುರ ದೇವರಾಜ ಅರಸ್ ಟ್ರಕ್ & ಟರ್ಮಿನಲ್ ಪ್ರದೇಶದಲ್ಲಿ 10 ನೇ ವರ್ಷದ ಕನ್ನಡ ರಾಜ್ಯೋತ್ಸವ ಆಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಕನ್ನಡ ಧ್ವಜಾರೋಹಣವನ್ನು ಶ್ರೀ ಮೇಲಣಗವಿ ವೀರಸಿಂಹಾಸನ ಸಂಸ್ಥಾನ ಮಠ ಶಿವಗಂಗಾ ಕ್ಷೇತ್ರದ ಶ್ರೀ ಷ.ಬ್ರ. ಮಲಯಶಾಮುನಿ ಶಿವಾಚಾರ್ಯ ಮಹಾಸ್ವಾಮಿಗಳ ಸಾನಿದ್ಯದಲ್ಲಿ ಫೆಡರೇಷನ್ ಆಫ್ ಕರ್ನಾಟಕ ಲಾರಿ ಓನರ್ಸ್ & ಏಜೆಂಟ್ ಅಸೋಸಿಯೇಷನ್ ಅಧ್ಯಕ್ಷ ಜಿ.ಆರ್.ಷಣ್ಮುಗಂ, ಪೊಟ್ಯಾಟೂ ಕ್ಲಬ್ ನಿವೃತ್ತ ಸಾರಿಗೆ ಇಲಾಖೆ ಅಧ್ಯಕ್ಷ ಹೆಚ್.ಯೋಗರಮೇಶ್, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಜಿ.ಮರಿಸ್ವಾಮಿ, ಮಾಜಿ ಬಿ.ಬಿ.ಎಂ.ಪಿ. ಸದಸ್ಯ ನಾಗಭೂಷಣ್, ಸಂಘದ ಅಧ್ಯಕ್ಷ ರವಿಕುಮಾರ್ ರವರು ನೆರವೇರಿಸಿದರು. ಈ ಕಾರ್ಯಕ್ರಮದಲ್ಲಿ ಇತ್ತೀಚೆಗೆ ಅಗಲಿದ ಜನಪರ ನಾಯಕ ನಟ ಪುನೀತ್ ರಾಜಕುಮಾರ ಅವರ ಅಕಾಲಿಕ ಮರಣಕ್ಕೆ ಶ್ರದ್ಧಾಂಜಲಿಯನ್ನು ಸಮರ್ಪಣೆ ಮಾಡುವುದರೊಂದಿಗೆ ಸ್ವಯಂ ಪ್ರೇರಿತ ನೇತ್ರದಾನ ಮಾಡಲು ಇಚ್ಛಿಸುವವರಿಗೆ ಇಲ್ಲಿ ವ್ಯವಸ್ಥೆ ಕಲ್ಪಿಸುವ ಮೂಲಕ ಗಣ್ಯರು ಹಾಗೂ ಸಭಿಕರು ಸಭೆಯಲ್ಲಿ ಅಪ್ಪುರವರಿಗೆ ಗೌರವವನ್ನು ಸಲ್ಲಿಸಿದರು.
ಅಪೋಲೋ ಟೈರ್ಸ್ ಫೌಂಡೇಶನ್ ರವರ ಪ್ರಾಯೋಜಕತ್ವದಲ್ಲಿ ಸಾರ್ವಜನಿಕರಿಗೆ ಆರೋಗ್ಯ ಮತ್ತು ಕಣ್ಣಿನ ತಪಾಸಣಾ ಶಿಬಿರವನ್ನು, ಲಯನ್ಸ್ ಕ್ಲಬ್ ವಿಲ್ಸನ್ ಗಾರ್ಡನ್ ಸಹಯೋಗದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು, ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಬಿಬಿಎಂಪಿ ಮಾಜಿ ಉಪ ಮಹಾಪೌರರಾದ ಎಸ್.ಹರೀಶ್, ಕರ್ನಾಟಕ ರಾಜ್ಯ ಲಾರಿ ಮಾಲೀಕರ ಮಹಾ ಸಂಘದ ವಿಶ್ವನಾಥ್ ಮುಂತಾದವರೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
0 Comments