Ticker

6/recent/ticker-posts

Ad Code

Responsive Advertisement

ಯಶವಂತಪುರ ತ್ರಿವೇಣಿ ರಸ್ತೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ವಾರ್ಡ್‌ ನಂ.36 ರ ವ್ಯಾಪ್ತಿಯ ದಿವಾನರಪಾಳ್ಯದಲ್ಲಿ 66 ನೇ ಕನ್ನಡ ರಾಜ್ಯೋತ್ಸವ ಆಚರಣೆಯನ್ನು  ಯಶವಂತಪುರದ ತ್ರಿವೇಣಿ ರಸ್ತೆಯಲ್ಲಿರುವ  ಡಾ. ರಾಜಕುಮಾರ್ ರವರ ಪುತ್ಥಳಿ ಬಳಿ ಕನ್ನಡ ಧ್ವಜಾರೋಹಣವನ್ನು ಮಾಡುವ ಮೂಲಕ ಆಚರಿಸಲಾಯಿತು. ಇತ್ತೀಚೆಗೆ ನಿಧನರಾದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರಿಗೆ ಇದೇ ಸಂದರ್ಭದಲ್ಲಿ ಶ್ರದ್ಧಾಂಜಲಿಯ ಮೂಲಕ ಗೌರವ ಸಲ್ಲಿಸಲಾಯಿತು.   

ಕಾರ್ಯಕ್ರಮವನ್ನು  ಶ್ರೀ ಜಗದ್ಗುರು ಫೌಂಡೇಶನ್ ವ್ಯವಸ್ಥಾಪಕ ನಿರ್ದೇಶಕರುಗಳಾದ ಡಾ. ಜಿ.ಎಸ್.ಚೌಧರಿ ಹಾಗೂ ಎನ್.ಆರ್.ಪರಮೇಶ್ವರಯ್ಯನವರು ಆಯೋಜಿಸಿದ್ದರು.   ಈ ಸಂದರ್ಭದಲ್ಲಿ ಮಾಜಿ ಸ್ಥಳೀಯ ಪಾಲಿಕೆ ಸದಸ್ಯ ಜಯಪ್ರಕಾಶ್,  ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡರು ಹಾಗೂ ಮಾಜಿ ಪಾಲಿಕೆ ಸದಸ್ಯರರಾದ ವೇಲು ನಾಯಕರ್,  ಡಾ. ರಾಮಚಂದ್ರಪ್ಪ ಹೆಚ್.ಟಿ.

ಯೋಜನಾಧಿಕಾರಿಗಳು ಐ.ಐ.ಸಿ., ಖ್ಯಾತ ಚಿತ್ರನಟ ಗಣೇಶ್ ರಾವ್ ಕೇಸರ್ ಕರ್, ಕನ್ನಡ ಹೋರಾಟಗಾರರು ಕೆ.ಎಂ.ರಾಜಣ್ಣ, ಎಂ. ನಾಗರಾಜ್,  ಕಿಷನ್ ನಾಯಕ್ಎಂ., ಬೆಂಗಳೂರು ಹುಡುಗರು ತಂಡದ ಸದಸ್ಯರು ಗಿರೀಶ್, ಮಂಜುನಾಥ್ ಮುಂತಾದವರೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡ ಅಭಿಮಾನಿಗಳು   ಉಪಸ್ಥಿತರಿದ್ದರು.

Post a Comment

0 Comments

Ad Code

Responsive Advertisement