Ticker

6/recent/ticker-posts

Ad Code

Responsive Advertisement

CHRISTMAS 2021 - *ಕ್ರಿಸ್ ಮಸ್ ನ ಸ್ವಾದಿಷ್ಟ ಕೇಕ್ ಗೆ ಈಗಲೇ ಮಿಕ್ಸಿಂಗ್ ತಯಾರಿ*

ಸಂಭ್ರಮದ ಕ್ರಿಸ್ ಮಸ್ ಹಬ್ಬಕ್ಕೆ ಅದಾಗಲೇ ತಯಾರಿ ಶುರುವಾಗಿದ್ದು, ಪ್ರತಿಷ್ಠಿತ ವಿವಿಡಸ್ ಹೋಟೆಲ್ ಸಾಂಪ್ರದಾಯಿಕ ಮತ್ತು ವಿಶೇಷ ವಿಧಾನದಲ್ಲಿ ಸ್ವಾದಿಷ್ಟಪೂರ್ಣ ಕೇಕ್ ತಯಾರಿಗೆ ಮಿಕ್ಸಿಂಗ್ ಮಾಡುವ ಕಾರ್ಯಕ್ಕೆ ಚಾಲನೆ ನೀಡಿತು.

ವಿವಿಡಸ್ ಇದನ್ನೊಂದು ಸಡಗರದ ಕಾರ್ಯಕ್ರಮವಾಗಿಸುವ ಮೂಲಕ ಪ್ರಮುಖ ಚೆಫ್ ಗಳು, ಮೀಡಿಯಾ ಸ್ನೇಹಿತರು, ಕಾರ್ಪೊರೇಟ್ ವಲಯದ ಅತಿಥಿಗಳು ಸೇರಿದಂತೆ ಹೋಟೆಲ್ ನವರು ಕೂಡಾ ಬಾಣಿಸಗರಂತೆ ಉಡುಪು ಧರಿಸಿ ಹಿಗ್ಗಿನಿಂದ ಈ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು ಆಕರ್ಷಕವಾಗಿತ್ತು. ವಿಶಾಲ ಬೆರಿಕೆ ಪಾತ್ರೆಯಲ್ಲಿ ತಮ್ಮ, ತಮ್ಮದೇ ಶೈಲಿಯಲ್ಲಿ ಎಲ್ಲ ಅತಿಥಿಗಳು ಮಿಕ್ಸ್ ಮಾಡುವ ಶೈಲಿಯು ಈ ಕಾರ್ಯಕ್ಕೆ ಮತ್ತಷ್ಟು ರಂಗು ತುಂಬಿತು.

ಒಣದ್ರಾಕ್ಷಿ, ಕೆಂಪು ಚೆರ್ರಿಗಳು, ಕಿತ್ತಳೆ ಸಿಪ್ಪೆ, ಟೂಟಿ ಫ್ರೂಟಿ, ಬ್ಲಾಕ್ ಕರಂಟ್ಸ್, ಕರ್ಜೂರ, ಅಂಜೂರದ ಹಣ್ಣುಗಳು, ಒಣಗಿದ ಏಪ್ರಿಕಾಟ್ಗಳು, ಒಣದ್ರಾಕ್ಷಿ ಮತ್ತು ವಾಟ್ಸ್, ಗೋಡಂಬಿ, ಬಾದಾಮಿ ಚಕ್ಕೆಗಳು ಮತ್ತು ರುಚಿಕರ ಹಣ್ಣುಗಳು ಏಲಕ್ಕಿ, ದಾಲ್ಚಿನ್ನಿ ಮತ್ತು ಲವಂಗವನ್ನು ವಿಶಾಲ ಕಡಾಯಿಗೆ ಸುರಿಯಲಾಯಿತು. ನಂತರದಲ್ಲಿ ವಿಸ್ಕಿ, ಬಿಳಿ ಮತ್ತು ಗಾಢ ರಮ್, ವೋಡ್ಕಾ, ಜಿನ್, ವೈನ್, ಬಿಯರ್ ಮತ್ತು ಗೋಲ್ಡನ್ ಸಿರಪ್, ಮೊಲಾಸಸ್, ಜೇನುತುಪ್ಪ ಮತ್ತು ವೆನಿಲ್ಲಾ ಎಸೆನ್ಸ್‍ನಂತಹ ಸಿರಪ್‍ಗಳನ್ನು ಈ ಎಲ್ಲ ಪದಾರ್ಥಗಳೊಂದಿಗೆ ಮಿಶ್ರಣ ಮಾಡಲಾಯಿತು.

ಸಾಂಪ್ರದಾಯಿಕ ಕೇಕ್ ಮಿಕ್ಸಿಂಗ್ ಸಮಾರಂಭದ ನಂತರ, ಮಿಶ್ರಣವನ್ನು ಗಾಳಿಯಾಡದ ಚೀಲಗಳಲ್ಲಿ ಹಾಕಲಾಯಿತು. ಈ ಮಿಶ್ರಣವು ಕ್ರಿಸ್‍ಮಸ್‍ನ ತನಕ ಪಕ್ವವಾಗಲು ಬಿಡಲಾಗುತ್ತದೆ. ನಂತರ ಅದನ್ನು ಕೇಕ್ ತಯಾರಿಕೆಯ ಹಿಟ್ಟಿನೊಂದಿಗೆ ಬೆರೆಸಿ ಬೇಯಿಸಲಾಗುತ್ತದೆ.


ಇತ್ತೀಚಿನ ದಿನಗಳಲ್ಲಿ "ಕೇಕ್ ಮಿಕ್ಸಿಂಗ್" ಒಂದು ಸಂಭ್ರಮದ ಆಚರಣೆಯಾಗಿ ಬದಲಾಗಿದೆ. ಸಾಕಷ್ಟು ಆಸಕ್ತರು ಕೂಡಾ ಈ ಕಾರ್ಯಕ್ರಮಕ್ಕಾಗಿಯೇ ಎದುರು ನೋಡುವುದು ಇದೆ. ಈ ಬಾರಿ ವಿವಿಡಸ್ ಹೋಟೆಲ್ ಈ ಸಂಭ್ರಮವನ್ನು ಕೈಗೊಳ್ಳುವ ಮೂಲಕ ಮರೆಯಲಾಗದ ಸಂತಸದ ಕ್ಷಣಗಳನ್ನ ಕಟ್ಟಿಕೊಟ್ಟಿದ್ದಾರೆ.

ಈ ಕಾರ್ಯಕ್ರಮದಲ್ಲಿ  ರಾಷ್ಟ್ರೀಯ ಹಾಕಿ ತಂಡದ ಮಾಜಿ ನಾಯಕ ಆಶಿಶ್ ಬಲ್ಲಾಳ, ನಟಿ ಶುಭಶ್ರೀ, ನವೀನ್ ಸುರೇಶ್ ಸೇರಿದಂತೆ ಹಲವು‌ ಸೆಲಿಬ್ರಿಟಿ ಅತಿಥಿಗಳು ಪಾಲ್ಗೊಂಡಿದ್ದರು.

Post a Comment

0 Comments

Ad Code

Responsive Advertisement