Ticker

6/recent/ticker-posts

Ad Code

Responsive Advertisement

BREAKING NEWS : ಅಡುಗೆ ಅನಿಲ ಸಿಲಿಂಡರ್ ದರ 15 ರೂ. ಏರಿಕೆ


ನವದೆಹಲಿ: ಪೆಟ್ರೋಲಿಯಂ ಕಂಪೆನಿಗಳು ಇಂಧನ ಬೆಲೆ ಏರಿಕೆ ಮಾಡುತ್ತಿದ್ದಂತೆ ಅಡುಗೆ ಅನಿಲ ಸಿಲಿಂಡರ್ ದರವನ್ನು ಮತ್ತೆ ಕೂಡ ಬುಧವಾರದಿಂದ 15 ರೂಪಾಯಿ ಏರಿಕೆ ಮಾಡಿವೆ. ನೂತನ ದರ ದೇಶಾದ್ಯಂತ ಇಂದಿನಿAದಲೇ ಜಾರಿಗೆ ಬರಲಿದೆ.


ಈ ಮೂಲಕ ಸಬ್ಸಿಡಿಯೇತರ ಅಡುಗೆ ಅನಿಲ ಸಿಲಿಂಡರ್ ದರ ರಾಜಧಾನಿ ದೆಹಲಿಯಲ್ಲಿ 14.2 ಕೆಜಿಗೆ 899 ರೂಪಾಯಿ 50 ಪೈಸೆಯಾಗಿದೆ. 5 ಕೆಜಿ ಸಿಲಿಂಡರ್ ಬೆಲೆ 502 ರೂಪಾಯಿಯಾಗಿದೆ ಎಂದು ವರದಿಗಳು ತಿಳಿಸಿವೆ. 

ಅಕ್ಟೋಬರ್ 1ರಂದು ಪೆಟ್ರೋಲಿಯಂ ಕಂಪೆನಿಗಳು ವಾಣಿಜ್ಯ ಬಳಕೆಯ ಸಿಲಿಂಡರ್ ದರವನ್ನು 43 ರೂಪಾಯಿ 5 ಪೈಸೆಯಷ್ಟು ಹೆಚ್ಚಳ ಮಾಡಿದ್ದನ್ನು ಇಲ್ಲಿ ಗಮನಹಿಸಬಹುದು. ಅಂತೆಯೇ, ಈಗ ಅಡುಗೆ ಅನಿಲ ಸಿಲಿಂಡರ್ ದರವನ್ನು ಕೂಡಾ ಹೆಚ್ಚಿಸುವ ಮೂಲಕ ಗ್ರಾಹಕರಿಗೆ ಮತ್ತಷ್ಟು ಶಾಕ್ ನೀಡಿದೆ. ಕಳೆದ ಎರಡು ತಿಂಗಳಲ್ಲಿ ಅಡುಗೆ ಅನಿಲ ನಾಲ್ಕನೇ ಬಾರಿ ಏರಿಕೆ ಕಾಣುತ್ತಿದೆ.

Post a Comment

0 Comments

Ad Code

Responsive Advertisement