ಬಳ್ಳಾರಿ ಅ 28.``ಸರ್ಕಾರದ ಆದೇಶದಂತೆ 2021ನೇ ಸಾಲಿನ ಕರ್ನಾಟಕ ರಾಜ್ಯೋತ್ಸವವನ್ನು ವಿಶೇಷ ರೀತಿಯಲ್ಲಿ ಆಚರಿಸುವ ಸಂಬAಧ ಕನ್ನಡದ ಶ್ರೇಷ್ಠತೆಯನ್ನು ಸಾರುವ ಕುವೆಂಪು ಅವರ ``ಬಾರಿಸು ಕನ್ನಡ ಡಿಂಡಿಮಮ’’, ಕೆ.ಎಸ್.ನಿಸಾರ್ ಅಹಮದ್ ಅವರ ``ಜೋಗದ ಸಿರಿ ಬೆಳಕಿನಲ್ಲಿ’’ ಹಾಗೂ ಹಂಸಲೇಖ ಅವರ ``ಹುಟ್ಟಿದರೆ ಕನ್ನಡ ನಾಡಲಿ ಹುಟ್ಟಬೇಕು’’ ಈ ಮೂರು ಗೀತೆಗಳನ್ನು ಅಕ್ಟೋಬರ್ 28, 2021ರಂದು ಬೆಳಿಗ್ಗೆ 10.30 ಗಂಟೆಗೆ ಭುವನವಿಜಯ ಸಭಾಂಗಣದಲ್ಲಿ ಸಾಮೂಹಿಕ ಗೀತಗಾಯನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಸಂಗೀತ ವಿಭಾಗದ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಹಾಗೂ ಅಧ್ಯಾಪಕರು ಗೀತಗಾಯನ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಈ ಮೂರು ಗೀತೆಗಳನ್ನು ಆಡಿಯೋ ಮತ್ತು ವಿಡಿಯೋ ಮೂಲಕ ಚಿತ್ರೀಕರಿಸಲಾಯಿತು. ಈ ಕೆಳಗಿನ ಲಿಂಕ್‌ಗೆ ಮೂರು ಗೀತೆಗಳನ್ನು ಅಪ್‌ಲೋಡ್ ಮಾಡಲಾಗಿದೆ ಎಂದು ಡಾ.ಡಿ. ಮೀನಾಕ್ಷಿ ಉಪನಿರ್ದೇಶಕರು, ಮಾಹಿತಿಕೇಂದ್ರ ಕನ್ನಡ ವಿಶ್ವವಿದ್ಯಾಲಯ, ಹಂಪಿ ಇವರುತಿಳಿಸಿದ್ದಾರೆ.
0 Comments