ರಾಜ್ಯ ಸರ್ಕಾರ ಸಚಿವಾಲಯ ಗ್ರಂಥಾಲಯದಲ್ಲಿ 2021-22ರ ಸಾಲಿಗೆ ಒಂದು ವರ್ಷದ ಅವಧಿಗೆ ಅಪ್ರೆಂಟಿಸ್ ತರಬೇತಿಗಾಗಿ ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಗ್ರಾಜುಯೇಟ್ ಅಪ್ರೆಂಟಿಸ್ (ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ) 04 ಹುದ್ದೆಗಳಿಗೆ ಲೈಬ್ರರಿ ಸೈನ್ಸ್‍ನಲ್ಲಿ ಪದವಿ (ಬಿ.ಎಲ್.ಐ.ಎಸ್.ಸಿ) ಪದವಿ ಪಡೆದ ಅಭ್ಯರ್ಥಿಗಳಿಗೆ ಮಾಹೆಯಾನ ರೂ.10,000/-, ಸ್ಟೈಫಂಡ್ ನೀಡಲಾಗುವುದು. ಟೆಕ್ನೀಷಿಯನ್ ಅಪ್ರೆಂಟಿಸ್ (ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ) 06 ಹುದ್ದೆಗಳಿಗೆ ಲೈಬ್ರರಿ ಸೈನ್ಸ್‍ನಲ್ಲಿ ಡಿಪ್ಲೋಮಾ ಅಭ್ಯರ್ಥಿಗಳಿಗೆ ಮಾಹೆಯಾನ ರೂ.8,000/-, ಟೆಕ್ನೀಷಿಯನ್ ಅಪ್ರೆಂಟಿಸ್ (ಕಮರ್ಷಿಯಲ್ ಪ್ರಾಕ್ಟಿಸ್) 01 ಹುದ್ದೆಗೆ ಕಮರ್ಷಿಯಲ್ ಪ್ರಾಕ್ಟಿಸ್‍ನಲ್ಲಿ ಡಿಪ್ಲೋಮಾ ಅಭ್ಯರ್ಥಿಗಳಿಗೆ ಮಾಹೆಯಾನ ರೂ.8,000/-, ಸ್ಟೈಫಂಡ್ ನಿಗಧಿಪಡಿಸಲಾಗಿರುತ್ತದೆ.
ನಿಗಧಿತ ಶಿಕ್ಷಣಾರ್ಹತೆಯನ್ನು 2019 ಮೇ ತಿಂಗಳ ನಂತರ ಪಡೆದವರು ಮಾತ್ರ ಈ ತರಬೇತಿಗೆ ಅರ್ಹರಾಗಿರುತ್ತಾರೆ. ಅಭ್ಯರ್ಥಿಗಳನ್ನು ಮೆರಿಟ್ ಹಾಗೂ ಮೀಸಲಾತಿಯ ಆಧಾರದ ಮೇಲೆ ನಿಯಮಾನುಸಾರ ಆಯ್ಕೆ ಮಾಡಲಾಗುವುದು. ಈಗಾಗಲೇ ಅಪ್ರೆಂಟಿಸ್ ತರಬೇತಿ ಪಡೆದವರಾಗಿದ್ದರೆ ಅಂತಹವರು ಅರ್ಜಿಗಳನ್ನು ಸಲ್ಲಿಸುವಂತಿಲ್ಲ. ಮುಕ್ತ ವಿಶ್ವವಿದ್ಯಾನಿಲಯ / ದೂರ ಶಿಕ್ಷಣದ ಮೂಲಕ ಪದವಿಗಳನ್ನು ಪಡೆದ ಅಭ್ಯರ್ಥಿಗಳನ್ನು ತರಬೇತಿಗೆ ಪರಿಗಣಿಸುವುದಿಲ್ಲ.
ಅಭ್ಯರ್ಥಿಗಳು ನಿಗಧಿತ ನಮೂನೆಯಲ್ಲಿ ಅರ್ಜಿಯನ್ನು ಮುಖ್ಯ ಗ್ರಂಥಾಧಿಕಾರಿ, ಸಚಿವಾಲಯ ಗ್ರಂಥಾಲಯ, ಕೊಠಡಿ ಸಂಖ್ಯೆ: 11, ನೆಲಮಹಡಿ, ವಿಧಾನಸೌಧ, ಬೆಂಗಳೂರು-560001 ಇವರಿಗೆ ಅಕ್ಟೋಬರ್ 25, 2021 ರೊಳಗೆ ಸಲ್ಲಿಸಬೇಕು. ತಡವಾಗಿ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 080-22033462/3011 ಅಥವಾ ಇ-ಮೇಲ್ ವಿಳಾಸ: ksecretariatlibrary@gmail.com ನ್ನು ಸಂಪರ್ಕಿಸಬಹುದಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
0 Comments