Ticker

6/recent/ticker-posts

Ad Code

Responsive Advertisement

ಜನಸೇವೆಯೇ ಜನಾರ್ಧನನ ಸೇವೆ - ಪ್ರಶಾಂತ್ ಕುಮಾರ್ ಬಿ.ಎಸ್.

ಬೆಂಗಳೂರು : ಗಾಂಧಿನಗರ ವಿಧಾನ ಸಭಾ ಕ್ಷೇತ್ರದ ದತ್ತಾತ್ರೇಯ ವಾರ್ಡ್‌ನ ಜನರಿಗೆ ಕರೋನದಂತಹ ಸಂಕಷ್ಟದ ಸಮಯದಲ್ಲಿ  ನಿಸ್ವಾರ್ಥವಾಗಿ ಜೀವದ ಹಂಗು ತೊರೆದು, ಜನರ ಸೇವೆಗೆ ಹಗಲಿರುಳೆನ್ನದೆ ಸದಾಕಾಲ ಸಿದ್ಧ ಎಂದು ಸೇವೆಯನ್ನು ಮಾಡಿದವರ ಪೈಕಿ ಪ್ರಮುಖವಾಗಿ ಗುರುತಿಸಿಕೊಂಡವರಲ್ಲಿ ಆರ್ ಎಸ್ಎಸ್ ನ ಸ್ವಯಂ ಸೇವಕರಾದ ಪ್ರಶಾಂತ್ ಕುಮಾರ್ ಬಿ.ಎಸ್. ರವರು ಕೂಡ ಒಬ್ಬರು.  ಕಳೆದ ಸುಮಾರು ೧೬ ವರ್ಷಗಳಿಂದ ಸಂಘದ ಕಾರ್ಯಚಟುವಟಿಕೆಗಳಲ್ಲಿ ತೊಡಗಿ ಹಂತ ಹಂತವಾಗಿ ತಮ್ಮ ದೃಢ ಸಂಕಲ್ಪ ಹಾಗೂ ಸೇವಾ ದೀಕ್ಷೆಯಿಂದಾಗಿ ಪರಿವಾರದ ವಲಯದಲ್ಲಿ ಗುರುತಿಸಲ್ಪಟ್ಟು, ಸಂಘದ ವತಿಯಿಂದ ಸಿಕ್ಕ ಅವಕಾಶ ಹಾಗೂ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಹಾಗೂ ತಮ್ಮ ಸೇವಾಕಾಂಕ್ಷೆಯಿಂದ ಎಲ್ಲರ ಮೆಚ್ಚುಗೆಗೆ  ಪಾತ್ರರಾಗಿರುವ ಪ್ರಶಾಂತ್ ರವರು ಈ ಭಾಗದಲ್ಲಿ   ಯುವ ಮುಖಂಡರಾಗಿ  ಚಿರಪರಿಚಿತರು. 


ತಮ್ಮನ್ನು ಸಂಘಕ್ಕೆ ಪರಿಚಯಿಸಿದ, ಸಂಘದಲ್ಲಿ ಈಗ ಬಸವೇಶ್ವರ ಭಾಗ ಗೋ ಸೇವಾ ಸಂಯೋಜಕರಾಗಿರುವ ಕೆ.ಜೆ.ರವಿರವರೇ ಇವರಿಗೆ ಮಾರ್ಗದರ್ಶಕರು ಹಾಗೂ ಪ್ರೇರಕರು. ತಮ್ಮ ಸೇವಾಸಾಧನೆಗೆ ಸಿಕ್ಕ ಪ್ರೀತಿಗೌರವಕ್ಕೆ ರವಿರವರೇ ಕಾರಣಕರ್ತರು ಎಂದು ವಿನಮ್ರತೆಯಿಂದ ಸ್ಮರಿಸಿಕೊಳ್ಳುವ ಪ್ರಶಾಂತ್ ರವರು, ತಮ್ಮ ೧೩ ನೇ ವಯಸ್ಸಿನಲ್ಲಿ ಸಂಘಕ್ಕೆ ಬಾಲ ಸ್ವಯಂ ಸೇವಕನಾಗಿ ಸೇರಿದಂದಿನಿಂದ ಇಂದಿನವರೆವಿಗೂ ಶಾಖೆಯಲ್ಲಿ ತಮಗೆ ಸಿಕ್ಕ ಶಿಕ್ಷಣದಿಂದಾಗಿ ದೇಶಪ್ರೇಮ, ಸಮಯಪ್ರಜ್ಞೆ, ನಿಸ್ವಾರ್ಥ ಸೇವಾಪರತೆಗಳನ್ನು ಕಲಿತು ತಮ್ಮ ಜೀವನವನ್ನು ಶಿಸ್ತುಬದ್ಧವಾಗಿ ರೂಪಿಸಿಕೊಳ್ಳುವುದರೊಂದಿಗೆ, ನಮ್ಮ ಈ ಸಮಾಜದಲ್ಲಿ ಆಗುಹೋಗುಗಳನ್ನು ಗಮನಿಸಿ ಸಾಧಕ-ಬಾಧಕಗಳ ನಡುವಿನಲ್ಲಿ  ಅನೇಕ ವರ್ಷಗಳಿಂದ ಹಾಗೂ ಇತ್ತೀಚಿನ ಕರೋನಾ ಮಹಾಮಾರಿಯ ಕಾರಣದಿಂದಾಗಿ ಉಂಟಾಗಿದ್ದ ಸಂಕಷ್ಟದ ಪರಿಸ್ಥಿತಿಯಲ್ಲಿ  ಸಂಘ ಪರಿವಾರ ವತಿಯಿಂದ ಅಸಹಾಯಕ ಸಾರ್ವಜನಿಕರನೇಕರಿಗೆ  ಸೇವಾ ಬಸತಿ ( ಕೊಳಗೇರಿ) ಗಳ ಮನೆ ಮನೆಗೂ ಆಹಾರ ಔಷಧಿ  ಸರಬರಾಜು ಮಾಡುವುದರೊಂದಿಗೆ, ವೈದ್ಯರನ್ನು ಹಲವು ಮನೆಗಳ ಬಳಿಗೆ ಕರೆದೊಯ್ದು, ಸಾಮಾನ್ಯ ಆರೋಗ್ಯ ಸಮಸ್ಯೆಗಳಿಗೆ ಶುಶ್ರೂಷೆ ಮಾಡವಲ್ಲಿಯೂ ಇವರ ನೇತೃತ್ವದಲ್ಲಿ ತಂಡ ಮಾಡಿರುವ ಕೆಲಸವನ್ನು     ಅಲ್ಲಿನ ನಿವಾಸಿಗಳು ಕೃತಜ್ಞತೆಯಿಂದ ಸ್ಮರಿಸಿಕೊಳ್ಳುತ್ತಾರೆ. ಕಳೆದ ಮಾರ್ಚ್ ತಿಂಗಳಲ್ಲಿ ಸಂಘದ ಕಾರ್ಯ ಯೋಜನೆಯಂತೆ ವಾರ್ಡಿನ ಕಸ್ತೂರ್ಬಾನಗರ ಪ್ರದೇಶದಲ್ಲಿ ನೇತ್ರ ತಪಾಸಣಾ ಶಿಬಿರ ಆಯೋಜಿಸಿ, ಸುಮಾರು ಇನ್ನೂರಕ್ಕೂ ಹೆಚ್ಚು ಜನರಿಗೆ ಕಣ್ಣಿನ ಪರೀಕ್ಷೆ ಮಾಡಿಸಿ, ಕನ್ನಡಕಗಳ ಅಗತ್ಯವಿದ್ದ ಸುಮಾರು ಒಂದು ನೂರಕ್ಕೂ ಹೆಚ್ಚು ಜನರಿಗೆ ಉಚಿತವಾಗಿ ಕನ್ನಡಕಗಳನ್ನು ಸಹ ಕೊಡಿಸಿ ತಮ್ಮ ತಂಡದೊಂದಿಗೆ ಯಶಸ್ವಿಯಾಗಿ ಶಿಬಿರವನ್ನು ಮಾಡಿರುತ್ತಾರೆ. ಸುಮಾರು ೨೮ ವರ್ಷದ ವಯಸ್ಸಿನ ಇವರಲ್ಲಿನ ಸೇವಾಸಕ್ತಿ ಹಾಗೂ ಜವಾಬ್ದಾರಿ ನಿರ್ವಹಣೆಯ ಕ್ಷಮತೆಯಿಂದಾಗಿ, ಈ ಯುವ ಸೇವಕ  ಮುಂದಿನ ಭವಿಷ್ಯದಲ್ಲಿ  ಸಮಾಜದಲ್ಲಿ ಉತ್ತಮ ಸಾಧನೆ ಮಾಡುವ ವಿಶ್ವಾಸವನ್ನು ಜನರಲ್ಲಿ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜನರ ಆಶಯ ಸಫಲವಾಗಲಿ ಎಂದು ನಾವು ಹಾರೈಸುತ್ತೇವೆ.

Post a Comment

0 Comments

Ad Code

Responsive Advertisement