Ticker

6/recent/ticker-posts

Ad Code

Responsive Advertisement

ಚರ್ಚ್ ಮೇಲೆ ದಾಳಿ ಪ್ರಕರಣ: ದಾಳಿ ನಡೆಸಿದವರು ಹಿಂದೂ ಬಲಪಂಥೀಯ ಗುಂಪಿಗೆ ಸೇರಿದವರು

ಅಕ್ಟೋಬರ್ 4, ಉತ್ತರಾಖಂಡ್, ರೂರ್ಕಿ: ಪೊಲೀಸರ ದೂರಿನ ಪ್ರಕಾರ ರೂರ್ಕಿಯ ಸೋಲಾನಿಪುರಂ ಕಾಲೋನಿಯಲ್ಲಿ ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಚರ್ಚ್ ಮಿಷನರಿಗಳ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಗುಂಪೊ0ದು ಚರ್ಚ್ ಒಳಗೆ ನುಗ್ಗಿದೆ. ಸಾಮೂಹಿಕ ಪ್ರಾರ್ಥನೆ ನಡೆಯುತ್ತಿದ್ದಾಗ ರೂರ್ಕಿಯಲ್ಲಿನ ಚರ್ಚ್ ಮೇಲೆ ದಾಳಿ ನಡೆಸಿ ಧ್ವಂಸಗೊಳಿಸಿದ ಪ್ರಕರಣಕ್ಕೆ ಸಂಬ0ಧಿಸಿದ0ತೆ 200 ಜನರನ್ನು ಉತ್ತರಾಖಂಡ್ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ದಾಳಿ ನಡೆಸಿದವರು ಹಿಂದೂ ಬಲಪಂಥೀಯ ಗುಂಪಿಗೆ ಸೇರಿದವರು ಎಂದು ತಿಳಿದುಬಂದಿದೆ. ಬಲಪಂಥೀಯ ಗುಂಪು ಕ್ರಿಶ್ಚಿಯನ್ ಮಿಷನರಿಗಳು ಮತಾಂತರ ದಂಧೆಯನ್ನು ನಡೆಸುತ್ತಿದ್ದಾರೆ ಎಂದು ಆರೋಪಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಅವರು ಚರ್ಚ್ ಧ್ವಂಸಗೊಳಿಸಿದರು ಮತ್ತು ಕೆಲವು ಭಕ್ತರನ್ನು ನಿಂದಿಸಿದರು ಎಂದು ವರದಿಯಲ್ಲಿ ಹೇಳಿದೆ.

ಸ್ಥಳೀಯ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ), ಬಜರಂಗದಳ ಮತ್ತು ಭಾರತೀಯ ಜನತಾ ಪಕ್ಷದ ಯುವ ಘಟಕದ 200 ಕ್ಕೂ ಹೆಚ್ಚು ಪುರುಷರು ಮತ್ತು ಮಹಿಳೆಯರು ಚರ್ಚ್ಗೆ ನುಗ್ಗಿ ಅದನ್ನು ಧ್ವಂಸ ಮಾಡಲು ಆರಂಭಿಸಿದರು. ಚರ್ಚಿಗೆ ಹೋಗುವವರನ್ನು ತಡೆದರು ಎಂದು ಚರ್ಚ್ ಪಾದ್ರಿಯ ಪತ್ನಿ ಪ್ರಿಯೊ ಸಾಧನಾ ಲಾನ್ಸ್ ಹೇಳಿರುವುದಾಗಿ ವರದಿಯಾಗಿದೆ.

Post a Comment

0 Comments

Ad Code

Responsive Advertisement