Ticker

6/recent/ticker-posts

Ad Code

Responsive Advertisement

ಮಾರುತಿ ಬಡಾವಣೆಯ ಭಾರತಿ ಲಾರಿ ಮತ್ತು ಪಡ್ಡೆಗಳ ಆಯುಧ ಪೂಜೆ !!!

ಆಯುಧ ಪೂಜೆ ಬಂತು ಎಂದರೆ ಪಡ್ಡೆ ಹುಡುಗರು ಎಲ್ಲಾ ಆಯುಧಗಳ ಪೂಜೆ ಆಯ್ತಾ ಅಂತ ಡಬಲ್ ಮೀನಿಂಗ್ ಮಾತನಾಡುತ್ತಾರೆ ನೋಡಿ ಅದು ನಿಜವಾದ ಅವಶ್ಯಕತೆ. ಆಗಾಗ ಗಾಡಿ ಸರ್ವೀಸಿಗೆ ಬಿಟ್ಟಂತೆ ನಮ್ಮ ದೇಹಕ್ಕೂ ಮನಸ್ಸಿಗೂ ಸರ್ವಿಸಿಂಗ್ ಮುಖ್ಯ. ಮನಸ್ಸು ಉಲ್ಲಸಿತವಾಗಬೇಕು. ದೇಹಕ್ಕೆ ಒಂದು ವಿಶ್ರಾಂತಿ‌ ಸಿಗಬೇಕು. ಲೀವ್ ದಿ ಲೈಫ್ ಯೂ ಲೈಕ್ ಎಂದರೆ ಅದು ಹೀಗಿರಬೇಕು. ಅದು ಬಿಟ್ಟು ಅನಾರೋಗ್ಯಕರವಾಗಿ ಆರೋಗ್ಯ ಹಾಳಿ ಮಾಡಿಕೊಳ್ಳುವಂತೆ ಅಲ್ಲ.

ಆಯುಧ ಪೂಜೆಯ ದಿನ ನನ್ನ ನೆನಪಿಗೆ ಬರುವ ಎರಡು ವಿಚಾರಗಳು.‌ಬಾಲ್ಯದಲ್ಲಿ ನಮ್ಮ ಮಾರುತಿ ಬಡಾವಣೆಯ ಐದನೇ ಅಡ್ಡರಸ್ತೆಯವರೊಬ್ಬರು ಭಾರತಿ ಲಾರಿ ಸರ್ವೀಸ್ ಅಂತ ಒಂದು ಲಾರಿ ಇಟ್ಟುಕೊಂಡಿದ್ದರು. ಆಯುಧ ಪೂಜೆ ದಿನ ಲಾರಿಗೆ ಪೂಜೆ ಮಾಡಿ ಸಿಹಿ ಕಳ್ಳೇಪುರಿ ವಿತರಿಸಿ ಲಾರಿಯಲ್ಲಿ ಎಲ್ಲರಿಗೂ ಒಂದು ರೌಂಡು ಹೊಡೆಸುತ್ತಿದ್ದರು.ಇಂದಿಗೂ ಲಾರಿಯಲ್ಲಿ ಪ್ರಯಾಣಿಸುವುದು ನನಗಿಷ್ಟ‌ ಎರಡನೆಯದು ಅಣ್ಣಾವ್ರ ಅಭಿನಯದ ಕರುಳಿನ ಕರೆ ಚಲನಚಿತ್ರದಲ್ಲಿ ಆಯುಧ ಪೂಜೆ  ಲಾರಿಗಳಿಗೆ ಪೂಜೆ ಪದ್ಮಶ್ರೀ ಆರ್ ನಾಗೇಂದ್ರರಾಯರ ಸಮ್ಮುಖದಲ್ಲಿ ನನಗೆ ಬಹಳ ಇಷ್ಟವಾದ ಹಾಡು - ಮೈಸೂರು ದಸರಾ ಎಷ್ಟೊಂದು ಸುಂದರ. ಚೆಲ್ಲಿದೆ ನಗೆಯಾ ಪನ್ನೀರಾ ! 

ಕಡೆಯದಾಗಿ ಆಯುಧ ಪೂಜೆಗೆ ಒಂದಷ್ಟು ಜನ ಕರೆಯುತ್ತಿದ್ದರು. ನಿಜಕ್ಕೂ ಎಲ್ಲಿಗೆ ಹೋಗುವುದು ಬಿಡುವುದು ಅಂತ ತಿಳಿಯದೆ ಎಲ್ಲ ಕಡೆ ಹೋಗಲಾಗುತ್ತಿರಲಿಲ್ಲ. ಹೋದ ಕಡೆ ಸ್ವೀಟ್ ಬಾಕ್ಸ್, ಗಿಫ್ಟ್, ಕಳ್ಳೇಪುರಿ ಹೀಗೆ ಏನೋ ಒಂದು ಕೊಡುತ್ತಿದ್ದರು. ಪ್ರಾಮಾಣಿಕ ಶುಭ ಹಾರೈಸಿ ಬರುತ್ತಿದ್ದೆ. ಕಳೆದ ವರ್ಷ ಯಾರೂ ಆಹ್ವಾನಿಸಿರಲಿಲ್ಲ. ಪಾಪ ಎಲ್ಲರ ವ್ಯಾಪಾರ ವಹಿವಾಟು ಜೊತೆಗೆ ಕೊರೋನಾ ಸಮಸ್ಯೆ ತಂದಿದೆ. ಈ ಸಲ ತಪ್ಪದೇ ಅವರೆಲ್ಲರಿಗೂ ಶುಭ ಹಾರೈಸುತ್ತೇನೆ.‌ ಮಲ್ಲೇಶ್ವರದ ಮನೆ ಎದುರಿಗಿರುವ ಐಯಂಗಾರ್ ಫ್ಲೋರ್ ಮಿಲ್ಲಿನವರು ಅಕಸ್ಮಾತ್ ಕರೆದು ಸ್ವೀಟ್ ಬಾಕ್ಸ್ ಮತ್ತು ಖಾರ ಕೊಟ್ಟು ಕಳುಹಿಸಿದ್ದರು.ಸಾಂಕೇತಿಕವಾಗಿ ಎಲ್ಲರ ಸ್ವೀಟ್ ಬಾಕ್ಸ್ ಸಿಕ್ಕಷ್ಟೇ ಸಂತಸವಾಯಿತು. ಪಾಪ ಯಾರೂ ತೊಂದರೆಗಳನ್ನು ಅನುಭವಿಸದೆ ಬೇಗ ಎಲ್ಲವೂ ಸಹಜ ಸ್ಥಿತಿ ಸುಖ ಸಮೃದ್ಧಿಗಳಿಗೆ ಮರಳಲಿ  ಎಂದು ಪ್ರಾರ್ಥಿಸಿದ್ದೆ.ಈ ವರ್ಷ ಮೂರನೇ ಅಲೆ ಇಲ್ಲ.ಭಯ ಕಡಿಮೆಯಾಗಿದೆ.ಒಂದೆರಡು ಕಡೆ  ಹಾಜರಿ ಹಾಕುವುದಿದೆ ! ಅಲ್ಲಿಗೆ ಈ ವರ್ಷದ ಆಯುಧ ಪೂಜೆ ಸಂಪನ್ನ !

C,N.RAMESH

Post a Comment

0 Comments

Ad Code

Responsive Advertisement