Ticker

6/recent/ticker-posts

Ad Code

Responsive Advertisement

ಸೂಸೈಡ್ ಸಿಟಿ ಆಗುತ್ತಿದೆಯಾ ಬೆಂಗಳೂರು ನಗರ....!

ಅಕ್ಟೋಬರ್ 01, ಮಾದನಾಯಕನಹಳ್ಳಿ:  ಬೆಂಗಳೂರಿನ ಮಾದನಾಯನಹಳ್ಳಿಯಲ್ಲಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಜಾರಿದ್ದಾರೆ. ಮನೆಯ ಯಜಮಾನ ಬಿಎಂಟಿಸಿ ಸಂಸ್ಥೆಗೆ ಸೇರಿದವರಾಗಿದ್ದು, ಕೊರೊನಾದಿಂದ ಸಾವನ್ನಪ್ಪಿದ ನಂತರ ಮನೆಯ ಜೀವನವನ್ನು ನಡೆಸುವುದಕ್ಕೆ ಕಷ್ಟವಾಗಿ, ಮನೆಯ ಸಾಲಕ್ಕೆ ಹೆದರಿ ಒಂದೇ ಕುಟುಂಬದ ತಾಯಿ ಮತ್ತು ಇಬ್ಬರು ಮಕ್ಕಳು ಸಾವಿಗೆ ಶರಣಾಗಿದ್ದಾರೆ. 

ಪತಿಯ ಸಾವಿನಿಂದ ಜಿಗುಪ್ಸೆ ಹೊಂದಿದ್ದ ತಾಯಿ,ಮಕ್ಕಳಿಗೆ ಆತ್ಮಹತ್ಯೆಗೆ ಉತ್ತೇಜಿಸಿ, ಎಲ್ಲರೂ ಆತ್ಮಹತ್ಯೆಗೆ  ಶರಣಾಗಿರುವ ಘಟನೆ ಮಾದನಾಯಕನಹಳ್ಳಿ ಯಲ್ಲಿ ನಡೆದಿದೆ. ಕರೋನೋ ಎಂಬ ಮಾರಿ ಮಹಾಮಾರಿ ಬೆಂಗಳೂರು ನಗರವನ್ನು ಆತ್ಮಹತ್ಯೆ ನಗರವಾಗಿ ಮಾರ್ಪಾಡು ಮಾಡ್ತಾಯಿದ್ದೀಯಾ ಎಂಬ ಅನುಮಾನ ವ್ಯಕ್ತವಾಗಿದೆ. ಈ ಪ್ರಕರಣದ ವಿಚಾರಣೆಯನ್ನು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯ ಪೊಲೀಸರು ಈಗಾಗಲೇ ಆರಂಭಿಸಿದ್ದು, ವಿಚಾರಣೆ ಹಂತದಲ್ಲಿದೆ. 

ಆತ್ಮಹತ್ಯೆಗೂ ಮುನ್ನ ಆತ್ಮಹತ್ಯೆಗೆ ಒಳಗಾದವರು ಡೆತ್ನೋಟನ್ನು ಬರೆದಿಟ್ಟು ಸಾವಿಗೆ ಶರಣಾಗಿದ್ದಾರೆ. ಈಗಾಗಲೇ ಪೊಲೀಸ್ ತನಿಖೆ ಮುಂದುವರಿದಿದೆ. ಮನೆಯ ಯಜಮಾನ ಪ್ರಸನ್ನ ಬಿಎಂಟಿಸಿ ಸಂಸ್ಥೆಲಿ ನೌಕರರಾಗಿದ್ದು, 3 ವರ್ಷಗಳ ಹಿಂದೆ ಮನೆ ಖರೀದಿಗಾಗಿ 20 ಲಕ್ಷ ಸಾಲ ಮಾಡಿದ್ದರು ಎನ್ನಲಾಗಿದೆ. ಗಂಡ ಪ್ರಸನ್ನ ಕೊರೋನಾ ಕಾಯಿಲೆಗೆ ತುತ್ತಾಗಿ ಸಾವನ್ನಪ್ಪಿದ್ದರು. ಪತಿಯ ಅಕಾಲಿಕ ಮರಣದ ನಂತರ ಜೀವನ ನಡೆಸುವುದು ತುಂಬಾ ಕಷ್ಟಕರವಾಗಿತ್ತು ಎಂದು ವಸಂತ ಎಂಬ ಮಹಿಳೆಯು ಡೆತ್ ನೋಟ್ ನಲ್ಲಿ ಉಲ್ಲೇಖಿಸಿದ್ದಾರೆ. ಮಕ್ಕಳ ಮುಂದಿನ ಭವಿಷ್ಯದ ಚಿಂತೆಯಿಂದ ಕುಟುಂಬಸ್ಥರು ಆತ್ಮಹತ್ಯೆಗೆ ಶರಣಾಗಿರುವುದು ಕಂಡು ಬರುತ್ತದೆ. ಅಲ್ಲದೆ ಬಿಎಂಟಿಸಿ ಸಂಸ್ಥೆಯಿಂದ ಯಾವುದೇ ರೀತಿಯ ಸೂಕ್ತ ಪರಿಹಾರ ಸಿಗಲಿಲ್ಲ ಎಂಬುದು ಕಂಡುಬರುತ್ತದೆ. ಮಕ್ಕಳನ್ನು ಸಾಲಕ್ಕೆ ಸಿಕಿಸಬಾರದೆಂದು ಬಾರದೆಂದು ಈ ರೀತಿ ಸಾವಿಗೆ ಶರಣಾಗಿರಬಹುದು ಎಂದು ಮೇಲ್ನೋಟಕ್ಕೆ ಕಂಡುಬರುತ್ತದೆ. ಅಲ್ಲದೆ ಡೆತ್ ನೋಟ್ನಲ್ಲಿ ಮನೆಯ ಮಾರಿ ಸಾಲವನ್ನು ತೀರಿಸಿ ಎಂದು ಬರೆದುಕೊಂಡಿದ್ದಾರೆ. ಮೋಸ ಮಾಡುವುದಿಲ್ಲ ನಿಮ್ಮ ಸಾಲಕ್ಕೆ ಮನೆಯನ್ನು ವಜಾ ಮಾಡಿಕೊಳ್ಳಿ ಎನ್ನುವ ಅರ್ಥದಲ್ಲಿ ಬರೆದುಕೊಂಡಿದ್ದಾರೆ. ನಾವು ನಗುವಾಗ ಎಲ್ಲ ನೆಂಟರು ಅಳುವಾಗ ಯಾರು ಇಲ್ಲ ಎಂಬ ಸಾಲು ನೆನಪಿಗೆ ಬರುವಂತಿದೆ. ಬೆಂಗಳೂರು ನಗರ ಆತ್ಮಹತ್ಯೆ ನಗರವಾಗಿದೆಯೇ ಎಂಬ ಭಾವನೆ ಬರುತ್ತದೆ. ಇನ್ನು ಕೇವಲ ಆರು ಲಕ್ಷ ಸಾಲ ಮಾತ್ರ ಇದ್ದದ್ದು ಎಂದು ತಿಳಿದುಬಂದಿದೆ. ಸಾಲಕ್ಕೆ ಹೆದರಿ ಮಕ್ಕಳ ಭವಿಷ್ಯವನ್ನು ಹಾಳು ಮಾಡುವುದು ಎಷ್ಟು ಸರಿ.

Post a Comment

0 Comments

Ad Code

Responsive Advertisement