ನೃತ್ಯಕುಟೀರದ ಗುರು ವಿದುಷಿ ಶ್ರೀಮತಿ ದೀಪಾಭಟ್ ಅವರ ಶಿಷ್ಯೆ ಕುಮಾರಿ ಅವನಿ ಕೆ ಅವರ ಭರತನಾಟ್ಯ ರಂಗಪ್ರವೇಶ ಇತ್ತೀಚೆಗೆ ನಗರದ ಜೆ ಎಸ್ ಎಸ್ ಸಭಾಂಗಣ ದಲ್ಲಿ ಕಿಕ್ಕಿರಿದ ಕಲಾ ರಸಿಕರ ಮುಂದೆ ಅಚ್ಚು ಕಟ್ಟಾಗಿ ನಡೆಯಿತು. ಕಲಾ ವಿದ್ವತ್ ಗಣ್ಯರಾದ ಡಾ|| ಎಂ ಆರ್ ಕೃಷ್ಣ ಮೂರ್ತಿ, ಡಾ|| ಎಂ ಆರ್ ವಿ ಪ್ರಸಾದ್, ಡಾ|| ಶ್ರೀಮತಿ ಕರುಣಾ ವಿಜಯೇಂದ್ರ ಹಾಗು ಡಾ|| ಎಂ ಸೂರ್ಯಪ್ರಸಾದ್ ಉಪಸ್ಥಿತರಿದ್ದರು.
0 Comments