ಬೆಂಗಳೂರು- ಕೋವಿಡ್ ಹಿನ್ನೆಲೆಯಲ್ಲಿ ಸ್ಥಗಿತವಾಗಿದ್ದ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಇದೇ 16ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಾವಣಗೆರೆ ಜಿಲ್ಲೆ ನ್ಯಾಮತಿ ತಾಲ್ಲೂಕಿನ ಸುರಹೊನ್ನೆ ಗ್ರಾಮದಲ್ಲಿ ಸಿಎಂ ಬೊಮ್ಮಯಿ ಹಾಗೂ
ಕಂದಾಯ ಸಚಿವರು ,ಅ.16ರಂದು ಬೆಳಗ್ಗೆ 10.30ಕ್ಕೆ ಗ್ರಾಮ ವಾಸ್ತವ್ಯಕ್ಕೆ ಚಾಲನೆ ನೀಡಲಿದ್ದಾರೆ. ಅಂದು ಗ್ರಾಮದ ಮಲ್ಲಿಕಾರ್ಜುನಸ್ವಾಮಿ ದೇವಾಲಯದಿಂದ ಬಾಲಕಿಯರ ಪ್ರೌಢಶಾಲೆ ಆವರಣದವರೆಗೂ ಎತ್ತಿನಗಾಡಿ ಮೆರವಣಿಗೆ ನಡೆಸಲಾಗುವುದು ಎಂದು ಹೇಳಿದರು.
ಹೊನ್ನಾಳಿ -ನ್ಯಾಮತಿ ತಾಲೂಕಿನಲ್ಲಿ ಲಸಿಕೆ ಮುಕ್ತ ಗ್ರಾಮಗಳನ್ನು ಮಾಡುವ ಲಸಿಕೆ ಮುಕ್ತ ಮಾಡಬೇಕು ಎಂದು ನಿರ್ಧಾರ ಮಾಡಿದ್ದೇವೆ.
ಸಾಮಾಜಿಕ ಭದ್ರತೆ ಆದೇಶ ಪತ್ರ ವಿತರಣೆ ಮಾಡಲಿದ್ದೇವೆ ಎಂದು ವಿವರಿಸಿದರು.
ಇದೇ ಸಂದರ್ಭದಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ , ಘನತ್ಯಾಜ್ಯ ಘಟಕದ ವಾಹನಗಳಿಗೆ ಚಾಲನೆ ನೀಡಲಾಗುತ್ತದೆ. ಸುರಹೊನ್ನೆ ಗ್ರಾಮದಲ್ಲಿ 1,90,000 ಸಾವಿರ ಮಂದಿಗೆ ಕೋವಿಡ್ ಲಸಿಕೆ ನೀಡಲಾಗಿದ್ದು, ಲಸಿಕೆ ಮುಕ್ತ ಗ್ರಾಮ ಮಾಡುವ ಉದ್ದೇಶವಿದೆ. ಆಯುಷ್ಮಾನ್ ಭಾರತ್ ಕಾರ್ಡ್ ಹಾಗೂ ಸಾಮಾಜಿಕ ಭದ್ರಾ ಸೌಲಭ್ಯಗಳನ್ನು ಫಲಾನುಭವಿಗಳಿಗೆ ನೀಡಲಾಗುವುದು ಎಂದರು.
ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ, ಸಂಸದ ಜಿ.ಎಮ್.ಸಿದ್ದೇಶ್ ಪಾಲ್ಗೊಳ್ಳಲಿದ್ದಾರೆ. ಅದೇ ದಿನ ಮಧ್ಯಾಹ್ನ 3 ಗಂಟೆಗೆ ಹೊನ್ನಾಳಿ ತಾಲ್ಲೂಕಿನ ಕುಂದೂರು ಗ್ರಾಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸರ್ಕಾರದ ನಡಿಗೆ ಹಳ್ಳಿಕಡೆಗೆ ಕಾರ್ಯಕ್ರಮದಡಿ ಜನರ ಮನೆಬಾಗಿಲಿಗೆ ಆಡಳಿತಕ್ಕೆ ಚಾಲನೆ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಕಾರಿಗಳು, ಚುನಾಯಿತ ಪ್ರತಿನಿಗಳು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ಹೊಸ ತಾಲ್ಲೂಕು ನ್ಯಾಮತಿಯಲ್ಲಿ ನೂತನ ತಾಲ್ಲೂಕು ಕಚೇರಿ ಕಟ್ಟಡ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡುವಂತೆ ಮನವಿ ಮಾಡಲಾಗುವುದು ಎಂದು ರೇಣುಕಾಚಾರ್ಯ ಹೇಳಿದರು.
*ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು*
ಯಡಿಯೂರಪ್ಪ ಅವರಿಗೆ ಅತ್ಯುತ್ತಮ ಶಾಸಕ ಪ್ರಶಸ್ತಿ ಕೊಟ್ಟಿದ್ದು, ಸಭಾಪತಿ, ಸಭಾದ್ಯಕ್ಷರು.ಅವರು ಯಾವತ್ತೂ ಅಧಿವೇಶನಕ್ಕೆ ಗೈರಗಲ್ಲ, ಬಹಳ ಶಿಸ್ತಿನ ಸಿಪಾಯಿಯಾಗಿದ್ದರು.ಹಾಗಾಗಿ ಸಮಿತಿ ಪ್ರಶಸ್ತಿ ಕೊಟ್ಟಿದೆ ಇದು ಭಾರತೀಯ ಜನತಾ ಪಾರ್ಟಿ ಕೊಟ್ಟಿರುವ ಪ್ರಶಸ್ತಿ ಅಲ್ಲ ಎಂದು ಪ್ರಶ್ನೆಯೊಂದಕ್ಕೆ ಸ್ಪಷ್ಟನೆ ಕೊಟ್ಟರು.
*ಎಚ್‍ಡಿಕೆಗೆ ಹತಾಶೆ*
ಎರಡು ಬಾರಿ ಮುಖ್ಯಮಂತ್ರಿಯಾದರೂ ಅವರು ಪೂರ್ಣಗೊಳಿಸಲಿಲ್ಲ ಎಂಬ ಹತಾಶೆಯಿಂದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪ ಮಾಡುತ್ತಿದ್ದಾರೆ ಎಂದು ರೇಣುಕಾಚಾರ್ಯ ಅವರು ಟೀಕಿಸಿದರು
ಯಡಿಯೂರಪ್ಪ ಅವರ ಆಪ್ತರ ಮನೆಗಳ ಮೇಲೆ ಐಟಿ ದಾಳಿ ಆಗಿದೆ ಎಂದು ಹೇಳುವುದು ಸರಿಯಲ್ಲ. ಐಟಿ ಅಕಾರಿಗಳು ಅವರ ಕೆಲಸ ಮಾಡುತ್ತಿದ್ದಾರೆ. ಯಡಿಯೂರಪ್ಪ ಅವರನ್ನು ಮೂಲೆಗುಂಪು ಮಾಡಿಲ್ಲ. ಅವರ ರಾಜ್ಯ ಪ್ರವಾಸಕ್ಕೆ ಕಡಿವಾಣ ಹಾಕಿಲ್ಲ. ಯಡಿಯೂರಪ್ಪ ಅವರೇ ಬಿಜೆಪಿ ತಂಡದಲ್ಲಿ ಕೆಲಸ ಮಾಡಿ ಮತ್ತೆ ಅಧಿಕಾರ ತರುವ ಸಂಕಲ್ಪ ಮಾಡಿದ್ದಾರೆ. ತಮಗೆ ಆದಾಯ ತೆರಿಗೆ ದಾಳಿ ಭಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಐಟಿ ದಾಳಿ ಅದು ಸ್ವತಂತ್ರ ಸಂಸ್ಥೆ.ಇದು ರಾಜಕೀಯ ಪ್ರೇರಿತ ದಾಳಿ ಅಲ್ಲ.ಕುಮಾರಸ್ವಾಮಿ ಸಂಘ ಪರಿವಾರ ಟೀಕೆ ಮಾಡಿದರು.ಎರಡು ಬಾರಿ ಲಕ್ಕಿ ಸಿಎಂ ಆಗಿದ್ದರು.ಅಧಿಕಾರ ಪೂರ್ಣಗೊಳಿಸಲು ಆಗಿಲ್ಲ .ಅಧಿಕಾರಿ ಇಲ್ಲದೆ ಅವ್ರು ಮೀನಿನಂತೆ ಆಗಿದೆ
ಎಂದು ವ್ಯಂಗ್ಯವಾಡಿದರು.
ಇಲ್ಲಿ ಸಿದ್ದರಾಮಯ್ಯ, ಯಡಿಯೂರಪ್ಪ ಯಾವುದೇ ಸಂಬಂಧ ಇಲ್ಲ.ಕುಮಾರಸ್ವಾಮಿ ಸುಮ್ಮನೆ ಟೀಕೆ ಮಾಡುತ್ತಿದ್ದಾರೆ.ಐಟಿ ದಾಳಿ ಯಾಕೆ ಆಯ್ತು,ಹೇಗೆ ಆಯ್ತು ಗೊತ್ತಿಲ್ಲ.ನಾನು ಐಟಿ ದಾಳಿ ಬಗ್ಗೆ ಚರ್ಚೆ ಮಾಡಲ್ಲ.ವಿನಾಕಾರಣ ಯಾಕೆ ಯಡಿಯೂರಪ್ಪ ಹೆಸರು ತರುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಯಡಿಯೂರಪ್ಪನವರ ರಾಜ್ಯ ಪ್ರವಾಸಕ್ಕೆ ಕಡಿವಾಣ ಹಾಕಿಲ್ಲ,ಅವರು ಪಕ್ಷ ಕ್ಕಾಗಿ ಸಂಘಟನೆ ಮಾಡುತ್ತಾರೆ. ಬಿಜೆಪಿ ತಂಡದ ಜೊತೆ ಕೆಲಸ ಮಾಡುತ್ತಾರೆ ಅವರು ಒಂಟಿ ಸಲಗ ಎಂದು ಯಾವ ಸಂದರ್ಭದಲ್ಲಿಯೂ ಹೇಳಿಲ್ಲ ಎಂದರು...
ವೀರಶೈವ ಲಿಂಗಾಯತ ಸಮಾಜ ಎಲ್ಲ ಸಮುದಾಯಗಳನ್ನು ಒಪ್ಪಿಕೊಂಡು ಅಪ್ಪಿಕೊಳ್ಳುವ ಸಮಾಜ ವೀರಶೈವ ಲಿಂಗಾಯತ ಸಮಾಜ ಎಲ್ಲಾ ಸಮುದಾಯ ಅನ್ನ ದಾಸೋಹ,ಶಿಕ್ಷಣ ದಾಸೋಹ,ಜ್ಞಾನ ದಾಸೋಹ ನೀಡಿದ್ದು ಲಿಂಗಾಯತ ಮಠ ಮಾನ್ಯಗಳು,ವೀರ ಶೈವ ಲಿಂಗಾಯತ ಎಲ್ಲಾ ಒಳ ಪಂಗಡಗಳು ಒಟ್ಟಾಗಿ ಇದ್ದೇವೆ ಎಂದರು.
ಸಂಪುಟ ಪುನಾರಚನೆ ಸಂದರ್ಭದಲ್ಲಿ ಮಾಧ್ಯಮಗಳಲ್ಲಿ ಸಂಭಾವ್ಯ ಪಟ್ಟಿ ಮಾಡುತ್ತಾರೆ ನನ್ನ ಹೆಸರು ತೋರಿಸಿದಾಗ ನಮ್ಮ ಕಾರ್ಯಕರ್ತರು ಖುಷಿ ಪಡ್ತಾರೆ,ನಾನು ಖುಷಿ ಪಡುತ್ತೇನೆ ನೀವೇ ಪ್ಲಸ್ ಮೈನಸ್ ತೋರಿಸುತ್ತೀರಿ ಎಂದು ಹೇಳಿದರು.
0 Comments