Ticker

6/recent/ticker-posts

Ad Code

Responsive Advertisement

109 ಕುಟುಂಬಗಳಿಗೆ ತುಮುಲ್ ವತಿಯಿಂದ 1 ಕೋಟಿ 9 ಲಕ್ಷ ಧನಸಹಾಯ

 ಮಧುಗಿರಿ : ಕೋವಿಡ್‍ನಿಂದ ಮೃತ ಪಟ್ಟ ಹೈನುಗಾರರ 109 ಕುಟುಂಬಗಳಿಗೆ ತುಮುಲ್ ವತಿಯಿಂದ 1 ಕೋಟಿ 9 ಲಕ್ಷ ಧನಸಹಾಯ ಮಾಡಲಾಗಿದೆ ಎಂದು ತುಮುಲ್ ಅಧ್ಯಕ್ಷ ಸಿ.ವಿ.ಮಹಾಲಿಂಗಯ್ಯ ತಿಳಿಸಿದರು.

ಪಟ್ಟಣದ ವಕ್ಕಲಿಗರ ಸಮುದಾಯ ಭವವನದಲ್ಲಿ ಬುಧವಾರದಂದು ತುಮಕೂರು ಸಹಕಾರಿ ಹಾಲು ಒಕ್ಕೂಟ ಹಾಗೂ ಮಧುಗಿರಿ ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿಗಳ ತಾಲೂಕು ಮಟ್ಟದ ಸಭೆ ಮತ್ತು ಎಸ್.ಎಸ್.ಎಲ್.ಸಿ., ಪಿ.ಯು.ಸಿ. ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಪ್ರಾದೇಶಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಹಕಾರ ಸಂಘಗಳ ಕುಂದು ಕೊರತೆಗಳನ್ನು ಆಲಿಸಲು ಪ್ರಾದೇಶಿಕ ಸಭೆಗಳನ್ನು ತಾಲೂಕು ಮಟ್ಟದಲ್ಲಿ ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿ 1274 ಸಂಘಗಳ ಮೂಲಕ ಪ್ರತಿದಿನ 8 ಲಕ್ಷ ಲೀಟರ್ ಹಾಲನ್ನು ಶೇಖರಣೆ ಮಾಡುತ್ತಿದ್ದು, 19.50 ಕೋಟಿ ರೂ ಗಳನ್ನು ಒಂದು ವಾರಕ್ಕೆ ಬಟವಾಡೆ ನೀಡಲಾಗುತ್ತಿದೆ ಎಂದ ಅವರು, ರೈತರಿಗೆ ಉತ್ತಮ ದರ ನೀಡಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುತ್ತಿದೆ ಎಂದರು.

ತುಮುಲ್ ಮಾಜಿ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕ ಕೊಂಡವಾಡಿ ಚಂದ್ರಶೇಖರ್ ಮಾತನಾಡಿ, ಉಪ ಕಸುಬಾಗಿದ್ದ ಹೈನುಗಾರಿಕೆ ಇಂದು ಮುಖ್ಯ ಕಸುಬಾಗಿದೆ. ಹೈನುಗಾರಿಕೆಯನ್ನು ನಂಬಿಕೊಂಡು ಲಕ್ಷಾಂತರ ಕುಟುಂಬಗಳು ಜೀವನ ನಡೆಸುತ್ತಿದ್ದು ಸಂಕಷ್ಟಕ್ಕೆ ಸಿಲುಕುವ ರೈತರ ಕುಟುಂಬಗಳಿಗೆ ರೈತ ಕಲ್ಯಾಣ ಟ್ರಸ್ಟ್ ವತಿಯಿಂದ ನೆರವು ನೀಡಲಾಗುತ್ತಿದೆ ಎಂದರು.

ವಿಧ್ಯಾರ್ಥಿಗಳು ಜೀವನದಲ್ಲಿ ಶಿಸ್ತು, ಸಂಯಮ, ನಯ, ವಿನಯ ರೂಡಿಸಿಕೊಳ್ಳಬೇಕು. ಇದರಿಂದ ಖಾಯಿಲೆಗಳನ್ನು ದೂರ ವಿರಿಸಬಹುದು. ಉತ್ತಮ ಶಿಕ್ಷಣ ಪಡೆದು ಉನ್ನತ ಸ್ಥಾನಗಳಿಸಿ ತಾಲೂಕು ಹಾಗೂ ಜಿಲ್ಲೆಗೆ ಗೌರವ ತರಬೇಕು ಮತ್ತು ಗುರು ಹಿರಿಯರನ್ನು ಗೌರವಿಸಬೇಕು ಎಂದರು.

ವ್ಯವಸ್ಥಾಪಕ ನಿರ್ದೇಶಕ ಸುಬ್ರಾಯ ಭಟ್ ಮಾತನಾಡಿ, ಹಾಲು ಉತ್ಪಾದಕರು ಗುಣ ಮಟ್ಟಕ್ಕೆ ಅಧ್ಯತೆ ನೀಡಬೇಕು ನಂದಿನಿ ಖನಿಜ ಮಿಶ್ರಣ ಉಪಯೋಗಿಸುವುದರಿಂದ ಹಾಲಿನ ಪ್ರಮಾಣ ಹೆಚ್ಚುತ್ತದೆ ಎಂದ ಅವರು, ಗ್ರಾಹಕರಿಗೆ ತಾಜಾತನದ ಹಾಲು ನೀಡುವ ಸಲುವಾಗಿ ಹೆಚ್ಚು ಬಿ.ಎಂ.ಸಿ.ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ ಎಂದರು.

ಇದೆ ಸಂಧರ್ಭದಲ್ಲಿ ಪ್ರತಿಭಾವಂತ ವಿಧ್ಯಾರ್ಥಿಗಳನ್ನು ಹಾಗೂ ಉತ್ತಮವಾಗಿ ಕಾರ್ಯನಿರ್ವಹಿಸಿದ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳನ್ನು ಗೌರವಿಸಲಾಯಿತು.

ಒಕ್ಕೂಟದ ವ್ಯವಸ್ಥಾಪಕ ಡಾ.ನರಸಿಂಹನ್, ವಿಸ್ತರಣಾಧಿಕಾರಿಗಳಾದ ಶಂಕರ್‍ನಾಗ್, ಗಿರೀಶ್, ಧರ್ಮವೀರ್,  ದೀಕ್ಷಿತ್, ಮಹಾಲಕ್ಷ್ಮಿ, ರವಿಕಿರಣ್, ಉಪವ್ಯವಸ್ಥಾಪಕ ವೀರಣ್ಣ, ಡಾ.ನರಸಿಂಹಮೂರ್ತಿ ಇದ್ದರು.

Post a Comment

0 Comments

Ad Code

Responsive Advertisement