ಅಕ್ಟೋಬರ್ 01, ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಬುರುಡೆ ಬಿಡುವುದರಲ್ಲಿ ನಂ.1. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದರೆ ಅಸೂಯೆ, ಸುಳ್ಳು, ಬುರುಡೆ. ಸುಳ್ಳು ಎಂದರೆ ಸಿದ್ದರಾಮಯ್ಯ ಎಂದು ಕಂದಾಯ ಸಚಿವ ಆರ್. ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಸಚಿವರು, ಸಿದ್ದರಾಮಯ್ಯ ತಮ್ಮ ಅಧಿಕಾರದ ಅವಧಿಯಲ್ಲಿಯೇ 7 ಕೆಜಿ ಅಕ್ಕಿ ಕೊಟ್ಟಿಲ್ಲ, ಅದಕ್ಕಾಗಿ ಹಣವನ್ನೂ ಇಟ್ಟಿರಲಿಲ್ಲ, ಬರೀ ಸುಳ್ಳು. ಈ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿಯವರೇ ಸ್ಪಷ್ಟಪಡಿಸಿದ್ದಾರೆ. ಹೀಗಿರುವಾಗ ಪ್ರಚಾರಕ್ಕಾಗಿ ಸಿದ್ದರಾಮಯ್ಯನವರು ಸುಳ್ಳು ಹೇಳಿಕೆಗಳನ್ನು ನೀಡುತ್ತಾ ತಿರುಗುತ್ತಿದ್ದಾರೆ ಎಂದು ಕಿಡಿಕಾರಿದರು. ಹೈಕಮಾಂಡ್ ಮೆಚ್ಚಸಲು ಈ ರೀತಿ ಹೇಳಿಕೆ ನೀಡುತಿದ್ದಾರೆ.
ಇನ್ನು ಜಾತಿ ಗಣತಿ ವರದಿ ಬಿಡುಗಡೆ ವಿಚಾರವಾಗಿ ಕೂಡ ಸುಳ್ಳು ಹೇಳುತ್ತಿದ್ದಾರೆ. ವರದಿ ಸಿದ್ಧವಿದ್ದರೂ ಬಿಡುಗಡೆ ಮಾಡುವ ಧೈರ್ಯ ಮಾಡಿಲ್ಲ. ಸಿದ್ದರಾಮಯ್ಯ ಏನೇ ಹೇಳಿದರೂ ಅದು ಕೇವಲ ಸುಳ್ಳು. 7ಕೆ.ಜಿ ಅಕ್ಕಿಯಿಂದ ಹಿಡಿದು ಎಲ್ಲವು ಬುರುಡೆ ಬಿಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

0 Comments