ಬೆಂಗಳೂರು, ಸೆಪ್ಟೆಂಬರ್ 20 (ಕರ್ನಾಟಕ ವಾರ್ತೆ): ದೇವಸ್ಥಾನಗಳ ನಿರ್ವಹಣೆಗೆ ಸರ್ಕಾರದಿಂದ ಬಿಡುಗಡೆಯಾಗುತ್ತಿರುವ ತಸ್ತೀಕ್ ಅನುದಾನವು ಇತರೆ ತಾಂತ್ರಿಕ ಕಾರಣಗಳಿಂದ ವ್ಯರ್ಥವಾಗುತ್ತಿದ್ದು, ಅದನ್ನು ತಡೆಗಟ್ಟಲು ರಾಜ್ಯಾದ್ಯಂತ ತಂತ್ರಜ್ಞಾನವನ್ನು ಸರಳೀಕರಣಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ವಿಧಾನಸಭಾ ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯರಾದ ಶ್ರೀಮತಿ ಡಾ: ಅಂಜಲಿ ಹೇಮಂತ್ ನಿಂಬಾಳ್ಕರ್ ಅವರ ಪ್ರಶ್ನಗೆ ಉತ್ತರಿಸಿದ ಮುಖ್ಯಮಂತ್ರಿಗಳು, ಬಾಕಿ ಇರುವ ತಸ್ತೀಕ್ ಅನುದಾನವನ್ನು ಅತಿ ಶೀಘ್ರದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಸದನಕ್ಕೆ ಮಾಹಿತಿ ನೀಡಿದರು.

0 Comments