ಅತ್ಯಂತ ಮಹತ್ವದ ಸ್ಥಾನವನ್ನು "ಗುರು"ವಿಗೆ ಕೊಟ್ಟ ದೇಶ ಭಾರತ. ಭಾರತದ ಸಂಸ್ಕೃತಿ ಹಾಗೂ ಪರಂಪರೆ, "ಗುರುವನ್ನು ದೇವರ ರೂಪ"ದಲ್ಲಿ ಕಾಣು ಎಂದು ತಿಳಿಸಿಕೊಡುತ್ತದೆ.ಜಾತಿ ,ಧರ್ಮ , ಕುಲ ಗೋತ್ರ ,ಮತ-ಪಂಥ, ಮೇಲು-ಕೀಳು, ಹೆಣ್ಣು-ಗಂಡು...... ಎಲ್ಲವನ್ನು ಮೀರಿದ್ದು "ಗುರು ಪಂಥ" ಹಾಗೂ "ಗುರು ಪರಂಪರೆ". ಆ ಗುರುಪರಂಪರೆ- ಗುರುಗಳನ್ನು ಗೌರವಿಸುವ ವ್ಯಕ್ತಿತ್ವವನ್ನು ಬಾಲ್ಯದಿಂದಲೇ ಬೆಳೆಸಿಕೊಂಡು ಬಂದ ಹಿನ್ನೆಲೆಯಲ್ಲಿ, ಎಲ್ಲ ಗುರುಗಳಿಗೆ ಭಕ್ತಿಪೂರ್ವಕವಾಗಿ ನಮನಗಳನ್ನು ತಿಳಿಸುತ್ತಾ ಡಾ.ಗುರುರಾಜ ಪೋಶೆಟ್ಟಿಹಳ್ಳಿರವರು ಇತ್ತೀಚಿಗೆ ರಚಿಸಿರುವ ಕೃತಿ ‘ವಂದೇ ಗುರು ಪರಂಪರಾಮ್’ ನಲ್ಲಿ ಎತ್ತರಕ್ಕೆ ಏರಿ ಬೆಳೆದರೇನಾಯಿತು ಗುರುವೇ ನೀವು ಮೂಡಿಸಿದ ಅರಿವು ಜೀವನದ ದಾರಿದೀಪವಾಗಿ ಬೆಳಗಿದೆ ಎಂದು ಬಣ್ಣಿಸಲಾಗಿದೆ.
ಸರಿ ದಾರಿಯನ್ನು ತೋರುತ್ತಾ, ಉತ್ತಮ ಪ್ರಜೆಯಾಗಿ ಬಾಳುವುದನ್ನು ತೋರಿಸುವ ದೀವಿಗೆ ಅದು ಗುರು ಮಾತ್ರ.'ಒಂದಕ್ಷರ ಕಲಿಸಿದಾತ ಗುರುವು' ಎಂಬ ವೇದೋಕ್ತಿಯಂತೆ ಗುರುವೊಬ್ಬನ ಗೌರವವು ಬೋಧನೆಯಿಂದಲೆ ವೃದ್ಧಿಸುತ್ತದೆ, ಜೊತೆಗೆ ವ್ಯಕ್ತಿತ್ವದ ಸೌಜನ್ಯ, ಸೇಹಶೀಲತೆ ಎಲ್ಲರ ಗಮನವನ್ನು ಸೆಳೆಯುತ್ತದೆ.ಜೀವನವೆಂಬ ಭವಸಾಗರವನ್ನು ಪಾರು ಮಾಡುವವರು ಗುರುಗಳು. ಆಚಾರ್ಯ ದೇವೋ ಭವ - ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬ ದಾಸರ ಪದವೇ ಇದೆ . ಚಿಂತನೆಯನ್ನು ಪರಿಪಕ್ವಗೊಳಿಸೋ ಗುರುಗಳು ; ಪ್ರಯತ್ನದಿಂದ ಸಾಧ್ಯಾವಾಗುವ ಕ್ಷಣದಲ್ಲಿ ಸಾಮರಸ್ಯದ ಸಾಮೀಪ್ಯವನ್ನು ಪರಿಚಯಿಸುವ, ಶಿಲೆಯಿಂದ ಪೂಜಾ ವಿಗ್ರಹಮಾಡಿ ಭಕ್ತಿ ಮಾರ್ಗವ ತೋರುವ ಶಿಲ್ಪಿಗೆ ಅನಂತ ನಮನಗಳು.
ಗುರು ಎಂದರೆ ವ್ಯಕ್ತಿಯಲ್ಲ, ಒಂದು ಶಕ್ತಿ... ಅಜ್ಞಾನದ ಕತ್ತಲೆಯ ಕಳೆದು ಸುಜ್ಞಾನದ ಕಡೆ ಕರೆದುಕೊಂಡು ಹೋಗುವ ಶಬ್ದವೇ ಗುರು..."ನಮಗೆ 'ಅರಿವಾಗಿದೆ' ಎಂದರೆ, ಅದು ನಮ್ಮ ಅನುಭವಕ್ಕೆ ಬಂದಿರಲೇ ಬೇಕು. "ಅನುಭವವೇ ಅರಿವು""ಅರಿವೇ ಗುರು " ಅರಿವಿನ ಕಣ್ಣು ತೆರೆಸುವರು... ಬರೀ ಅಕ್ಷರಾಭ್ಯಾಸ ಮಾಡಿಸಿದವರು, ಆಧ್ಯಾತ್ಮಿಕ ಜ್ಞಾನವನ್ನು ನೀಡಿದರಷ್ಟೇ ಗುರುಗಳಲ್ಲ. ನಮ್ಮ ಜೀವನದಲ್ಲಿ ಸಣ್ಣ ಪುಟ್ಟ ವಿಷಯಗಳನ್ನು ಕಲಿಸದವರೂ ಕೂಡ ಒಂದು ರೀತಿಯಲ್ಲಿ ಗುರುಗಳೇ.
ಗುರುವಿಂದ ದೈವಗಳು ಗುರುವಿಂದ ಬಂಧುಗಳು ಗುರುವಿಂದಲೇ ಸಕಲ ಪುಣ್ಯಂಗಳುಬ್ಲೋಕಕ್ಕೆ ಗುರುವೀಗ ದೈವ ಸರ್ವಜ್ಞ || ತಂದೆ ತಾಯಿ ಜೀವವನ್ನು ಕೊಟ್ಟರೆ ಗುರುಗಳು ಸುಶಿಕ್ಷಿತ ಜೀವನವನ್ನು ಕೊಡುವರು ಎಂದು ಹೇಳಿರುವ ಅರಿಸ್ಟಾಟಲ್ ಮಾತು ಅರ್ಥಗರ್ಭಿತ. ಜೀವವು ಇರುವವರೆಗೂ ನಾವು ವಿದ್ಯಾರ್ಥಿಗಳು, ಪ್ರಪಂಚ ಒಂದು ವಿದ್ಯಾಲಯ. ಭಾಗವತ ಪುರಾಣದಲ್ಲಿ ಬರುತ್ತದೆ ಗಾಳಿ, ನೀರು ,ದುಂಬಿ ಎಲ್ಲ ಪ್ರಾಕೃತಿಕ ವಸ್ತುಗಳು ಜೀವನದಲ್ಲಿ ಬರುವ ವ್ಯಕ್ತಿಗಳಿಂದಲೂ ಕಲಿಯುವುದು ಇರುತ್ತದೆ ಅಂದರೆ ನಾವು ಆ ಜೀವ ಪರ್ಯಂತ ಅಧ್ಯಯನ ಶೀಲರಾಗಿರಬೇಕು ಎಂಬುದು ನಮ್ಮ ಧರ್ಮ ನಮ್ಮ ಸಂಸ್ಕೃತಿ ನಮಗೆ ಹೇಳಿಕೊಡುತ್ತದೆ .
"ಅರಿವಿಲ್ಲದಾ ಮನಕೆ ಜ್ಞಾನ ನೀಡಿದವನು..!!ಗುರಿ ಇಲ್ಲದಾ ನಡೆಗೆ ದಾರಿ ತೋರಿದವನು..!!ಸನ್ಮಾರ್ಗದೆಡೆಗೆ ಕೈಹಿಡಿದು ನಡೆಸಿದವನು..!!ತಪ್ಪೆಸಗಿದ ನಮ್ಮ ತಿದ್ದಿ ತೀಡಿದವನು..!!ಒಪ್ಪೆಸಗಿದಾಗ ಬೆನ್ನು ತಟ್ಟಿ ಶಹಭಾಸ್ ಎಂದವನು..!!ತAದೆ-ತಾಯಿ ನೀಡಿದ ಜನ್ಮಕೆ ಮುಕ್ತಿದಾತನಿವನು..!! ಆತನೆ ಗುರುವೂ,, ನಮ್ಮ ಒಲವೂ,, ಎಲ್ಲರ ಗೆಲುವೂ..!!
ಬಾಳಿನ ಗುರಿಗೆ ದಾರಿ ತೋರಿಸಿ , ಬದುಕನು ಹಸನಾಗಿಸಿದ, ನಾಮಮಾತ್ರದಿಂದ ನೈಜತೆಯೆಡೆಗೆ, ದುರ್ಗಮದಿಂದ ಸುಗಮದೆಡೆಗೆ, ಕನಸಿನಿಂದ ಸಾಕಾರ ರೂಪದೆಡೆಗೆ, ಮೌಢ್ಯತೆಯಿಂದ ಪ್ರಾತಕ್ಷದೆಡೆಗೆ, ಶಿಲೆಯಿಂದ ಶಿಲ್ಪದವರೆಗೆ , ಮೊಳಕೆಯಿಂದ ಮರದವರೆಗೆ, ಅಣುವಿಂದ ಪರಮಾಣುಯೆಡೆಗೆ, ಅಕ್ಷರದಿಂದ ವಾಕ್ಯದೆಡೆಗೆ, ಆರಂಭದಿAದ ಅಂತ್ಯದವರೆಗೆ, ಹೆಜ್ಜೆಯಿಂದ ಮುಕ್ತಿ ಪಥದವರೆಗೆ, ನಮ್ಮನ್ನೋಯ್ಯುವ ಮಾರ್ಗದರ್ಶಿ, ನಾಯಕ, ಬೆಂಬಲಿಗ, ಬಿದ್ದರೆ ಕೈ ಹಿಡಿದು ಮೆಲೆತ್ತುವವ ಜ್ಞಾನದ ಸಾಕಾರ ರೂಪವೇ ಗುರು. ಗುರಿಕಾರ ಗುರುವನ್ನು ಕುರಿತು ಲೇಖಕರು 27 ಲೇಖನಗಳಲ್ಲಿ ವಿಶ್ವದರ್ಶನ ಮಾಡಿಸುತ್ತಾರೆ.
ಇಂತಹ ಪುಸ್ತಕಗಳನ್ನು ವಿಶ್ವವಿದ್ಯಾಲಯಗಳು ಪಠ್ಯ ಪುಸ್ತಕಗಳಾಗಿ ಆಯ್ಕೆ ಮಾಡಲಿ ಎಂದು ಆಶಿಸುವೆ. ಅವರಿಗೆ ಈ ಕೃತಿ ಕುರಿತು ಸಮಸ್ತ ಕನ್ನಡ ಓದುಗರ ಪರವಾಗಿ ಅಭಿನಂದನೆಗಳು .
ಪರಿಚಯ : ಡಾ.ಬ್ರಹ್ಮತೇಜ ವೆಂಕಟ ರಾಮಯ್ಯ ಸಂಸ್ಥಾಪಕ ಅಧ್ಯಕ್ಷರು – ಅಖಿಲ ಭಾರತ ಸತ್ಸಂಗ ಭಜನಾ ಮಹಾಮಂಡಳಿ ಸಭಾ
ಪುಸ್ತಕದ ವಿವರ‘ವಂದೇ ಗುರು ಪರಂಪರಾಮ್’
ಲೇಖಕರು : ಡಾ.ಗುರುರಾಜ ಪೋಶೆಟ್ಟಿಹಳ್ಳಿ
ಪ್ರಕಾಶಕರು : ಪ್ರಣವ ಮೀಡಿಯಾ ಹೌಸ್ ಪ್ರಕಾಶನ , ಬೆಂಗಳೂರು – 97393 69621
ಪುಟಗಳು : 184
ಬೆಲೆ : ರೂ 180/-
ಆಕಾರ : ಡೆಮ್ಮಿ 1/8



0 Comments