Ticker

6/recent/ticker-posts

Ad Code

Responsive Advertisement

ಪತ್ರಕರ್ತರ ಸಹಕಾರ ಸಂಘದಿಂದ ಆತ್ಮೀಯ ಬೀಳ್ಕೊಡುಗೆ

ಕರ್ನಾಟಕ ಪತ್ರಕರ್ತರ ಸಹಕಾರ ಸಂಘದಲ್ಲಿ ಕಾರ್ಯದರ್ಶಿಯಾಗಿ ಸುದೀರ್ಘ ಸೇವೆ ಸಲ್ಲಿಸಿ, ಸೆಪ್ಟಂಬರ್ 30 ರಂದು ನಿವೃತ್ತರಾದ ಎ.ಎಸ್. ನಾಗರಾಜಸ್ವಾಮಿ ಮತ್ತು ಬಿ.ಎಸ್. ಲತಾ ದಂಪತಿಯನ್ನು ಸಂಘದ ಆಡಳಿತ ಮಂಡಳಿ ಆತ್ಮೀಯವಾಗಿ ಬೀಳ್ಕೊಟ್ಟಿತು. 36 ವರ್ಷಗಳ ಸೇವಾ ಅವಧಿಯಲ್ಲಿ ಕಳಂಕರಹಿತವಾಗಿ ಸಂಘದ ಅಭಿವೃದ್ಧಿಗೆ ನೀಡಿದ ಅವರ ಕೊಡುಗೆಯನ್ನು ಆಡಳಿತ ಮಂಡಳಿ ಮುಕ್ತ ಕಂಠದಿಂದ ಶ್ಲಾಘಿಸಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಕೆ. ರಾಘವೇಂದ್ರ, ಉಪಾಧ್ಯಕ್ಷ ಶಿವಣ್ಣ, ಖಜಾಂಚಿ ಮುಂಜಾನೆ ಸತ್ಯ, ನಿರ್ದೇಶಕರಾದ ಎ.ಎಂ.ಸುರೇಶ್, ಎಸ್. ಲಕ್ಮಿನಾರಾಯಣ, ಸಚ್ಚಿದಾನಂದ ಕುರಗುಂದ, ಬಿ.ಎನ್. ಮೋಹನ್ ಕುಮಾರ್, ಎಂ.ಡಿ. ಶಿವಕುಮಾರ್ (ಬೆಳ್ಳಿತಟ್ಟೆ), ಎಂಎಸ್. ರಾಜೇಂದ್ರಕುಮಾರ್, ಸುಮನಾ ಲಕ್ಮೀಶ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.



Post a Comment

0 Comments

Ad Code

Responsive Advertisement