Ticker

6/recent/ticker-posts

Ad Code

Responsive Advertisement

ಸಕಲೇಶಪುರ ಪ್ರೆಸ್ ಕ್ಲಬ್ ಕೌನ್ಸಿಲ್ ಉದ್ಘಾಟನಾ ಸಮಾರಂಭ .

ಸಕಲೇಶಪುರ ಪುರಭವನದಲ್ಲಿ ನಡೆದ ಪ್ರೆಸ್ ಕ್ಲಬ್ ಕೌನ್ಸಿಲ್ ಕಚೇರಿ ಉದ್ಘಾಟನಾ ಹಾಗೂ ಪದಾಧಿಕಾರಿಗಳ ಪದಗ್ರಹಣ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭ ಏರ್ಪಡಿಸಲಾಗಿತ್ತು . ಪ್ರೆಸ್ ಕ್ಲಬ್ ಕಚೇರಿಯನ್ನು ಎಸ್. ಎಮ್ ಟವರ್ ನಲ್ಲಿ ಪ್ರೆಸ್ ಕ್ಲಬ್ ಕೌನ್ಸಿಲ್  ರಾಜ್ಯಾಧ್ಯಕ್ಷ ರಾಘವೇಂದ್ರ ಆಚಾರ್ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಆಶಾ ರವರು ಹಾಗೂ ಜಿಲ್ಲಾಧ್ಯಕ್ಷ ಸುನೀಲ್ ಕುಂಬೇನಹಳ್ಳಿ ಉದ್ಘಾಟನೆಯನ್ನು  ನೆರವೇರಿಸಿದರು . 

ನಂತರ ಸಕಲೇಶಪುರದ ಪುರಭವನದಲ್ಲಿ ಪ್ರೆಸ್ ಕ್ಲಬ್ ಕೌನ್ಸಿಲ್  ನ ಪದಾಧಿಕಾರಿಗಳ ಪದಗ್ರಹಣ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭವನ್ನು ಏರ್ಪಡಿಸಲಾಗಿತ್ತು . ಸಮಾರಂಭದಲ್ಲಿ ಮುಖ್ಯ ಅತಿಥಿಗಳಾದ ದಿವ್ಯಸಾನಿಥ್ಯವನ್ನು ವಹಿಸಿದ್ದ ಪರಮ ಶ್ರೀ ಸದಾಶಿವ ಶಿವಾಚಾರ್ಯ ಮಹಾಸ್ವಾಮಿಗಳು ಹಿರೇಮಠ ಕಾರ್ಜುವಳ್ಳಿ ಮತ್ತು ನಿಕಟಪೂರ್ವ ಶಾಸಕರಾದ  ಎಚ್ ಎಂ ವಿಶ್ವನಾಥ್ ರವರು, ಪುರಸಭಾ ಅಧ್ಯಕ್ಷರಾದ ಶ್ರೀಯುತ ಕಾಡಪ್ಪನವರು ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಆಶಾರವರು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟನೆಯನ್ನು ನೆರವೇರಿಸಿದರು . 

ಈ ಸಂದರ್ಭದಲ್ಲಿ  ಹಲವು ಸಾಧಕರನ್ನು ಗುರುತಿಸಿ ಅವರುಗಳಲ್ಲಿ ಪ್ರಸಾದ್ ರಕ್ಷಿದಿ ರಂಗಭೂಮಿ ಕಲಾವಿದರೂ, ಬ್ಯಾಮ ಲಕ್ಷ್ಮಣ ತೇಜಸ್ವಿ ಸಾಹಿತಿಗಳು,  ಶ್ರೀ ರಮೇಶ್ ಈಜು  ಮತ್ತು ಮುಳುಗು ತಜ್ಞರು, ಹಾಗೂ ಹಿರಿಯ ನಿವೃತ್ತ  ಪತ್ರಕರ್ತರಾದ ಸಿ ಶಿವಕುಮಾರ್ ಅವರನ್ನು ಸನ್ಮಾನಿಸಲಾಯಿತು . ಈ ಸಭೆಯಲ್ಲಿ ರಾಜಕೀಯ ಮುಖಂಡರು ಹಾಗೂ ಗಣ್ಯ ವ್ಯಕ್ತಿಗಳು ಪುರಸಭೆಯ ಹಾಲಿ ಸದಸ್ಯರುಗಳು ಹಾಗೂ ಮಾಜಿ ಸದಸ್ಯರುಗಳು ಹಾಜರಿದ್ದರು. ಅವರುಗಳನ್ನು ಸಹ ಸನ್ಮಾನಿಸಲಾಯಿತು .  ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿದರು   ನಂತರ  ಪ್ರೆಸ್ ಕ್ಲಬ್ ಕೌನ್ಸಿಲ್ ನ ರಾಜ್ಯಾಧ್ಯಕ್ಷ  ರಾಘವೇಂದ್ರ ಆಚಾರ್ ರವರಿಂದ ಸಕಲೇಶಪುರ ತಾಲ್ಲೂಕು ಶಾಖೆಯ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀಯುತ ಭೈರಪ್ಪ ಸಕಲೇಶ್ವರ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಶ್ರೀಯುತ  ರಘು ಎಸ್‌ ಸ್ಟುಡಿಯೋ  ಮತ್ತು ಖಜಾಂಚಿಯಾಗಿ ಸಗೀರ್  ಆಹ್ಮದ್ ಹಾಗೂ ಜಿಲ್ಲಾ ಸಮಿತಿ ಸದಸ್ಯರಾಗಿ ಟಿಪಿ ಕೃಷ್ಣನ್ ಮತ್ತು ಬೋರೆಗೌಡ ಮತ್ತು ಪದಾಧಿಕಾರಿಗಳ ಪದಗ್ರಹಣ ನೆರವೇರಿಸಿದರು.

Post a Comment

0 Comments

Ad Code

Responsive Advertisement