ಮಧುಗಿರಿ: ತಾಲೂಕಿನ ಗೊಂದಿಹಳ್ಳಿ ಪಂಚಾಯಿತಿಯ ಗೊಂದಿಹಳ್ಳಿ ಗ್ರಾಮದಲ್ಲಿ ಇಂದು ವ್ಯಾಕ್ಸಿನ್ ಮೇಳವನ್ನು ಏರ್ಪಡಿಸಿದ್ದು ನೂಡಲ್ ಅಧಿಕಾರಿಯಾದ ಅನಂತರಾಮ್ ಹಾಗೂ ತಾಲೂಕು ದಂಡಾಧಿಕಾರಿ ವೈ.ರವಿ ತಾಲೂಕ್ ಕಾರ್ಯನಿರ್ವಾಹಕ ದೊಡ್ಡಸಿದ್ದಯ್ಯ, ಟಿಎಚ್ಒ ರಮೇಶ್ ಬಾಬು, ಪಂಚಾಯ್ತಿಯ ಅಧ್ಯಕ್ಷರಾದ ರಮ್ಯಾ ಕೃಷ್ಣ ಕಾರ್ಯಕ್ರಮವನ್ನು ಉದ್ಘಾಟಿಸಿ ಪ್ರತಿ ಹಳಿಗಳ ಮನೆ ಮನೆಗಳ ಬೇಟಿ ಮಾಡಿ ಅವರಿಗೆ ಆತ್ಮಸ್ಥೈರ್ಯ ಜೊತೆಗೆ ಕೋವಿಡ್ ಲಸಿಕೆಯನ್ನು ಪಡೆಯಲು ತಿಳಿಸಿ ಇತರರಿಗೆ ಲಸಿಕೆಯನ್ನು ಕೂಡ ಮಾಡಲಾಯಿತು. ಮಾಸ್ಕ್ ದರಿಸುವುದು, ಆಗಾಗ ಸ್ಯಾನಿಟೈಸರ್ ಉಪಯೋಗಿಸುವುದು ಮತ್ತು ದೈಹಿಕ ಅಂತರ ಕಾಯ್ದುಕೊಂಡು ಜೀವನ ನಡೆಸಲು ಸಾರ್ವಜನಿಕರಿಗೆ ತಿಳಿಸಲಾಯಿತು.
ಈ ಸಂದರ್ಭದಲ್ಲಿ ಎ.ಡಿ ಮಧುಸೂದನ್, ಎಡಿ ಸಿಡಿಪಿಒ ಸ್ವಾಮಿ, ಪಿಡಿಒ ಗೋಪಾಲಕೃಷ್ಣ, ಆರೋಗ್ಯ ಇಲಾಖೆಯ ಡಾ.ಶಶಿಕುಮಾರ್, ಚಂದ್ರಕಲಾ, ರಂಗಸ್ವಾಮಿ, ಕಂದಾಯ ತನಿಖಾಧಿಕಾರಿ ಸಿದ್ದರಾಜು, ಕಂದಾಯ ಇಲಾಖೆಯ , ಶ್ರೀಧರ್, ನಟರಾಜ್, ಶ್ರೀನಿವಾಸ್, ನಾಗಭೂಷಣ್ ಹಾಗೂ ಗ್ರಾ.ಪಂ.ಉಪಾಧ್ಯಕ್ಷೆ ನಾಗಮಣಿ ಎಲ್ಲಾ ಗ್ರಾ.ಪಂ.ಸಿಬ್ಬಂದಿಗಳು ಹಾಗೂ ಸದಸ್ಯರುಗಳು, ಮತ್ತಿತರರಿದ್ದರು.
-VARTHAJALA, MADHUGIRI



0 Comments