Ticker

6/recent/ticker-posts

Ad Code

Responsive Advertisement

ಕಟ್ಟಡ ಕಾರ್ಮಿಕರಿಂದ ಮುಖ್ಯಮಂತ್ರಿ ಮನೆ ಚಲೋ

2006 ರಲ್ಲಿ ಕಟ್ಟಡ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ನೀಡುವ ಉದ್ದೇಶದಿಂದ ರಚನೆಯಾದ  ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಲ್ಯಾಣ ಮಂಡಳಿ, ಮಂತ್ರಿಗಳು, ಅಧಿಕಾರಿಗಳ ಕಪಿಮುಷ್ಠಿಗೆ ಸಿಲುಕಿ, ಅದರ ಉದ್ದೇಶವೇ ಮಣ್ಣು ಪಾಲಾಗಿದೆ. ಕಾರ್ಮಿಕರಿಗೆ ನೇರ ನಗದು ವರ್ಗಾವಣೆ ಸವಲತ್ತು ನೀಡಲು ಕಾನೂನಿನ ಕೂದಲು ಸೀಳಿ ನೂರೆಂಟು ಅಡ್ಡಿಗಳನ್ನೊಡ್ಡುತ್ತಾರೆ. ಆದರೆ ಕಾರ್ಮಿಕರಿಗೆ ಅಗತ್ಯವಿಲ್ಲದ ಟೆಂಡರ್ ಆಧಾರಿತ ಕಾರ್ಯಕ್ರಮಗಳನ್ನು ಕಾನೂನು, ನಿಯಮಾವಳಿ ಮೀರಿ ಜಾರಿಗೆ ತರುತ್ತಾರೆ. ಇದರಿಂದ ಮಂಡಳಿಯ ಹಣ ಕಾರ್ಮಿಕರಿಗೆ ಸಿಗುವ ಬದಲು, ಮಂತ್ರಿಗಳು, ಅಧಿಕಾರಿಗಳ ಬಂಗಲೆ ಸೇರುತ್ತಿದೆ. ಕಲ್ಯಾಣ ಮಂಡಳಿ ಕಾರ್ಮಿಕರ ಸ್ವತ್ತು. ಇಲ್ಲಿರುವ ಹಣ ಕಾರ್ಮಿಕರ ಹಿತಕ್ಕಾಗಿ ಬಳಕೆ ಆಗಬೇಕು. 

ಈ ಹಿನ್ನೆಲೆಯಲ್ಲಿ ಭ್ರಷ್ಟರಿಂದ ಕಲ್ಯಾಣ ಮಂಡಳಿ ಉಳಿಸಲು ಒತ್ತಾಯಿಸಿ ಸಾವಿರಾರು ಕಟ್ಟಡ ನಿರ್ಮಾಣ ವಲಯದ ಕಾರ್ಮಿಕರಿಂದ ಸೆಪ್ಟೆಂಬರ್ 20 ರಂದು ‘ಮುಖ್ಯಮಂತ್ರಿ ಮನೆ ಚಲೋ’ ಹೋರಾಟ ವನ್ನು ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕ ಸಂಘಗಳ ಸಮನ್ವಯ ಸಮಿತಿ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದೆ.  

ಅಂದು ಬೆಳೆಗ್ಗೆ 11 ಗಂಟೆಗೆ ಸಿಟಿ ರೈಲ್ವೆ ನಿಲ್ದಾಣದಿಂದ ಮುಖ್ಯಮಂತ್ರಿ ಮನೆವರೆಗೆ ಸುಮಾರು 10 ಸಾವಿರಕ್ಕೂ ಅಧಿಕ ಕಟ್ಟಡ ನಿರ್ಮಾಣ ಕಾರ್ಮಿಕರು ಪ್ರತಿಭಟನಾ ರ‍್ಯಾಲಿ ನಡೆಸಲಿದ್ದಾರೆ.

ಪ್ರಮುಖ ಬೇಡಿಕೆಗಳು

ಕೊವೀಡ್ ಪರಿಹಾರ 10 ಸಾವಿರ ನೀಡಬೇಕು ಬಾಕಿ ಇರುವ ಪರಿಹಾರ ಹಣ ಕೂಡಲೇ ವರ್ಗಾವಣೆ

ಆನ್‌ಲೈನ್ ನೋಂದಣಿ ಆರಂಭಿಸಬೇಕು,ಬೋಗಸ್ ಕಾರ್ಡಗೆ ಕಡಿವಾಣ ಹಾಕಬೇಕು.

ಶೈಕ್ಷಣಿಕ ಸಹಾಯಧನಕ್ಕೆ ಅರ್ಜಿ ಸಲ್ಲಿಕೆ ಕೂಡಲೇ ಆರಂಭಿಸಬೇಕು. :

ಕೋವಿಡ್‌ನಿಂದ ಮೃತಪಟ್ಟ ಕಾರ್ಮಿಕರಿಗೆ 2 ಲಕ್ಷ ಪರಿಹಾರ ನೀಡಬೇಕು

ಬಾಕಿ ಅರ್ಜಿಗಳು ಕೂಡಲೇ ವಿಲೇವಾರಿ ಮಾಡಬೇಕು

ಹೆಚ್ಚಿಸಲಾದ ಮದುವೆ ಧನಸಹಾಯ, ಪಿಂಚಣಿ ಧನ ಸಹಾಯ ಜಾರಿಯಾಗಬೇಕು.

ಆರೆ ಕಾಸಿನ ವೈದ್ಯಕೀಯ ಸಹಾಯಧನ ಕೈ ಬಿಡಿ 5 ಲಕ್ಷ ವೈದ್ಯಕೀಯ ನೆರವು ಜಾರಿ ಮಾಡಿ

ಸಹಜ ಮರಣಕ್ಕೆ 5 ಲಕ್ಷ ಅಪಘಾತ ಸಾವಿಗೆ 10 ಲಕ್ಷ ಪರಿಹಾರದ ಮೊತ್ತ ಹೆಚ್ಚಿಸಿ

ಹೆರಿಗೆ ಭತ್ಯೆಯನ್ನು ಪುರುಷ ಫಲಾನುಭವಿಯ ಪತ್ನಿಗೂ ವಿಸ್ತರಿಸಿ:

ಮನೆ ನಿರ್ಮಾಣಕ್ಕೆ 5 ಲಕ್ಷ ರೂಪಾಯಿ ಸಹಾಯಧನ ನೀಡಿ:

ಪ್ರಕಟಿಸಿರುವ 19 ಸೌಲಭ್ಯಗಳನ್ನು ಜಾರಿಗೊಳಿಸಿ.


ಕಲ್ಯಾಣ ಮಂಡಳಿಯಲ್ಲಿ ನಡೆಸಿರುವ ಈ ಕೆಳಗಿನ ಖರೀದಿಗಳು ತನಿಖೆಯಾಗಬೇಕು.  

21 ಲಕ್ಷ ಕಳಪೆ ರೇಷನ್ ಕಿಟ್, ಟೂಲ್ ಕಿಟ್, ಸುರಕ್ಷಾ ಕಿಟ್, ಬೂಸ್ಟಪ್ ಕಿಟ್ ಖರೀದಿಗಳು. 

ಆಂಬ್ಯೂಲೆನ್ಸ್ಗಳು, ಇನ್ನೋವಾ ಕಾರು ನೂರಾರು ಕಂಪ್ಯೂಟರ್,ಟಿ.ವಿ ಖರೀದಿ! ಕ್ಯಾಲೆಂಡರ್ ಮುದ್ರಣ

ವಲಸಿಗರ ಹೆಸರಲ್ಲಿ ಭೌವ್ಯ ಸೌಧಗಳನ್ನು ಕಟ್ಟುವ ಪ್ರಸ್ತಾವ ಕೈ ಬಿಡಬೇಕು. 

ಪ್ರಕೃತಿ ವಿಕೋಪ ಕಾಯ್ದೆ, ಕರ್ನಾಟಕ ಪಾರದರ್ಶಕತೆ  ದುರುಪಯೋಗ ಯಾವುದಕ್ಕೂ ಟೆಂಡರ್ ಇಲ್ಲ! 

ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಕೇಳಿದರೆ ಮಾಹಿತಿ ಅಸ್ಪಷ್ಟ ಅರೆಬರೆ ಮಾಹಿತಿ 

ನಿಯಮಾವಳಿಗೆ ತಿಲಾಂಜಲಿ! ಘಟನ್ನೋತ್ತರ ಅನುಮೋದನೆಗಾಗಿ ಮಾತ್ರ ಮಂಡಳಿ ಸಭೆ ಸೀಮಿತ !

ಸುಪ್ರೀಂ ಕೋರ್ಟ್, ಕೇಂದ್ರದ ಕಾರ್ಮಿಕ ಮತು ಉದ್ಯೋಗ ಮಂತ್ರಾಲಯದ ನಿರ್ದೇಶನಕ್ಕೂ ಕಿಮ್ಮತ್ತಲ್ಲ! 

ಡಿಬಿಟಿ (ಆiಡಿeಛಿಣ ಃeಟಿiಜಿiಛಿiಚಿಡಿಥಿ ಖಿಡಿಚಿಟಿsಜಿeಡಿ) ಮಾದರಿಗೆ ಎಳ್ಳು-ನೀರು ಬಿಡಲಾಗಿದೆ

Post a Comment

0 Comments

Ad Code

Responsive Advertisement