Offices of Legal Metrology to shift to new building
ನೂತನವಾಗಿ ಸಿದ್ಧಗೊಂಡ ಕಾನೂನು ಮಾಪನ ಕಚೇರಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳು ಮತ್ತು ಕಾನೂನು ಮಾಪನಶಾಸ್ತ್ರ ಇಲಾಖೆಯ ಸಚಿವರಾದ ಉಮೇಶ್ ಕತ್ತಿ ಉದ್ಘಾಟಿಸಿದರು.
ಈ ಕಚೇರಿಯು ಕೇಂದ್ರ ಸರ್ಕಾರದ ರೂ.2 ಕೋಟಿ ಮತ್ತು ರಾಜ್ಯ ಸರ್ಕಾರದ ರೂ.2.5ಕೋಟಿ ಅನುದಾನದೊಂದಿಗೆ ಮಾಪನಶಾಸ್ತ್ರ ಇಲಾಖೆಯ ನೂತನ ಕಟ್ಟಡವು ಸಿದ್ಧಗೊಂಡಿದೆ. ಸಧ್ಯ ಖಾಸಗಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಇಲಾಖೆಯ ಎರಡು ಉಪನಿಯಂತ್ರಕರ ಕಚೇರಿಗಳು, ಬೆಂಗಳೂರು ಜಿಲ್ಲೆ ಮತ್ತು ಬೆಂಗಳೂರು ವಿಭಾಗದ 4 ಸಹಾಯಕ ನಿಯಂತ್ರಕರ ಕಚೇರಿಗಳು ಮತ್ತು 19 ನಿರೀಕ್ಷಕರುಗಳ ಕಚೇರಿಗಳನ್ನು ನೂತನ ಕಟ್ಟಡಕ್ಕೆ ಸ್ಥಳಾಂತರಗೊಳಿಸುವ ಮೂಲಕ ಸಾಕಷ್ಟು ಬಾಡಿಗೆಯ ಹಣವನ್ನು ಇಲಾಖೆ ಉಳಿತಾಯ ಮಾಡಿದಂತಾಗುತ್ತದೆ.
ಕಾನೂನು ಮಾಪನಶಾಸ್ತ್ರ ಇಲಾಖೆಯು ದೈನಂದಿನ ವ್ಯವಹಾರಗಳಲ್ಲಿ ತೂಕ ಮತ್ತು ಅಳತೆಗಳಲ್ಲಿ ನಿಖರತೆ ಕಾಪಾಡುವ ಮೂಲಕ ಗ್ರಾಹಕರ ಹಿತರಕ್ಷಣೆಯನ್ನು ಕಾಪಾಡುತ್ತಿದೆ. ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾಯಿದೆ ಮತ್ತು ನಿಯಮಗಳನ್ನು ಜಾರಿಗೊಳಿಸುತ್ತಿದೆ ಹಾಗೂ ತೂಕ ಮತ್ತು ಅಳತೆಗಳಲ್ಲಿ ಮೋಸ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳುತ್ತಿದೆ. ಹಾಗೆಯೇ ನಿರಂತರವಾಗಿ ಗ್ರಾಹಕರಿಗೆ ತೂಕ ಮತ್ತು ಅಳತೆಗಳ ಬಗ್ಗೆ ತಿಳುವಳಿಕೆ ನೀಡಲು ಇಲಾಖೆಯಿಂದ ಜಾಗೃತಿ ಕಾರ್ಯಕ್ರಮಗಳನ್ನು ಕೂಡಾ ನಡೆಸಲಾಗುತ್ತಿದೆ.






0 Comments