ಬೆಳಗ್ಗೆ ಸುರೇಶ್ ಎಂಬುವವರ ಒಡೆತನದ ಬಹುಮಾಡಿ ಕಟ್ಟಡವೊಂದು ಕುಸಿದುಬಿದ್ದಿದೆ, ಸುಮಾರು ಐವತ್ತು ವರ್ಷಗಳ ಕಾಲ ಹಳೆಯದಾಗಿದ್ದು, ಸುಮಾರು 2 ವರ್ಷಗ ಹಿಂದೆಯೆ ಕಟ್ಟಡ ವಾಲಿದ್ದು, ಸ್ಥಳೀಯ ಬಿಬಿಎಂಪಿ ಅಧಿಕಾರಿಗಳಿಗೆ ಈ ವಿಚಾರ ಗೊತ್ತಿದ್ದೂ, ನಿರ್ಲಕ್ಷ್ಯವೇ ಕಾರಣ ಕೂಡ ಎನ್ನಲಾಗಿದೆ. ಅದೃಷ್ಟವಶಾತ್ ಯಾರಿಗೂ ಯಾವುದೇ ಜೀವಹಾನಿ, ಸಾವು, ನೋವುಗಳು ಸಂಭವಿಸಲಿಲ್ಲ, ಕಟ್ಟಡ ಕುಸಿತದ ರಭಸಕ್ಕೆ ಅಕ್ಕಪಕ್ಕದ ಮನೆಗಳಿಗೆ ಹಾನಿಯಾಗಿದೆ ಎಂದು ತಿಳಿದುಬಂದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ಪ್ರತ್ಯಕ್ಷದರ್ಶಿ ಒಬ್ಬರು ಹೇಳಿದರು. ಕಟ್ಟಡ ಉರುಳಿದ ಮೇಲೆ ಮನೆಯ ಮಾಲೀಕ ಸುರೇಶ್ ಕಾಣೆಯಾಗಿದ್ದಾರೆ ಎಂದು ತಿಳಿದುಬಂದಿದೆ. ಮೆಟ್ರೋ ಕಾಮಗಾರಿಗಾಗಿ ಬಂದಿದ್ದ 70 ಮಂದಿ ಕಾರ್ಮಿಕರು ಇದೆ ಮನೆಯಲ್ಲಿ ವಾಸವಿದ್ದು ಅದೃಷ್ಟವಶಾತ್ ಎಲ್ಲರೂ ಕೆಲಸಕ್ಕ ತರಲಿದ್ದ ಕಾರಣ ಎಲ್ಲರೂ ಕ್ಷೇಮವಾಗಿ ಇದ್ದಾರೆಂದು ತಿಳಿದುಬಂದಿದೆ. ಇಂದು ಬೆಳಗ್ಗೆ 30 ಮಂದಿ ನಿವಾಸಿಗಳು ಮನೆ ವಾಲುತಿದ್ದಂತೆ ಹೊರಗೆ ಬಂದು ಕ್ಷೇಮವಾಗಿದ್ದಾರೆಂದು ತಿಳಿದುಬಂದಿದೆ. ಮನೆಯ ಮಾಲೀಕ ಸುರೇಶ್ ಮೇಲೆ ಪೊಲೀಸರು ಕ್ರಮ ಕೈಗೊಳ್ಳಲು ಸಾಧ್ಯವಿದೆ.
Shiva Prasad G 7204714959
0 Comments