Ticker

6/recent/ticker-posts

Ad Code

Responsive Advertisement

ಪೋಷಕ ಕಲಾವಿದರಿಗೆ ಗೌರಿ ಗಣೇಶ ಹಬ್ಬಕ್ಕೆ ಸಾವಿರ ರೂ ಕೊಡುಗೆ

ಬೆಂಗಳೊರು- ಸೆ.10- ಕರ್ನಾಟಕ ಚಲನಚಿತ್ರ ಪೋಷಕ ಕಲಾವಿದರ ಸಂಘದ ಆಶ್ರಯದಲ್ಲಿ ಇಂದು ಗೌರಿ ಗಣೇಶ ಹಬ್ಬದ ನಿಮಿತ್ತ ಪ್ರತೀ ಪೋಷಕ ಕಲಾವಿದರಿಗೆ  ಕಾರ್ಮಿಕ ಹಾಗು ಕಲಾವಿದರ ಸಂಘದ ಒಕ್ಕೊಟದ ಕಾರ್ಯದರ್ಶಿಯಾದ ರವೀಂದ್ರ ಅವರ ನೇತೃತ್ವದಲ್ಲಿ 1000/- ರೂಪಾಯಿಗಳನ್ನು ಇಂದು ಚೆಕ್ ಮುಖಾಂತರ ಅಧ್ಯಕ್ಷರಾದ ಡಿಂಗ್ರಿ ನಾಗರಾಜ್ ಹಾಗು ಕಾರ್ಯದರ್ಶಿ ಆಡಗೊಡಿ ಶ್ರೀನಿವಾಸ ಇವರು  ವಿತರಿಸಿದರು ಈ ಸಂದರ್ಭದಲ್ಲಿ ಉಪಾದ್ಯಕ್ಷ ಶಿವಮೊಗ್ಗ ಭಾಸ್ಕರ್  ಸಂಘದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕರ್ನಾಟಕ ಚಲನಚಿತ್ರ ಪೋಷಕ ಕಲಾವಿದರ ಸಂಘಕ್ಕೆ ಕಂಪ್ಯೂಟರ್ ಕೊಡುಗೆ

ವಿಂಟೇಜ್ ಕಂಪ್ಯೂಟರ್ ಸರ್ವಿಸ್ ಮಾಲಿಕರಾದ ರಮೇಶ್ ದಂಪತಿಗಳು ಇಂದು ಕರ್ನಾಟಕ ಚಲನಚಿತ್ರ ಪೋಷಕ ಕಲಾವಿದರ ಸಂಘಕ್ಕೆ ಪ್ರೋತ್ಸಾಹಕವಾಗಿ ಕಂಪ್ಯೊಟರ ಸಿಸ್ಟಮ್ ದಾನವಾಗಿ ನೀಡಿದರು. ಸಂಘದ ಪದಾಧಿಕಾರಿಗಳಾದ ಡಿಂಗ್ರಿ ನಾಗರಾಜ, ಆಡಗೋಡಿ ಶ್ರಿನಿವಾಸ ಹಾಗು ಪದಾಧಿಕಾರಿಗಳ ಮನವಿಯ ಮೇರೆಗೆ ದಾನವಾಗಿ ನೀಡಿದ ಕಂಪ್ಯೂಟರ್  ನ್ನ ಇಂದು ಕಾರ್ಮಿಕ ಹಾಗು ಕಲಾವಿದರ ಸಂಘದ ಒಕ್ಕೊಟದ ಕಾರ್ಯದರ್ಶಿಯಾದ ರವೀಂದ್ರ  ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅಧ್ಯಕ್ಷ ಡಿಂಗ್ರಿ ನಾಗರಾಜ್ ಕಾರ್ಯದರ್ಶಿ ಆಡಗೊಡಿ ಶ್ರೀನಿವಾಸ, ಉಪಾದ್ಯಕ್ಷ ಶಿವಮೊಗ್ಗ ಭಾಸ್ಕರ್, ಮಹಾಬಲ, ಮೂಗ್ ಸುರೇಶ್, ಚನ್ನವೀರಪ್ಪ ಹಾಗೊ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.  


Post a Comment

0 Comments

Ad Code

Responsive Advertisement