Varthajala, Bellary
ಬಳ್ಳಾರಿ : ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ 2019-20ನೇ ಸಾಲಿನಲ್ಲಿ ನಡೆಸಿದ ಪದವಿ ಪರೀಕ್ಷೆಯಲ್ಲಿ ವೀರಶೈವ ಮಹಾವಿದ್ಯಾಲಯದ ಮೂವರು ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನ ತೋರಿ ವಿವಿಧ ಶ್ರೇಣಿಯಲ್ಲಿ ರ‍್ಯಾಂಕ್ ಪಡೆದಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಕುಮಾರಿ ನವೊಮಿ ಪ್ರವೀಣ್.ಪಿ (ಶೇ.90.13%) ಎರಡನೇಯ ರ‍್ಯಾಂಕ್, ಕುಮಾರಿ ರೇಖಾ ಶ್ರೀ.ಎಸ್ (89.45%) ಐದನೇಯ ರ‍್ಯಾಂಕ್ ಮತ್ತು ಮಂಜುನಾಥ.ವಿ (89.28%) ಆರನೇಯ ರ‍್ಯಾಂಕ್ ತಮ್ಮದಾಗಿಸಿಕೊಂಡಿರುವರು.
ಈ ವಿದ್ಯಾರ್ಥಿಗಳು ಉನ್ನತ ಗುರಿ ಇಟ್ಟುಕೊಂಡು ಸತತ ಕಠಿಣ ಶ್ರಮ ಮತ್ತು ಶ್ರದ್ಧೆಯೊಂದಿಗೆ ನಿಯಮಿತ ವ್ಯಾಸಂಗ ಮಾಡಿ ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ ರ‍್ಯಾಂಕ್‌ಗಳನ್ನು ಪಡೆದು ಮಹಾವಿದ್ಯಾಲಯದ ಘನತೆ ಮತ್ತು ಗೌರವವನ್ನು ಹೆಚ್ಚಿಸಿ ಕೀರ್ತಿಯನ್ನು ತಂದಿದ್ದಕ್ಕಾಗಿ ವೀರಶೈವ ಮಹಾವಿದ್ಯಾಲಯದ ಅಧ್ಯಕ್ಷರಾದ ದರೂರು ಶಾಂತನಗೌಡ, ಪ್ರಾಚಾರ್ಯರಾದ ಬಿ.ತಿಮ್ಮನಗೌಡ ಪಾಟೀಲ್, ಬೋಧಕ-ಬೋಧಕೇತರ ಸಿಬ್ಬಂದಿ ಮತ್ತು ಸಮಸ್ತ ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.


0 Comments