ಲಯನ್ ಸಂಸ್ಥೆಯಿಂದ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ರಿಲಿವಿಂಗ್ ಅಂಗರ್ ಕಾರ್ಯಕ್ರಮ
ಬೆಂಗಳೂರು-3. ಅಂತರರಾಷ್ಟ್ರೀಯ ಲಯನ್ ಸಂಸ್ಥೆ ಜಿಲ್ಲೆ 317 F ಮಾನವ್ ಸಾರಿಟಿಸ್ ,ಸೈನಾ ಮೀಡಿಯಾ,ಇವರ ಸಂಯುಕ್ತ ಆಶ್ರಯದಲ್ಲಿ ಬೆಂಗಳೂರು ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ರಿಲಿವಿಂಗ್ ಅಂಗರ್ ಪ್ರತಿದಿನ ಊಟ ನೀಡುವ ಯೋಜನೆಗೆ ಚಾಲನೆ ನೀಡಲಾಯಿತು.
ಇಂದಿನಿಂದ ಪ್ರತಿದಿನ ಆಸ್ಪತ್ರೆಯ ರೋಗಿಗಳ ಜೊತೆಯಿರುವ ಅಟೆಂಡರ್ ಗಳು ಹಾಗೂ ಸಿಬ್ಬಂದಿ ವರ್ಗಕ್ಕೆ ಊಟದ ವ್ಯವಸ್ಥೆಯನ್ನು ಜಿಲ್ಲಾ ಲಯನ್ಸ್ ಸಂಸ್ಥೆ ಮಾನವ ಚಾರಿಟೀಸ್ ಆಗೋ ಸೈನಾ ಮೀಡಿಯಾ ಇವರ ಸಂಯುಕ್ತಾಶ್ರಯದಲ್ಲಿ ಮೂರು ವರ್ಷಗಳ ಕಾಲ ಪ್ರತಿದಿನ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ ಇದರ ಪ್ರಯೋಜನವನ್ನು ಎಲ್ಲರೂ ಪಡೆದುಕೊಳ್ಳಬೇಕೆಂದು ಕೋರಲಾಗಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಅಂತರಾಷ್ಟ್ರೀಯ ಲಯನ್ ಸಂಸ್ಥೆಯ ನಿರ್ದೇಶಕರಾದ ವಂಶಿಧರ್ ಬಾಬು ಹಾಗೂ ಕೆ.ಸಿ. ಜನರಲ್ ಆಸ್ಪತ್ರೆ ಸೂಪರಿಂಟೆ0ಡೆ0ಟ್ ವೆಂಕಟೇಶ ರವರು ನೆರವೇರಿಸಿದರು.
ಸಮಾರಂಭದಲ್ಲಿ ಮಾನವ್ ಚಾರಿಟೀಸ್ ನ ರಾಜೇಂದ್ರ ಕುಲಕರ್ಣಿ, ಲಯನ್ ಜಿಲ್ಲಾ ಗವರ್ನರ್ ಮನೋಹರನ್ ನಂಬಿಯಾರ್, ಉಪ ಗವರ್ನರ್ ಬಿ. ಎಸ್. ನಾಗರಾಜ್, ಜಿಲ್ಲಾ ಪ್ರತಿನಿಧಿಗಳಾದ ವಿಜಯ್ ಕುಮಾರ್, ಪಿ ವೇಣುಗೋಪಾಲ್, ರವಿ ನಾಯ್ಡು, ಸಿಂಧೂ ರಾಜೇಶ್, ಸಿ.ಎಂ. ನಾರಾಯಣಸ್ವಾಮಿ, ಆಕಾಶ್ ಸುವರ್ಣ, ರಾಮಾಂಜನಿ ಮುಂತಾದವರು ಉಪಸ್ಥಿತರಿದ್ದರು ಎಂದು ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಜಿ.ಎಸ್. ಮಂಜುನಾಥ್ ತಿಳಿಸಿರುತ್ತಾರೆ.
-VARTHAJALA, MALLESWARA


0 Comments