ಬಳ್ಳಾರಿ ಸೆ 26. ಸಂಯುಕ್ತ ಹೋರಾಟ ಕರ್ನಾಟಕದ ವತಿಯಿಂದ ಸೆಪ್ಟಂಬರ್ 27ರ ಭಾರತ್ ಬಂದ್ ಗೆ ಬೆಂಬಲಿಸಿ ಬೈಕ್ ರ‍್ಯಾಲಿಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಬೈಕ್ರ‍್ಯಾಲಿಯು ಕೆ.ಎಸ್.ಆರ್.ಟಿ.ಸಿ ಡಿಪೋನಿಂದ ಪ್ರಾರಂಭವಾಗಿದುರ್ಗಮ್ಮಗುಡಿ, ರಾಯಲ್ ಸರ್ಕಲ್, ಬೆಂಗಳೂರು ರಸ್ತೆ, ಬ್ರೂಸ್ ಪೇಟೆ, ಮೋತಿ ಸರ್ಕಲ್, ಕೌಲ್ ಬಜಾರ್, ಟಿ.ಬಿ. ಸ್ಯಾನಿಟೋರಿಯಂ, ಓ.ಪಿ.ಡಿ, ವಿದ್ಯಾನಗರ ಮೂಲಕ ಸಾಗಿ ಎಸ್.ಪಿ.ಸರ್ಕಲ್‌ನಲ್ಲಿ ಕೊನೆಗೊಂಡಿತು.
ನೂರಾರು ಸಂಖ್ಯೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರು, ಕಾರ್ಯಕರ್ತರುಇದರಲ್ಲಿ ಪಾಲ್ಗೊಂಡಿದ್ದರು.ಎಸ್.ಪಿ ಸರ್ಕಲ್ ನಲ್ಲಿವಿವಿಧ ಸಂಘಟನೆಗಳ ಮುಖಂಡರು ಮಾತನಾಡುತ್ತಾ “ಕೇಂದ್ರ ಸರ್ಕಾರ, ಮೂರು ಕೃಷಿ ಕಾಯ್ದೆಗಳನ್ನು ಘೋಷಣೆ ಮಾಡಿದಒಂದು ವರ್ಷ ಹಾಗು ದೆಹಲಿಯಲ್ಲಿನರೈತ ಹೋರಾಟಕ್ಕೆ ಹತ್ತು ತಿಂಗಳು ಪೂರ್ಣಗೊಳ್ಳುತ್ತಿರುವ ಸಂದರ್ಭದಲ್ಲಿ “ರೈತಾಪಿ ಕೃಷಿ”ಯನ್ನು ನಾಶ ಮಾಡಿ `ಕೃಷಿ’ ಯನ್ನುಕಾರ್ಪೋರೇಟ್ ಕಂಪನಿಗಳಿಗೆ ಒಪ್ಪಿಸಲುಜಾರಿಗೆತಂದಿರುವ ಮೂರು ಕೃಷಿ ಕಾಯ್ದೆಗಳು ಹಾಗು ವಿದ್ಯುತ್ ಮಸೂದೆಯನ್ನುರದ್ದುಮಾಡಬೇಕು ಹಾಗು ಕೃಷಿ ಉತ್ಪನ್ನಗಳ ಉತ್ಪಾದನೆಯ ವೆಚ್ಚದ ಮೇಲೆ ಶೇ. 50 ರಷ್ಟು ಲಾಭವನ್ನುಖಾತರಿ ಮಾಡುವ “ಕನಿಷ್ಠ ಬೆಂಬಲ ಬೆಲೆ ಕಾನೂನು” ಜಾರಿಗೆತರಬೇಕೆಂದು ಆಗ್ರಹಿಸಿ ಐದುನೂರಕ್ಕು ಹೆಚ್ಚು ರೈತ ಸಂಘಟನೆಗಳನ್ನು ಒಳಗೊಂಡು ರಚನೆಯಾಗಿರುವ ಸಂಯುಕ ್ತಕಿಸಾನ್ ಮೋರ್ಚಾ(SKM) ಸೆಪ್ಟೆಂಬರ್ 27, 2021 ಕ್ಕೆ “ಭಾರತ್ ಬಂದ್”ಗೆಕರೆ ನೀಡಿದೆ,
ಈ ಹಿನ್ನೆಲೆಯಲ್ಲಿ ನಾಳೆ ನಡೆಯುತ್ತಿರುವ“ಬಳ್ಳಾರಿ ಬಂದ್”ನ್ನು ಸಂಪೂರ್ಣವಾಗಿಯಶಸ್ವಿಗೊಳಿಸಬೇಕೆAದುಜನರಲ್ಲಿ ಮನವಿಮಾಡಿಕೊಂಡರು. ಈ ಬೈಕ್ ರ‍್ಯಾಲಿಯಲ್ಲಿ ಆರ್.ಕೆ.ಎಸ್ ನ ಈ.ಹನುಮಂತಪ್ಪ, ಕೆ.ಪಿ.ಆರ್.ಎಸ್ ನ ಶಿವಶಂಕರ್, ಕರ್ನಾಟಕರಾಜ್ಯರೈತ ಸಂಘ(ಹಸಿರು ಸೇನೆ)ಯ ಸಂಗನಕಲ್‌ಕೃಷ್ಣಪ್ಪ, ಕಾರ್ಮಿಕ ಸಂಘಟನೆಗಳ ಮುಖಂಡರಾದ ಎ.ಐ.ಯು.ಟಿ.ಯು.ಸಿ ಯಎ.ದೇವದಾಸ್, ಸಿ.ಐ.ಟಿ.ಯು ನ ಸತ್ಯಬಾಬು, ಸಿ.ಪಿ.ಐನ ನಾಗಭೂಷಣ, ಕೆ.ಎಸ್.ಆರ್.ಟಿ.ಸಿ ನೌಕರರ ಸಂಘದ ಮುಖಂಡ ಆದಿಮೂರ್ತಿ ಹಾಗೂ ಎ.ಐ.ಡಿ.ಎಸ್.ಓ ವಿದ್ಯಾರ್ಥಿ ಸಂಘಟನೆಯ ಗುರಳ್ಳಿ ರಾಜ, ರವಿಕಿರಣ್, ಸೌಮ್ಯ, ಈರಣ್ಣ, ಎ.ಐ.ಡಿ.ವೈ.ಓಯುವಜನ ಸಂಘಟನೆಯಜಗದೀಶ್, ಎ.ಐ.ಎಂ.ಎಸ್.ಎಸ್ ಮಹಿಳಾ ಸಂಘಟನೆಯ ಶಾಂತಾ, ಅಹಲ್ಯ, ವಿದ್ಯಾವತಿ, ವಿಜಯಲಕ್ಷಿ, ರೇಖಾ, ಜನವಾದಿ ಮಹಿಳಾ ಸಂಘಟನೆಯ ಚ0ದ್ರಕುಮಾರಿ, ಡಿ.ವೈ.ಎಫ್.ಐನರ‍್ರಿಸ್ವಾಮಿ, ಎ.ಐ.ವೈ.ಎಫ್‌ನ ಕಟ್ಟೆಬಸಪ್ಪ ಮತ್ತು ಇನ್ನಿತರ ಸಂಘಟನೆಯ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.
VARTHAJALA, BELLARY

0 Comments