Ticker

6/recent/ticker-posts

Ad Code

Responsive Advertisement

ಕೋಟೆ ಕಲ್ಲಪ್ಪ ಸ್ವಾಮಿ ದೇಗುಲದ ಮೂರ್ತಿ ಮೇಲೆ ಕಾಲಿಟ್ಟು, ಫೇಸ್ ಬುಕ್ ಗೆ ಅಳವಡಿಸಿಕೊಂಡಿದ್ದ ಆರೋಪಿ ARREST

 ಮಧುಗಿರಿ:  ಶ್ರೀ ಪವಿತ್ರ ಕ್ಷೇತ್ರವಾದ ಶ್ರೀ ಕೋಟೆ ಕಲ್ಲಪ್ಪ ಸ್ವಾಮಿ ದೇಗುಲದ ಮೂರ್ತಿಯ ಮೇಲೆ ಚಪ್ಪಲಿ ಕಾಲಿಟ್ಟು, ಅದನ್ನು ವಿಡಿಯೋ ಮಾಡಿ ಫೇಸ್ ಬುಕ್ ಗೆ ಅಳವಡಿಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ್ದು, ಪ್ರಕರಣ ದಾಖಲಾಗಿದೆ. 



ತಾಲೂಕಿನ ಹಲವು ಜನಾಂಗಗಳ ಮನೆ ದೇವರಾದ ಶ್ರೀ ಕೋಟೆ ಕಲ್ಲಪ್ಪ ದೇಗುಲಕ್ಕೆ ಹಿಂದಿನಿಂದಲೂ ಬಾಗಿಲು ಇಟ್ಟಿಲ್ಲ, ಇದು ಪ್ರಕೃತಿಯೇ ನಿರ್ಮಿಸಿದ ವೈಶಿಷ್ಟವಾದ ದೇವರ ಮೂರ್ತಿಯಾಗಿದ್ದು, ಸದಾ ತೆರೆದಿರುತ್ತದೆ. ದುಷ್ಕರ್ಮಿ ಸ್ಥಳೀಯ ದಬ್ಬೇಘಟ್ಟ ಗ್ರಾಮದ ಶ್ರೀಕಾಂತ್ ಎಂಬುವವನು ಯಾರು ಇಲ್ಲದ ವೇಳೆಯಲ್ಲಿ ದೇಗುಲ ಪ್ರವೇಶಿಸಿ ಚಪ್ಪಲಿ ಕಾಲಿನಲ್ಲಿ ಮೂರ್ತಿಯನ್ನು ತುಳಿದು ಅದನ್ನು ವಿಡಿಯೋ ಮಾಡಿದ್ದಲ್ಲದೆ ಸಾಮಾಜಿಕ ಜಾಲತಾಣಕ್ಕೆ ಹರಿಬಿಟ್ಟಿದ್ದ ಇದನ್ನು ಕಂಡ ಸ್ಥಳೀಯ ಭಕ್ತರು ಈತನ ಹುಡುಕಾಟ ನಡೆಸಿ ಪತ್ತೆ ಹಚ್ಚಿದ್ದು, ಧರ್ಮದೇಟು ನೀಡಿದರು, 

ವಿಷಯ ತಿಳಿದ ಪೊಲೀಸರು ಈತನನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ. ಪ್ರಕರಣದ ಕುರಿತು ಆಕ್ಷೇಪ ವ್ಯಕ್ತಪಡಿಸಿರುವ ದೇಗುಲದ ಭಕ್ತರು ಹಾಗೂ ಜಿಲ್ಲಾ ಬಿಜೆಪಿ ಎಸ್ ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಮೇಶ್ ಸೂಕ್ತ ಕ್ರಮಕೈಗೊಳ್ಳುವಂತೆ ಲಿಖಿತವಾಗಿ ದೂರು ನೀಡಿದ್ದು, ಈ ಪಟ್ಟಣದ ಠಾಣೆಯಲ್ಲಿ ಸಿಪಿಐ ಎಂಎಸ್. ಸರ್ದಾರ್ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Post a Comment

0 Comments

Ad Code

Responsive Advertisement