Ticker

6/recent/ticker-posts

Ad Code

Responsive Advertisement

ಹೊಚ್ಚ ಹೊಸ ಫ್ಯೂರಿಯೊ 7 ಶ್ರೇಣಿಯ ಎಲ್‌ಸಿವಿ ಟ್ರಕ್ ಬಿಡುಗಡೆ

ಮಹೀಂದ್ರಾದಿ0ದ ಹೊಚ್ಚ ಹೊಸ ಫ್ಯೂರಿಯೊ 7 ಶ್ರೇಣಿಯ ಎಲ್‌ಸಿವಿ ಟ್ರಕ್  ಅಭೂತಪೂರ್ವ ಡಬಲ್ ಖಾತರಿಗಳನ್ನು ಹೊಂದಿದೆ

"ಹೆಚ್ಚು ಮೈಲೇಜ್ ಅಥವಾ ಟ್ರಕ್ ವಾಪಾಸು" ಮತ್ತು "ಖಾತರಿಪಡಿಸಿದ ಮರುಮಾರಾಟ ಮೌಲ್ಯ"

ಬೆಲೆಗಳು ಫ್ಯೂರಿಯೊ 10.5 ಅಡಿ ಎಚ್‌ಎಸ್‌ಡಿ ರೂಪಾಂತರಕ್ಕೆ ರೂ 14.79 ಲಕ್ಷದಿಂದ, ಫ್ಯೂರಿಯೋ 7 ಎಚ್‌ಡಿ ರೂ 15.18 ಲಕ್ಷದಿಂದ ಮತ್ತು ಫ್ಯೂರಿಯೊ 7 ಟಿಪ್ಪರ್ ರೂಪಾಂತರಕ್ಕೆ ರೂ 16.82 ಲಕ್ಷದಿಂದ (ಎಲ್ಲಾ ಎಕ್ಸ್ ಶೋರೂಂ ಪುಣೆ) ಆರಂಭ.

ಎಲ್ಲ ಹೊಸ ಫ್ಯೂರಿಯೊ ಶ್ರೇಣಿಯ ಎಲ್‌ಸಿವಿಗಳಿಗೆ ಮೊದಲ ಬಾರಿಗೆ "ಹೆಚ್ಚು ಮೈಲೇಜ್ ಅಥವಾ ಟ್ರಕ್ ವಾಪಾಸು" ಮತ್ತು "ಖಾತರಿಯ ಮರು ಮಾರಾಟ ಮೌಲ್ಯ" ವನ್ನು ಅತ್ಯಂತ ಸ್ಪರ್ಧಾತ್ಮಕ ಭಾರತೀಯ ಸಿವಿ ಉದ್ಯಮದಲ್ಲಿ ನೀಡಲಾಗುತ್ತಿದೆ. ಟಿಪ್ಪರ್ ಮಾದರಿಯಲ್ಲಿ ಹೆಚ್ಚಿನ ಲಾಭದ ಖಾತರಿ ನೀಡುವುದೂ ಇದರಲ್ಲಿ ಒಳಗೊಂಡಿದೆ.

ಬಾಲಿವುಡ್ ಸೂಪರ್‌ಸ್ಟಾರ್ ಅಜಯ್ ದೇವಗನ್ ಅವರು, ತಮ್ಮ ಸಹಿಯ ಮೂಲಕ ಫ್ಯೂರೊ 7 ನ ಡಬಲ್ ಗ್ಯಾರಂಟಿ ಪ್ರತಿಪಾದನೆಯನ್ನು ಪ್ರಭಾವಶಾಲಿ ರೀತಿಯಲ್ಲಿ ಅನುಮೋದಿಸಿದ್ದಾರೆ.


ಮಹೀಂದ್ರಾ ಈಗಾಗಲೇ ಫ್ಯೂರಿಯೊ ಶ್ರೇಣಿಯ ಮಧ್ಯಂತರ ಮತ್ತು ಲಘು ವಾಣಿಜ್ಯ ವಾಹನಗಳ ಅಭಿವೃದ್ಧಿಗೆ ರೂ 650 ಕೋಟಿ ಹೂಡಿಕೆ ಮಾಡಿದೆ.

ಫ್ಯೂರಿಯೊ 7 ಶ್ರೇಣಿಯ ಎಲ್‌ಸಿವಿಗಳು ಎರಡು ಸೂಪರ್-ದಕ್ಷ, ಕಡಿಮೆ ತೂಕ, ಕಡಿಮೆ ಘರ್ಷಣೆ ಎಂಜಿನ್‌ಗಳಿAದ ಚಾಲಿತವಾಗಿದೆ- ಎಂಡಿಐ ಮತ್ತು ಎಂಡಿ ಟೆಕ್, ಜನಪ್ರಿಯ ಡ್ಯುಯಲ್ ಮೋಡ್ ಫ್ಯುಯಲ್‌ಸ್ಮಾರ್ಟ್ ತಂತ್ರಜ್ಞಾನಗಳಾಗಿವೆ.

ಚಕನ್‌ನಲ್ಲಿರುವ ಮಹೀಂದ್ರಾದ ವಿಶ್ವ ದರ್ಜೆಯ ಸೌಲಭ್ಯದಲ್ಲಿ ಇವುಗಳನ್ನು ಉತ್ಪಾದಿಸಲಾಗುತ್ತಿದೆ.

ಭಾರತೀಯ ರಸ್ತೆ ಪರಿಸ್ಥಿತಿಗಳಿಗಾಗಿ ಪಿನಿನ್ಫರಿನಾ ವಿನ್ಯಾಸಗೊಳಿಸಿದ ಫ್ಯೂರಿಯೊ ತನ್ನ ವಿಶ್ವದರ್ಜೆಯ ವಿನ್ಯಾಸ ಮತ್ತು ಎಂಜಿನಿಯರಿ0ಗ್ ಶ್ರೇಷ್ಠತೆಯೊಂದಿಗೆ ಹೊಸ ಮಾನದಂಡಗಳನ್ನು ಸೃಷ್ಟಿಸಿದ್ದು, ಅತ್ಯಂತ ಸುರಕ್ಷಿತವಾದ, ದಕ್ಷತಾಶಾಸ್ತçದ ಮತ್ತು ಆರಾಮದಾಯಕವಾದ ಕ್ಯಾಬಿನ್‌ಗಳನ್ನು ಹೊಂದಿದೆ.


ನಿರAತರವಾಗಿ ಬೆಳೆಯುತ್ತಿರುವ ಮತ್ತು ವಿಶಾಲವಾದ ಸೇವೆ ಮತ್ತು 90 3ಎಸ್ ಡೀಲರ್‌ಶಿಪ್‌ಗಳು, 210 ಅಧಿಕೃತ ಸೇವಾ ಕೇಂದ್ರಗಳು, 1,600 ಚಿಲ್ಲರೆ ಮಾರಾಟ ಮಳಿಗೆಗಳು ಮತ್ತು ಪ್ರಮುಖ ಆಯಕಟ್ಟಿನ ಪ್ರದೇಶಗಳಲ್ಲಿ ಇವರು 34 ಎಂ ಪಾರ್ಟ್ ಪ್ಲಾಜಾಗಳ ಬೆಂಬಲವನ್ನು ಇದು ಹೊಂದಿದೆ.

ಮುAಬೈ, ಸೆಪ್ಟೆಂಬರ್ 15, 2021: ಮಹೀಂದ್ರಾ ಉದ್ಯಮ ಸಮೂಹದ ಭಾಗವಾಗಿರುವ ಮಹೀಂದ್ರಾ ಟ್ರಕ್ ಮತ್ತು ಬಸ್ ವಿಭಾಗ (ಎಂಟಿಬಿ) ಇಂದು ತನ್ನ ಇತ್ತೀಚಿನ, ಆಧುನಿಕ ಶ್ರೇಣಿಯ ಲಘು ವಾಣಿಜ್ಯ ವಾಹನಗಳ (ಎಲ್‌ಸಿವಿ) ಅಭೂತಪೂರ್ವ ಶ್ರೇಣಿಯ ಹೊಸ ಮಹೀಂದ್ರಾ ಫ್ಯೂರಿಯೊ 7 ರ ವಾಣಿಜ್ಯ ಆರಂಭವನ್ನು ಘೋಷಿಸಿದೆ. ಐದು ವರ್ಷಗಳ ನಂತರ "ಹೆಚ್ಚು ಮೈಲೇಜ್ ಅಥವಾ ಟ್ರಕ್ ವಾಪಾಸು" ಮತ್ತು "ಖಾತರಿಯ ಮರು ಮಾರಾಟ ಮೌಲ್ಯ" ಹೀಗೆ ಎರಡು ಗ್ಯಾರೆಂಟಿಗಳನ್ನು ಕೂಡಾ ಘೋಷಿಸಲಾಗಿದೆ.

ಮಹೀಂದ್ರಾ ಟ್ರಕ್ ಮತ್ತು ಬಸ್ ಪ್ರಸ್ತುತ ಅಸ್ತಿತ್ವದಲ್ಲಿರುವ ಫ್ಯೂರಿಯೊವನ್ನು 2019 ರಲ್ಲಿ ಪ್ರಾರಂಭಿಸಿದ ಮಧ್ಯಂತರ ವಾಣಿಜ್ಯ ವಾಹನ ಬ್ರಾಂಡನ್ನು ಹೊಚ್ಚ ಹೊಸ ಲಘು ವಾಣಿಜ್ಯ ವಾಹನ ಶ್ರೇಣಿಯಾದ ಮಹೀಂದ್ರಾ ಫ್ಯೂರಿಯೊ 7 ಆಗಿ ವಿಸ್ತರಿಸಿದೆ. ಈ ಶ್ರೇಣಿಯು ಮೂರು ಉತ್ಪನ್ನ ವೇದಿಕೆಗಳಲ್ಲಿ ಲಭ್ಯವಿರುತ್ತದೆ: 4-ಟೈರ್ ಕಾರ್ಗೋ, 6 -ಟೈರ್ ಕಾರ್ಗೋ ಎಚ್‌ಡಿ ಮತ್ತು 6-ಟೈರ್ ಟಿಪ್ಪರ್. ಈ ಶ್ರೇಣಿಯು ಲಘು ವಾಣಿಜ್ಯ ವಾಹನ ವಿಭಾಗಗಳಲ್ಲಿನ ವ್ಯಾಪಾರದ ಅಗತ್ಯಗಳ ಪ್ರತಿ ಅನ್ವಯವನ್ನು ಒಳಗೊಂಡಿರುತ್ತವೆ. ಉತ್ತಮ ಲಾಭದ ಫ್ಯೂರಿಯೋ ಬ್ರಾಂಡ್ ಭರವಸೆಯನ್ನು ನೀಡುವ ಜೊತೆಗೆ ಉತ್ತಮ ದರ್ಜೆಯ ಮೈಲೇಜ್, ಹೆಚ್ಚಿನ ಪೇಲೋಡ್ ಮತ್ತು ಬೆಂಚ್‌ಮಾರ್ಕ್ ಕ್ಯಾಬಿನ್ ಅತ್ಯುತ್ತಮ ಸೌಕರ್ಯ, ಅನುಕೂಲತೆ ಮತ್ತು ಸುರಕ್ಷತೆಯನ್ನು ನೀಡುತ್ತದೆ. ಇದು ಅತ್ಯಾಧುನಿಕ  ಮಹೀಂದ್ರಾ ಐಮ್ಯಾಕ್ಸ್ ಟೆಲಿಮ್ಯಾಟಿಕ್ಸ್ ತಂತ್ರಜ್ಞಾನವನ್ನು ಹೊಂದಿದೆ.

ಮಹೀAದ್ರಾ ಫ್ಯೂರಿಯೊ 7 ಲೈಟ್ ಕಮರ್ಷಿಯಲ್ ವೆಹಿಕಲ್ (ಎಲ್‌ಸಿವಿ) ಶ್ರೇಣಿಯು ಫ್ಯೂರಿಯೊ ಐಎಲ್‌ಸಿವಿ ಉತ್ಪನ್ನ ಶ್ರೇಣಿಯ ಅಭಿವೃದ್ಧಿಯ ಭಾಗವಾಗಿದ್ದು, ಇದು ಕಳೆದ ಆರು ವರ್ಷಗಳಲ್ಲಿ 500ಕ್ಕೂ ಹೆಚ್ಚು ಮಹೀಂದ್ರಾ ಎಂಜಿನಿಯರ್‌ಗಳು ಮತ್ತು 180 ಪೂರೈಕೆದಾರರ ಕೇಂದ್ರೀಕೃತ ಪ್ರಯತ್ನಗಳ ಪರಾಕಾಷ್ಠೆಯಾಗಿದೆ ಮತ್ತು ಇದರ ಸಂಶೋಧನೆ ಹಾಗೂ ಅಭಿವೃದ್ಧಿಗಾಗಿ ರೂ. 650 ಕೋಟಿ ವೆಚ್ಚ ಮಾಡಲಾಗಿದೆ. ಅತ್ಯಂತ ಯಶಸ್ವಿ ಮತ್ತು ಜನಪ್ರಿಯವಾದ 'ಮೈಲೇಜ್ ಗ್ಯಾರಂಟಿ'ಯೊAದಿಗೆ ಪ್ರಾರಂಭ ವಾದ ಎಂಟಿಬಿಯ ಬ್ಲಾಝೋ ಎಕ್ಸ್ ಶ್ರೇಣಿಯ ಭಾರೀ ವಾಣಿಜ್ಯ ವಾಹನಗಳು ಬಿಡುಗಡೆಯ ನಂತರ ಇದೀಗ ಫ್ಯೂರಿಯೊ ಸರಣಿಯನ್ನು ಬಿಡುಗಡೆ ಮಾಡಲಾಗಿದೆ. ಬ್ಲಾಝೋ ಎಕ್ಸ್ ಶ್ರೇಣಿಯು ಇಡೀ ಎಚ್‌ಸಿವಿ ವಿಭಾಗದಲ್ಲೇ ಅತ್ಯಂತ ಇಂಧನ ದಕ್ಷ ಟ್ರಕ್ ಎಂದು ಹೆಗ್ಗಳಿಕೆಯನ್ನು ಗಳಿಸಿಕೊಂಡಿದೆ.

ಮಹೀAದ್ರಾ & ಮಹೀಂದ್ರಾ ಲಿಮಿಟೆಡ್‌ನ ಆಟೋಮೋಟಿವ್ ವಿಭಾಗದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೀಜಯ್ ನಕ್ರಾ ಅವರು ಫ್ಯೂರಿಯೊ 7 ಬಿಡುಗಡೆ ಬಗ್ಗೆ ಮಾತನಾಡಿ, "ಹೊಸ ಫ್ಯೂರಿಯೊ 7 ಶ್ರೇಣಿಯನ್ನು ಎಲ್‌ಸಿವಿ ಟ್ರಕ್‌ಗಳ ಅಭೂತಪೂರ್ವ ಗ್ರಾಹಕ ಮೌಲ್ಯ ಪ್ರತಿಪಾದನೆಯೊಂದಿಗೆ 'ಹೆಚ್ಚಿನ ಮೈಲೇಜ್ ಅಥವಾ ಟ್ರಕ್ ಅನ್ನು ಹಿಂದಿರುಗಿಸುವುದು ಮತ್ತು ಖಾತರಿ ಐದು ವರ್ಷಗಳ ನಂತರ ಮರುಮಾರಾಟ ಮೌಲ್ಯ', ಖಾತರಿಯೊಂದಿಗೆ ಬಿಡುಗಡೆ ಮಾಡಲಾಗಿದ್ದು, ಇದು ಉದ್ಯಮದಲ್ಲಿ ಒಂದು ಹೆಗ್ಗುರುತಾಗಿದೆ. ಇದು ಶ್ರೇಷ್ಠತೆ ಮತ್ತು ಗ್ರಾಹಕ ಕೇಂದ್ರಿತ ನೀತಿಯ ಹೊಸ ಮಾನದಂಡವನ್ನು ಸೃಷ್ಟಿಸುವ ಜತೆಗೆ ನಮ್ಮ ಉತ್ಪನ್ನಗಳ ವಿಭಾಗದಲ್ಲಿ ನಮ್ಮ ಗಂಭೀರ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ" ಎಂದು ಬಣ್ಣಿಸಿದರು.

ಮಹೀಂದ್ರಾ & ಮಹೀಂದ್ರಾ ಲಿಮಿಟೆಡ್‌ನ ವಾಣಿಜ್ಯ ವಾಹನಗಳ ವಾಣಿಜ್ಯ ಮುಖ್ಯಸ್ಥ ಜಲಜ್ ಗುಪ್ತಾ ಮಾತನಾಡಿ, "ಮಹೀಂದ್ರಾ ಫ್ಯೂರಿಯೊ 7 ಶ್ರೇಣಿಯನ್ನು ಎಲ್‌ಸಿವಿ ಗ್ರಾಹಕರ ಈಡೇರದ ಬೇಡಿಕೆ ಅಗತ್ಯತೆಗಳ ಸುತ್ತ ವಿನ್ಯಾಸಗೊಳಿಸಲಾಗಿದೆ. ಈ ವರ್ಗದ ವಾಹನಗಳಿಗೆ ಸಂಬAಧಿಸಿದ ನಮ್ಮ ಗ್ರಾಹಕರ ಒಳನೋಟಗಳು, ಹೆಚ್ಚಿನ ಗಳಿಕೆ, ಕಡಿಮೆ ಒಟ್ಟು ಮಾಲೀಕತ್ವ ವೆಚ್ಚ (ಟಿಸಿಓ), ಅತ್ಯುತ್ತಮ ಖಾತರಿ ಕೊಡುಗೆ, ಕಡಿಮೆ ನಿರ್ವಹಣೆ, ಸುರಕ್ಷತೆ ಮತ್ತು ಸೌಕರ್ಯಗಳನ್ನು ಒದಗಿಸುವ ಟ್ರಕ್ ಅನ್ನು ಗ್ರಾಹಕರು ಹುಡುಕುತ್ತಿದ್ದಾರೆ ಎಂದು ಬಹಿರಂಗಪಡಿಸಿದೆ. ಇವೆಲ್ಲವೂ ಅಪಾಯ ರಹಿತ ವ್ಯಾಪಾರಕ್ಕೆ ಮತ್ತು ಮನಸ್ಸಿನ ಸಂಪೂರ್ಣ ಶಾಂತಿಗೆ ಪೂರಕವಾಗಿದ್ದು, ಈ ಎಲ್ಲ ಅಂಶಗಳೂ ಒಂದೇ ಟ್ರಕ್‌ನಲ್ಲಿ ಇರಬೇಕು ಎಂಬ ಅಪೇಕ್ಷೆ ಹೊಂದಿರುವುದನ್ನು ಬೆಳಕಿಗೆ ತಂದಿದ್ದವು. ಮಹೀಂದ್ರಾ ಫ್ಯೂರಿಯೊ 7, ಗ್ರಾಹಕ ಮೌಲ್ಯದ ಪ್ರತಿಪಾದನೆಗಳ ಸಾಟಿಯಿಲ್ಲದ ಪ್ಯಾಕೇಜ್ ಮತ್ತು ಅತ್ಯಂತ ಸ್ಪರ್ಧಾತ್ಮಕ ಆರಂಭಿಕ ಬೆಲೆ ಆಫರ್‌ಗಳನ್ನು ಹೊಂದಿದೆ. ಹೆಚ್ಚಿನ ಮೈಲೇಜ್ ಅನ್ನು ಖಾತರಿಪಡಿಸುವ ಅಥವಾ ಟ್ರಕ್ಕನ್ನು ಮರಳಿ ನೀಡುವ ಭರವಸೆಯನ್ನು ನಾವು ನೀಡುತ್ತಿದ್ದೇವೆ ಮತ್ತು ಐದು ವರ್ಷಗಳ ನಂತರ ಮರುಮಾರಾಟದ ಮೌಲ್ಯವನ್ನು ಖಾತರಿಪಡಿಸುತ್ತೇವೆ, ಇದು ಉದ್ಯಮಕ್ಕೆ ಒಂದು ನಿರ್ಣಾಯಕ ಕ್ಷಣವಾಗಿದೆ. ಇದು ನಮ್ಮ ಗ್ರಾಹಕರನ್ನು ಹೆಚ್ಚು ಸಮೃದ್ಧರನ್ನಾಗಿಸುವ ನಮ್ಮ ಉದ್ದೇಶಕ್ಕೆ ಸಹಾಯ ಮಾಡುತ್ತದೆ" ಎಂದು ಅಭಿಪ್ರಾಯಪಟ್ಟರು.

ಮಹೀಂದ್ರ ಟ್ರಕ್ ಮತ್ತು ಬಸ್ ಬಗ್ಗೆ

ಮಹೀಂದ್ರಾ ಟ್ರಕ್ ಮತ್ತು ಬಸ್, ಮಹೀಂದ್ರ ಸಮೂಹದ ಒಂದು ವಿಭಾಗ, ಸಮಗ್ರ ಟ್ರಕ್ಕಿಂಗ್ ಪರಿಹಾರಗಳ ಸಂಪೂರ್ಣ ಶ್ರೇಣಿಯನ್ನು ಒದಗಿಸುತ್ತದೆ. ವಿಭಿನ್ನ ಅಪ್ಲಿಕೇಶನ್‌ಗಳಿಗಾಗಿ ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾದ ಟ್ರಕ್‌ಗಳನ್ನು ರಚಿಸುವ ಮೂಲಕ ಮತ್ತು ವ್ಯಾಪಾರಕ್ಕೆ ಅಗತ್ಯವಿರುವ ಯಾವುದೇ ಕಾರ್ಯಕ್ಷಮತೆಯನ್ನು ತಲುಪಿಸುವ ಮೂಲಕ ಕಂಪನಿಯು ಮುಂದಿನ ಹಂತಕ್ಕೆ ಒಯ್ಯುವ ಸಾಧನೆ ಮಾಡಿದೆ. ಹೆಚ್ಚಿನ ಕಾರ್ಯಕ್ಷಮತೆಯ ವಾಹನಗಳು, ಮಾರಾಟದ ನಂತರ ಚುರುಕುತನದ ಸೇವೆ, ವಿಸ್ತೃತ ಖಾತರಿ ಮತ್ತು ಹಲವಾರು ಇತರ ಬ್ರಾಂಡ್ ಪ್ರಯೋಜನಗಳೊಂದಿಗೆ, ಮಹೀಂದ್ರಾ ಭಾರತೀಯ ಟ್ರಕ್ಕಿಂಗ್ ಉದ್ಯಮದಲ್ಲಿ ಹೊಸ ಮಾನದಂಡವನ್ನು ಸ್ಥಾಪಿಸಿದೆ.

ಮಹೀಂದ್ರಾ ಟ್ರಕ್ ಮತ್ತು ಬಸ್ ಸಮಗ್ರ ಟ್ರಕಿಂಗ್ ಪರಿಹಾರಗಳನ್ನು ಒದಗಿಸುತ್ತದೆ, ಇದು ಗ್ರಾಹಕರಿಗೆ ಲಾಭದಾಯಕವಾಗಲು ಸಹಾಯ ಮಾಡುತ್ತದೆ ಮತ್ತು ಪ್ರತಿ ಅಂಶದಲ್ಲೂ ಮಹೀಂದ್ರಾ ಉತ್ಕೃಷ್ಟತೆಯ ಭರವಸೆಯೊಂದಿಗೆ ತ್ವರಿತ ತಿರುವು ಸಮಯ ಮತ್ತು ವಿಶ್ವಾಸಾರ್ಹತೆಯ ಲಾಭವನ್ನು ನೀಡುತ್ತದೆ. ಎಚ್‌ಸಿವಿ ಉತ್ಪನ್ನ ಶ್ರೇಣಿಯನ್ನು ಭಾರತೀಯ ಅಗತ್ಯಗಳಿಗಾಗಿ ಮೂಲಭೂತ ತತ್ವಶಾಸ್ತçದೊಂದಿಗೆ ವಿನ್ಯಾಸಗೊಳಿಸಲಾಗಿದೆ; 'ಮೇಡ್ ಇನ್ ಇಂಡಿಯಾ, ಮೇಡ್ ಫಾರ್ ಇಂಡಿಯಾ'. ಎಚ್‌ಸಿವಿ ವಿಭಾಗದಲ್ಲಿ, ಮಹೀಂದ್ರ ಟ್ರಕ್ ಮತ್ತು ಬಸ್ ವಿಭಾಗವು ಈಗಾಗಲೇ 55,000 ಎಚ್‌ಸಿವಿ ಟ್ರಕ್‌ಗಳನ್ನು ಭಾರತೀಯ ರಸ್ತೆಗಳಿಗೆ ತಲುಪಿಸಿದೆ. ಕಂಪನಿಯು ವಾಣಿಜ್ಯ ವಾಹನ ಮಾರುಕಟ್ಟೆಯ ಪ್ರತಿಯೊಂದು ವಿಭಾಗವನ್ನು ಪರಿಹರಿಸುವ ಪ್ರಕ್ರಿಯೆಯಲ್ಲಿದೆ; 3.5 ಟನ್ ಜಿವಿಡಬ್ಲ್ಯೂ ನಿಂದ ಹಿಡಿದು 55 ಟನ್ ಜಿವಿಡಬ್ಲ್ಯೂ ವರೆಗೆ ವೈವಿಧ್ಯಮಯ ವಾಹನಗಳನ್ನು ರೂಪಿಸಿ, ಸರಕು ಮತ್ತು ವಿಶೇಷ ಲೋಡ್ ಅಪ್ಲಿಕೇಶನ್‌ಗಳ ವಿಭಿನ್ನ ಅಗತ್ಯಗಳನ್ನು ಪೂರೈಸುವ ರೂಪಾಂತರಗಳನ್ನು ಪರಿಚಯಿಸಿದೆ. ಹೊಸ ಶ್ರೇಣಿಯ ಮಧ್ಯಮ ಮತ್ತು ಭಾರೀ ವಾಣಿಜ್ಯ ವಾಹನವನ್ನು ಚಕಾನ್‌ನ ಹೊಸ ಹಸಿರು ಕ್ಷೇತ್ರದ ಘಟಕದಲ್ಲಿ ತಯಾರಿಸಲಾಗುತ್ತಿದೆ. 700 ಎಕರೆಗಳಷ್ಟು ವ್ಯಾಪಿಸಿರುವ ಈ ಸ್ಥಾವರವು ರೂ. 4,000 ಕೋಟಿ ರೂಪಾಯಿ ಬಂಡವಾಳ ಹೂಡಿಕೆಯನ್ನು ಒಳಗೊಂಡಿದ್ದು, ಮಹೀಂದ್ರ ಉತ್ಪನ್ನಗಳನ್ನು ಉತ್ಪಾದಿಸುತ್ತಿದೆ. ಇದು ಮಹೀಂದ್ರ ಸಮೂಹಕ್ಕೆ ಸಮಗ್ರ ಉತ್ಪಾದನಾ ಘಟಕದ ಸಿನರ್ಜಿಗಳ ಪ್ರಯೋಜನಗಳನ್ನು ಪಡೆಯಲು ಸಹಾಯ ಮಾಡುತ್ತದೆ. ಕಂಪನಿಯು ತನ್ನ ಎಚ್‌ಸಿವಿ ವಿಭಾಗ ವ್ಯಾಪ್ತಿಯಲ್ಲಿ 6 ವರ್ಷಗಳು ಅಥವಾ 6 ಲಕ್ಷ ಕಿ.ಮೀ. ವರ್ಗಾವಣೆ ಮಾಡಬಹುದಾದ ಖಾತರಿಯನ್ನು ನೀಡುತ್ತದೆ, ಇದು ಉದ್ಯಮದಲ್ಲೇ ಮೊದಲ ಕೊಡುಗೆಯಾಗಿದೆ. ಇದು ಅತ್ಯಂತ ಕಡಿಮೆ ವೆಚ್ಚದ ಎಎಂಸಿಯನ್ನು ಹೊಂದಿದ್ದು, ಮಾಲೀಕತ್ವದ ಕಡಿಮೆ ವೆಚ್ಚ ಮತ್ತು ಶಕ್ತಿಯುತ ವಿಮಾ ಪ್ಯಾಕೇಜ್, ಎಂಸಿಓವರ್ ಅನ್ನು ಸಹ ನೀಡುತ್ತದೆ.

ಎಲ್‌ಸಿವಿ ವಿಭಾಗದಲ್ಲಿ, ಮಹೀಂದ್ರ ಟ್ರಕ್ ಮತ್ತು ಬಸ್ ವಿಭಾಗವು ಭಾರತದಾದ್ಯಂತ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸಿದ್ದು, ಈಗಾಗಲೇ 2,00,000 ವಾಹನಗಳು ರಸ್ತೆಗಳಲ್ಲಿವೆ. ಮಹೀಂದ್ರಾ ಟ್ರಕ್ ಮತ್ತು ಬಸ್ ತನ್ನ ನಂತರದ ಮಾರಾಟ ಸೇವೆ ಮತ್ತು ಸ್ಪೇರ್ಸ್ ನೆಟ್‌ವರ್ಕ್ಗಳನ್ನು ಶೀಘ್ರವಾಗಿ ವಿಸ್ತರಿಸುತ್ತಾ ಬಂದಿದೆ. ಇದೀಗ ಈ ಜಾಲದಲ್ಲಿ 90 3 ಎಸ್ ಡೀಲರ್‌ಶಿಪ್‌ಗಳು, 210 ಅಧಿಕೃತ ಸೇವಾ ಕೇಂದ್ರಗಳು, 34 ಎಂ-ಪಾರ್ಟ್ಸ್ ಪ್ಲಾಜಾಗಳು ಮತ್ತು 1600 ಕ್ಕಿಂತ ಹೆಚ್ಚು ರಿಟೇಲ್ ಮಳಿಗೆಗಳ ಸ್ಪೇರ್ ನೆಟ್ ವರ್ಕ್, ಪ್ರಮುಖ ಟ್ರಕ್ಕಿಂಗ್ ಮಾರ್ಗಗಳಲ್ಲಿ ಗ್ರಾಹಕರನ್ನು ತಲುಪಲು ಮತ್ತು ಬೆಂಬಲವನ್ನು ಇನ್ನಷ್ಟು ಸುಧಾರಿಸಲು ನೆರವಾಗಿವೆ. ಕಂಪನಿಯು ಭಾರತದ ಮೊದಲ ಬಹುಭಾಷಾ 24/7 ಸಹಾಯವಾಣಿಯ ಹೆಗ್ಗಳಿಕೆಯನ್ನು ಹೊಂದಿದೆ, ಈಗ ಗ್ರಾಹಕರು ಮತ್ತು ಚಾಲಕರಿಗೆ ತ್ವರಿತ ಬೆಂಬಲವನ್ನು ಒದಗಿಸಲು ತಾಂತ್ರಿಕ ತಜ್ಞರು ನಿರ್ವಹಿಸುತ್ತಿದ್ದಾರೆ. ಈಗ ಮೊಬೈಲ್ ಸೇವಾ ವ್ಯಾನ್‌ಗಳು ಮತ್ತು ಮೊಬೈಲ್ ಕಾರ್ಯಾಗಾರಗಳು ಬೆಂಬಲ ಜಾಲದ ವ್ಯಾಪ್ತಿ ಮತ್ತು ಚುರುಕುತನವನ್ನು ಮತ್ತಷ್ಟು ಹೆಚ್ಚಿಸುತ್ತವೆ.


ಮಹೀಂದ್ರಾ ಟ್ರಕ್ ಮತ್ತು ಬಸ್ ಶ್ರೇಣಿಯು ಮಹೀಂದ್ರಾ ಐಮ್ಯಾಕ್ಸ್ ಟೆಲಿಮ್ಯಾಟಿಕ್ಸ್ ಪರಿಹಾರವನ್ನು ಹೊಂದಿದ್ದು, ಇದು ಮುಂದಿನ ಪೀಳಿಗೆಯ ಟೆಲಿಮ್ಯಾಟಿಕ್ಸ್ ತಂತ್ರಜ್ಞಾನವನ್ನು ಆಧರಿಸಿದೆ ಮತ್ತು ಎಂಟಿಬಿ ಬ್ರಾಂಡ್ ಭರವಸೆಯ ಹೃದಯಭಾಗದಲ್ಲಿದೆ. ಅದರ ಬಿಎಸ್ 6 ವಾಹನಗಳಿಗೆ ಹಾರ್ ಚೀಸ್ ಗ್ಯಾರಂಟಿ ಕೆ ಸಾಥ್ ಭರವಸೆನ್ನು ನೀಡುತ್ತಿದೆ. ಮಹೀಂದ್ರ ಐಮ್ಯಾಕ್ಸ್, ಫ್ಲೀಟ್ ಕಾರ್ಯಾಚರಣೆಯ ದಕ್ಷತೆಯನ್ನು ಹೆಚ್ಚಿನ ಆಸ್ತಿ ಉತ್ಪಾದಕತೆ/ ಫ್ಲೀಟ್ ಬಳಕೆ, ಕಾರ್ಯಾಚರಣೆಗಳ ಕಡಿಮೆ ವೆಚ್ಚ ಮತ್ತು ಹೆಚ್ಚಿನ ಫ್ಲೀಟ್ ಸುರಕ್ಷತೆಯನ್ನು ಹೆಚ್ಚಿಸುತ್ತದೆ.

ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು www.mahindra.com, www.mahindratruckandbus.com  ಗೆ ಭೇಟಿ ನೀಡಿ

ಮಹೀಂದ್ರಾ ಬಗ್ಗೆ:

1945 ರಲ್ಲಿ ಸ್ಥಾಪನೆಯಾದ ಮಹೀಂದ್ರ ಉದ್ಯಮ ಸಮೂಹವು 100 ಕ್ಕೂ ಹೆಚ್ಚು ದೇಶಗಳಲ್ಲಿ 260,000 ಉದ್ಯೋಗಿಗಳನ್ನು ಹೊಂದಿರುವ ಕಂಪನಿಗಳ ಅತಿದೊಡ್ಡ ಮತ್ತು ಅತ್ಯಂತ ಮೆಚ್ಚುಗೆಯ ಬಹುರಾಷ್ಟಿçÃಯ ಒಕ್ಕೂಟವಾಗಿದೆ. ಇದು ಭಾರತದಲ್ಲಿ ಕೃಷಿ ಉಪಕರಣಗಳು, ಉಪಯುಕ್ತತೆ ವಾಹನಗಳು, ಮಾಹಿತಿ ತಂತ್ರಜ್ಞಾನ ಮತ್ತು ಹಣಕಾಸು ಸೇವೆಗಳಲ್ಲಿ ನಾಯಕತ್ವದ ಸ್ಥಾನವನ್ನು ಹೊಂದಿದೆ ಮತ್ತು ಇದು ವಿಶ್ವದ ಅತಿದೊಡ್ಡ ಟ್ರಾಕ್ಟರ್ ಕಂಪನಿಯಾಗಿದೆ. ಇದು ನವೀಕರಿಸಬಹುದಾದ ಇಂಧನ, ಕೃಷಿ, ಲಾಜಿಸ್ಟಿಕ್ಸ್, ಆತಿಥ್ಯ ಮತ್ತು ರಿಯಲ್ ಎಸ್ಟೇಟ್ ನಲ್ಲಿ ಪ್ರಬಲ ಅಸ್ತಿತ್ವವನ್ನು ಹೊಂದಿದೆ.

ಮಹೀ0ದ್ರಾ ಸಮೂಹವು ಜಾಗತಿಕ ಮಟ್ಟದಲ್ಲಿ ಇಎಸ್‌ಜಿಯನ್ನು ಮುನ್ನಡೆಸುವಲ್ಲಿ ಸ್ಪಷ್ಟವಾದ ಗಮನವನ್ನು ಹೊಂದಿದೆ, ಗ್ರಾಮೀಣ ಸಮೃದ್ಧಿಯನ್ನು ಸಕ್ರಿಯಗೊಳಿಸುತ್ತದೆ ಮತ್ತು ನಗರ ಜೀವನವನ್ನು ಇದು ಸಮೃದ್ಧಗೊಳಿಸುತ್ತದೆ. ಸಮುದಾಯಗಳು ಮತ್ತು ಮಧ್ಯಸ್ಥಗಾರರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ಉಂಟುಮಾಡುವ ಗುರಿಯನ್ನು ಹೊಂದಿದೆ.

Www.mahindra.com/Twitter ಮತ್ತು Facebook ನಲ್ಲಿ ಮಹೀಂದ್ರಾ ಬಗ್ಗೆ ಇನ್ನಷ್ಟು ತಿಳಿಯಿರಿ: @ಮಹೀಂದ್ರ ರೈಸ್/ನವೀಕರಣಗಳಿಗಾಗಿ https://www.mahindra.com/news-room  ಗೆ ಚಂದಾದಾರರಾಗಿ

ಮಾಧ್ಯಮ ಸಂಪರ್ಕ ಮಾಹಿತಿ:

ಪ್ರಮುಚ್ ಗೋಯೆಲ್, ಗುಂಪು ಸಂವಹನ

ಇ- ಮೇಲ್: goel.pramuch@mahindra.com

ಎಂಟಿಬಿ ಉತ್ಪನ್ನ/ ಮಾರ್ಕೆಟಿಂಗ್ ಸಂಬAಧಿತ ಪ್ರಶ್ನೆಗಳಿಗೆ ದಯವಿಟ್ಟು ಸಂಪರ್ಕಿಸಿ:

ರಾಜೀವ್ ಮಲಿಕ್, ಉಪಾಧ್ಯಕ್ಷ ಮತ್ತು ಪ್ರಧಾನ ಮಾರುಕಟ್ಟೆ - ವಾಣಿಜ್ಯ ವಾಹನಗಳು

ಇ- ಮೇಲ್:malik.rajeev@mahindra.com - :+91 9594968899


Post a Comment

0 Comments

Ad Code

Responsive Advertisement