ಬೆಂಗಳೂರು: ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನಾಚರಣೆ ಸಂಬ0ಧ ವಿಧಾನಸೌಧದಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ನೆರವೇರಿತು.
ರಾಜ್ಯ ಪುರಸ್ಕೃತ ಶಿಕ್ಷಕರಿಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹಾಗೂ ಶಾಸಕ ರಿಜ್ವಾನ್ ಅರ್ಷದ್ ಅವರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರಿಗೆ ಪ್ರಶಸ್ತಿ ಪ್ರಧಾನ ಹಾಗೂ ಸನ್ಮಾನ ಮಾಡಲಾಯಿತು. ಶಿಕ್ಷಕರಿಗೆ 10 ಸಾವಿರ ಬಹುಮಾನ ಹಾಗೂ ಶಾಲಾ ಅಭಿವೃದ್ಧಿಗೆ 50 ಸಾವಿರ ರೂ. ನಗದು ನೀಡಲಾಯಿತು.
ಈ ಸಂದರ್ಭದಲ್ಲಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಮಾತನಾಡಿ, ಇಂದು ವಿಶೇಷವಾದ ದಿನ. ನಮ್ಮ ಕರ್ತವ್ಯ ನೆನಪಿಸುವ ದಿನ. ಶಿಕ್ಷಣ ತಜ್ಞ ಹೇಗೆ ಎಲ್ಲರಿಗೂ ಆದರ್ಶವಾದರೂ ಎಂಬುದನ್ನು ನೆನಪಿಸುವ ದಿನ. ರಾಧಾಕೃಷ್ಣ ಅವರ ಬಗ್ಗೆ ಎಷ್ಟು ಮಾತನಾಡಿದರೂ ಸಾಲದು. ತತ್ವಜ್ಞಾನ ಆರಿಸಿಕೊಂಡ ನಂತರ ಹೇಗೆ ಮೈ ಗೂಡಿಸಿಕೊಂಡರು ಅನ್ನೋದನ್ನು ಬಿಟ್ಟು ಹೋಗಿದ್ದಾರೆ. ಅವರು ಹಾಕಿ ಕೊಟ್ಟ ಮಾರ್ಗದಲ್ಲಿ ನಾವೆಲ್ಲ ನಡೆಯಬೇಕು. ಉಪ ರಾಷ್ಟ್ರಪತಿ ಸ್ಥಾನ ಬಂದಾಗ ಆ ಸ್ಥಾನಕ್ಕೆ ಮೆರಗು ತಂದು ಕೊಟ್ಟವರು. ಕೋಲ್ಡ್ ವಾರ್ ಸಮಯದಲ್ಲಿ ತತ್ವಜ್ಞಾನದ ಮೂಲಕ ಜನರ ಮನಸ್ಸು ಪರಿವರ್ತನೆ ಮಾಡಿದ್ದರು. ಎಲ್ಲರೂ ಸುಜ್ಞಾನದ ಕಡೆ ಹೋಗಬೇಕು ಎಂಬುದನ್ನು ರಾಧಾಕೃಷ್ಣ ಅವರು ತಿಳಿಸಿದ್ದರು ಎಂದು ಹೇಳಿದರು.
ಕೊರೋನಾ ಬಿಕ್ಕಟ್ಟಿನ ಸಮಯದಲ್ಲಿ ಅನೇಕ ಶಿಕ್ಷಕರು ಬಂದು ಶಿಕ್ಷಣ ಹೇಳಿ ಕೊಟ್ಟಿದ್ದಾರೆ. ಅನೇಕರು ಪ್ರಾಣ ಕಳೆದುಕೊಂಡರು. ಶಾಲೆ ಪ್ರಾರಂಭ ಮಾಡಬೇಕೋ ಬಿಡಬೇಕೋ ಎಂಬ ಗೊಂದಲ ಇತ್ತು. ಆದರೆ ಸರ್ಕಾರ ತೆಗೆದುಕೊಂಡ ನಿರ್ಧಾರಕ್ಕೆ ಶಿಕ್ಷಕರು ನಿಂತರು. ಎಸ್ ಎಸ್ ಎಲ್ ಸಿ ಎಕ್ಸಾಂ ಮಾಡುವುದು ಸುಮ್ಮನೆ ಮಾತಲ್ಲ. ಅಷ್ಟು ಧೈರ್ಯವಾಗಿ ಬಂದು ಕೆಲಸ ಮಾಡಿದರು. ಕೊರೋನಾ ಸಮಯದಲ್ಲೂ ಮಕ್ಕಳನ್ನು ತಯಾರು ಮಾಡಿದ್ದರು. ಅನೇಕ ಶಾಲೆಗಳಿಗೆ ಹೋಗುವ ಪ್ರಯತ್ನ ಮಾಡಿದೆ. ಅನೇಕ ಶಾಲೆಗಳಲ್ಲಿ ಶಿಕ್ಷಕರು ಮಾಡಿರುವ ಕೆಲಸ ನಿಜಕ್ಕೂ ಮೆಚ್ಚುವಂತಹದ್ದು.






0 Comments