Ticker

6/recent/ticker-posts

Ad Code

Responsive Advertisement

DW ಸುದ್ದಿ ಸಂಸ್ಥೆಯ ಪತ್ರಕರ್ತರ ಸಂಬಂಧಿಗೆ ಗುಂಡಿಕ್ಕಿದ ತಾಲಿಬಾನ್!

 


ಅಫ್ಘಾನಿಸ್ತಾನಧಲ್ಲಿ ತಾಲಿಬಾನ್ ಉಗ್ರರ ಅಟ್ಟಹಾಸ ದಿನದಿಂದ ದಿನಕ್ಕೆ ಮಿತಿ ಮೀರುತ್ತಿದೆ. ಜರ್ಮನಿ ಮೂಲದ ಡಾಯ್ಚ ವೆಲ್ಲೆ(DW News) ಸುದ್ದಿ ಸಂಸ್ಥೆಯ ಪತ್ರಕರ್ತನನ್ನು ಹುಡುಕುವ ವೇಳೆ ಅವರ ಕುಟುಂಬ ಸದಸ್ಯರನ್ನು ತಾಲಿಬಾನ್ ಹೊಡೆದು ಕೊಂದಿರುವ ಘಟನೆ ವರದಿಯಾಗಿದೆ.

ಜರ್ಮನಿ ಮೂಲದ DW ಸುದ್ದಿ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪತ್ರಕರ್ತನಿಗಾಗಿ ತಾಲಿಬಾನ್ ಉಗ್ರರು ಮನೆ ಮನೆ ಹುಡುಕಾಟ ನಡೆಸಿದ್ದಾರೆ. ಈ ವೇಳೆ ತಾಲಿಬಾನ್ ಉಗ್ರರ ಗುಂಡಿಗೆ ಒಬ್ಬ ಸಂಬಂಧಿ ಪ್ರಾಣ ಬಿಟ್ಟಿದ್ದು, ಮತ್ತೊಬ್ಬರು ಗಾಯಗೊಂಡಿದ್ದಾರೆ. ಉಳಿದಂತೆ ಕುಟುಂಬದ ಸದಸ್ಯರು ಪತ್ರಕರ್ತನ ಬಗ್ಗೆ ಮಾಹಿತಿ ನೀಡದೇ ತಪ್ಪಿಸಿಕೊಂಡಿದ್ದಾರೆ ಎಂದು ಗೊತ್ತಾಗಿದೆ.

ತಮ್ಮ ಸಂಸ್ಥೆಯ ಪತ್ರಕರ್ತನ ಸಂಬಂಧಿಕರ ಹತ್ಯೆಯನ್ನು DW ಸುದ್ದಿ ಸಂಸ್ಥೆಯ ನಿರ್ದೇಶಕ ಪೀಟರ್ ಲಿಂಬರ್ಗ್ ಖಂಡಿಸಿದ್ದಾರೆ. "ಅಫ್ಘಾನಿಸ್ತಾನದಲ್ಲಿ ಮಾಧ್ಯಮ ಪ್ರತಿನಿಧಿಗಳು ಹಾಗೂ ಅವರ ಸಂಬಂಧಿಕರಿಗೆ ರಕ್ಷಣೆ ಇಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತಿದೆ. ತಾಲಿಬಾನ್ ನಿನ್ನೆ ನಮ್ಮ ಸಂಪಾದಕರೊಬ್ಬರ ಹತ್ತಿರದ ಸಂಬಂಧಿಯನ್ನು ಕೊಂದಿರುವುದು ಊಹಿಸಲಾಗದಷ್ಟು ದುರಂತ, ಮತ್ತು ಅಫ್ಘಾನಿಸ್ತಾನದಲ್ಲಿರುವ ನಮ್ಮ ಎಲ್ಲಾ ಉದ್ಯೋಗಿಗಳು ಮತ್ತು ಅವರ ಕುಟುಂಬಗಳು ತಮ್ಮನ್ನು ತಾವು ಕಂಡುಕೊಳ್ಳುವ ತೀವ್ರ ಅಪಾಯಕ್ಕೆ ಸಾಕ್ಷಿಯಾಗಿದೆ," ಎಂದಿದ್ದಾರೆ.

"ಕಾಬೂಲ್ ಮತ್ತು ಪ್ರಾಂತ್ಯಗಳಲ್ಲಿ ತಾಲಿಬಾನ್ ಉಗ್ರರು ಈಗಾಗಲೇ ನಮ್ಮ ಸಂಸ್ಥೆಯ ಪತ್ರಕರ್ತರಿಗಾಗಿ ಸಂಘಟಿತ ಹುಡುಕಾಟ ನಡೆಸುತ್ತಿದೆ ಎಂಬುದು ಸ್ಪಷ್ಟವಾಗುತ್ತಿದೆ. ತಾಲಿಬಾನ್ ಕನಿಷ್ಠ ಮೂರು ಇತರ ಡಿಡಬ್ಲ್ಯೂ ಪತ್ರಕರ್ತರ ಮನೆಗಳ ಮೇಲೆ ದಾಳಿ ಮಾಡಿದೆ," ಎಂದು ಬ್ರಾಡ್‌ಕಾಸ್ಟರ್ ಉಲ್ಲೇಖಿಸಿದೆ. DW ಮತ್ತು ಇತರ ಜರ್ಮನ್ ಮಾಧ್ಯಮ ಸಂಸ್ಥೆಗಳು ಅಫ್ಘಾನಿಸ್ತಾನದಲ್ಲಿ ವಾಸವಿರುವ ತಮ್ಮ ಸಿಬ್ಬಂದಿಗೆ ರಕ್ಷಣೆ ನೀಡುವ ನಿಟ್ಟಿನಲ್ಲಿ ತ್ವರಿತ ಕ್ರಮ ಕೈಗೊಳ್ಳುವಂತೆ ಜರ್ಮನಿ ಸರ್ಕಾರಕ್ಕೆ ಮನವಿ ಮಾಡಿಕೊಂಡಿವೆ.

Post a Comment

0 Comments

Ad Code

Responsive Advertisement