ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಚಾಕವೇಲು ಪಂಚಾಯಿತಿಯಲ್ಲಿ ಎಲ್ಲಾ ಹಳ್ಳಿಗಳಿಗೂ ಎಲ್ಲಾ ಮನೆಗಳಿಗೂ ಜಾತಿಭೇದ, ಪಕ್ಷಬೇದ, ಬಡವ-ಬಲ್ಲಿದ ನೆಂಬ ಭೇದ ಭಾವಗಳಿಲ್ಲದೆ ಫುಡ್ ಕಿಟ್ ವಿತರಣೆ ಮಾಡಿರುತ್ತಾರೆ ಇದಕ್ಕೆ ಸಾಥ್ ಕೊಟ್ಟ ಪಕ್ಷದ ಎಲ್ಲಾಕಾರ್ಯಕರ್ತರು ಶಾಸಕರ ಅಭಿಮಾನಿಗಳು ಊರಿನ ಹೊಸ್ತಿಲಲ್ಲೇ ಹಾರ-ತುರಾಯಿ ಗಳನ್ನು ಹಾಕಿ ಮಂಗಳವಾದ್ಯಗಳೊಂದಿಗೆ ಬಾಜಾ ಬಜಂತ್ರಿ ಗಳೊಂದಿಗೆ ವೇದಿಕೆ ಯವರಿಗೂ ಪುಷ್ಪಗಳನ್ನು ಹಾಗುತ್ತಾ ಸ್ವಾಗತ ಕೋರಿ ಸಂಭ್ರಮಿಸಿರುತ್ತಾರೆ.
ಸಮಾರಂಭದಲ್ಲಿ ಎಲ್ಲರಿಗೂ ಸ್ವಾಗತ ಕೋರಿದ ಯುವ ಮುಖಂಡ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ H.S. ನರೇಂದ್ರ ಈ ಹಿಂದೆ ಬಾಗೇಪಲ್ಲಿಯಲ್ಲಿ ಪಕ್ಷದ ಮುಖಂಡರುಗಳಾದ ಸಿದ್ದರಾಮಯ್ಯ ಡಿ.ಕೆ. ಶಿವಕುಮಾರ್ ರವರ ಮುಖಂಡತ್ವದಲ್ಲಿ ಇನ್ನೂ ಅನೇಕ ಗಣ್ಯವ್ಯಕ್ತಿಗಳ ಸಮ್ಮುಕದಲ್ಲಿ ಬಾಗೇಪಲ್ಲಿ ತಾಲೂಕಿನಾದ್ಯಂತ ಮತ್ತು ಗುಡಿಬಂಡೆ ಚೇಳೂರು ತಾಲ್ಲೂಕುಗಳಲ್ಲಿಯೂ ಸಹ ವಿತರಣೆ ಮಾಡಲು ಸಮಾರಂಭ ಬಾಗೇಪಲ್ಲಿಯಲ್ಲಿ ಹಮ್ಮಿಕೊಳ್ಳಲಾಗಿತ್ತು ಇನ್ನೂ ಮುಂಚಿತವಾಗಿಯೇ ವಿತರಣೆ ಮಾಡಬೇಕಾಗಿತ್ತು ಆದರೆ ಶಾಸಕರ ಆರೋಗ್ಯ ತುಸು ಏರು-ಪೇರು ಆಗಿದ್ದರಿಂದ ಸ್ವಲ್ಪ ತಡವಾಗಿದೆ ಎಂದು ಶಾಸಕರು ಕ್ಷೇತ್ರದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮಗಳ ಬಗ್ಗೆ ಶಾಸಕರ ಗುಣಗಾನವನ್ನು ಕೊಂಡಾಡಿದರು ಕರೋನಾ ಕಾಲದಲ್ಲಿ ಜನಸಾಮಾನ್ಯರು ಯಾವ ರೀತಿ ಅನ್ನಕ್ಕಾಗಿ ಆರೋಗ್ಯಕ್ಕಾಗಿ ಕಷ್ಟಪಟ್ಟಿದ್ದಾರೆಂದು ನೆನೆದು ಅವರ ಕಷ್ಟಕ್ಕೆ ಭಾಗಿಯಾಗುತ್ತಿದ್ದಾರೆ ಯಾವುದೇ ಚುನಾವಣೆಯ ಅಮಿಷವಲ್ಲ ಮತ್ತು ಪ್ರಚಾರ ಗಿಟ್ಟಿಸಿಕೊಳ್ಳುದಕ್ಕಾಗಲೀ ಅಲ್ಲ.
ಇವರು ಸುಮಾರು 20 ವರ್ಷಗಳಿಂದ ಸಮಾಜ ಸೇವೆ ಸಲ್ಲಿಸುತ್ತಿದ್ದು ಅಂದರೆ ಉಚಿತ ಮದುವೆಗಳು ಜನಸಾಮಾನ್ಯರ ಆರೋಗ್ಯ ಏರುಪೇರಾದಾಗ ಬೆಂಗಳೂರಿನ ಆಸ್ಪತ್ರೆಗಳಲ್ಲಿ ಇವರ ಖರ್ಚಿನಲ್ಲಿ ರೋಗಿಗಳಿಗೆ ಅನುಕೂಲ ಮಾಡುವುದು ಎಷ್ಟೋಜನ ವಿದ್ಯಾವಂತ ನಿರುದ್ಯೋಗಿಗಳಿಗೆ ನಮ್ಮ ಹಳ್ಳಿಯಲ್ಲಿ ಇರುವವರಿಗೆ ಬೆಂಗಳೂರಿನಲ್ಲಿ ಉದ್ಯೋಗವಕಾಶಗಳನ್ನು ಮಾಡಿಕೊಟ್ಟಿರುತ್ತಾರೆ ಉನ್ನತ ವಿದ್ಯಾರ್ಥಿಗಳಿಗೆ ಹಣ ಸಹಾಯವಾಗಲಿ ಕಾಲೇಜು ಹಾಸ್ಟೆಲುಗಳಲ್ಲಿ ಸೀಟುಗಳಿಗೆ ಶಿಫಾರಸುಗಳನ್ನು ಆಗಲಿ ಮಾಡಿರುತ್ತಾರೆ ಜನಸಾಮಾನ್ಯರಿಗೆ ಏನೇ ಕಷ್ಟ ಬಂದರೂ ತನ್ನ ಕೈಯಲ್ಲಿ ಆಗುವ ಸಹಾಯ ಮಾಡಿ ಜನಸಾಮಾನ್ಯರ ಮನ ಗೆದ್ದಿರುತ್ತಾರೆ ಅವರ ಆಸೆ ಏನೆಂದರೆ ಕ್ಷೇತ್ರ ಅಭಿವೃದ್ಧಿ ಆಗಬೇಕೆನ್ನುವುದು ಒಂದೇ ಗುರಿ ಎಂದು ಶಾಸಕರ ಪರವಾಗಿ ಬ್ಯಾಟ್ ಬೀಸಿದರೆ ಇನ್ನು ಮಾಜಿ ತಾಲೂಕ್ ಪಂಚಾಯಿತಿ ಅಧ್ಯಕ್ಷರಾದ K.M. ರಾಮಿ ರೆಡ್ಡಿರವರು ಶಾಸಕರ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಇವರು ಮಾತು ಕೊಟ್ಟರೆ ಕೆಲಸ ಮಾಡೇ ಮಾಡುತ್ತಾರೆ.
ಇಂತಹವರು ನಮಗೆ ಮುಂದೆಯೂ ಶಾಸಕರ ಆಗಿರಬೇಕು ಮುಂದೆಯೂ ಜನರ ಆಶಿರ್ವಾದದಿಂದ ಇವರಿಗೆ ಅಧಿಕಾರ ಸಿಕ್ಕೇ ಸಿಗುತ್ತದೆ ಎಂದು ಘಂಟಾಘೋಷವಾಗಿ ಹೇಳಿ ಇವರ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ ಇವರು ನಮ್ಮವರು ನಮ್ಮ ಮನೆಯಲ್ಲಿ ಇರುವವರು ಎಂದು ತಿಳಿದುಕೊಳ್ಳಬೇಕೆಂದು ಇದು ಸರ್ಕಾರಿ ಸಮಾರಂಭವಲ್ಲ ಇದು ಸುಬ್ಬಾರೆಡ್ಡಿ ರವರ ಕಾರ್ಯಕ್ರಮ ಎಂದು ಹರ್ಷ ವ್ಯಕ್ತಪಡಿಸಿರುತ್ತಾರೆ. ಚಾಕವೇಲು ಪಂಚಾಯಿತಿ ಸದಸ್ಯರಾದ K.L. ಮೋಹನ್ ರೆಡ್ಡಿ ಎರಡೇ ನಿಮಿಷ ಮಾತಾಡಿ ಅವರನ್ನು ಎಷ್ಟು ಹೊಗಳಿದರೂ ಸಾಲದು ಹೊಗಳಲು ಪದಗಳೇ ಇಲ್ಲ ಇವರು ಬಂಗಾರು ರಾಜ ಓ ಚಂದಮಾಮ ಅಲ್ಲ ಎಂದು ಇವರನ್ನು ನಾವು ಹೃದಯದಲ್ಲಿಯೇ ಇಟ್ಟುಕೊಂಡಿದ್ದೇವೆ ಇವರು ನಮ್ಮ ಬಂಧುಗಳು ಇವರು ನಮ್ಮವರು ಎಂದು ಕೊಂಡಾಡಿದರು ಮತ್ತೆ ಶಾಸಕರು ಮಾತಾಡುತ್ತಾ ಎಲ್ಲಾ ವೇದಿಕೆಯಲ್ಲಿ ಇರುವವರೆಗೂ ನಮಸ್ಕರಿಸಿ ನಾನು ಸುಮಾರು25 ವರ್ಷಗಳಿಂದ ಸಮಾಜ ಸೇವೆ ಮಾಡಿಕೊಂಡು ಬರುತ್ತಿದ್ದು ಮೊದಲು ಉಚಿತ ಮದುವೆಗಳು ಮಾಡುತ್ತಿದ್ದೆ ಮತ್ತೆ ಅವರು ಬದುಕು ಕಟ್ಟಿಕೊಳ್ಳಲು ಒಂದು ಹಸುವನ್ನು ಕೊಟ್ಟು ಅವರ ಜೀವನೋಪಾಯಕ್ಕೆ ಅನುಕೂಲ ಮಾಡುತ್ತಿದ್ದೆ ಇನ್ನೂ ಅನೇಕ ಆರೋಗ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಕಣ್ಣಿನ ಶಸ್ತ್ರಚಿಕಿತ್ಸೆಗಳನ್ನು ಮಾಡಿಸುತ್ತಿದೆ ಮತ್ತು ವಿದ್ಯಾರ್ಥಿಗಳಿಗೆ ಧನಸಹಾಯ ವಾಗಲಿ ಮತ್ತು ಬೆಂಗಳೂರಿನ ನಗರಗಳಲ್ಲಿ ಕಾಲೇಜಿನ ಮತ್ತು ಹಾಸ್ಟೆಲಿನ ಸೀಟುಗಳಿಗೆ ಸಹಾಯಗಳನ್ನು ಮಾಡುತ್ತಿದ್ದೆ ನಾನು ಸಹ ಚಿಕ್ಕ ಹಳ್ಳಿಯಾದ ಚಿನ್ನಕಾಯಲ ಪಲ್ಲಿ ಎಂಬ ಹಳ್ಳಿಯಲ್ಲಿ ರೈತಾಪಿ ವರ್ಗದ ಬಡ ಕುಟುಂಬದಲ್ಲಿ ಜನಿಸಿ ಬಡವರ ಹಸಿವು ಹೇಗಿರುತ್ತದೆ ಎಂದು ಅನುಭವಿಸಿ ಈ ಮಟ್ಟಕ್ಕೆ ಬಂದಿದ್ದೇನೆ ನಾನೇನು ರಾಜಕೀಯ ಕುಟುಂಬದವನಲ್ಲ ನನ್ನ ಕುಟುಂಬದಲ್ಲಿ ಯಾರೂ ರಾಜಕೀಯಕ್ಕೆ ಇಳಿದಿಲ್ಲ ನಾನೇ ಹೊಸದಾಗಿ ರಾಜಕೀಯಕ್ಕೆ ಬಂದಿದ್ದೇನೆಂದು ತಮ್ಮ ಬಾಲ್ಯದ ನೆನಪುಗಳನ್ನು ಮೆಲುಕು ಹಾಕುತ್ತಾ ನಾನು ಬೆಂಗಳೂರಿಗೆ ಹೋಗಿ ಒಂದು ವ್ಯಾಪಾರ ಮಾಡಿದೆ.
ಅದರಲ್ಲಿ ಸ್ವಲ್ಪ ಲಾಭ ಬಂತು ಆ ರೀತಿಯಾಗಿ ಬೆಳೆದ ಬಂದು ನಾನು ಲಾಭಾಂಶದಲ್ಲಿ ಸ್ವಲ್ಪ ಭಾಗ ಸಮಾಜ ಸೇವೆಗೆಂದು ಎತ್ತಿಟ್ಟೆ ಅಂದರೆ ಬೇರೆಯವರು ಲಾಭಾಂಶದಲ್ಲಿ ದೇವರ ಹುಂಡಿಗೆ ಹಾಕುತ್ತಾರೆ ಆದರೆ ನಾನು ಸಮಾಜಸೇವೆಗೆ ಎತ್ತಿಟ್ಟಿರುವಂತಹ ಹಣದಿಂದಲೇ ಈ ರೀತಿ ಸೇವೆ ಮಾಡುತ್ತೇನೆ ಆದರೆ ವಿರೋಧಿಗಳು ಬೇರೆ ರೀತಿ ಹೇಳಿಕೆಗಳು ಕೊಡುತ್ತಾರೆ ಆದರೆ ಅದರ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ ವೆಂದು ಈ ಭಾಗದಲ್ಲಿ ಫ್ಲೋರೈಡ್ ಜಾಸ್ತಿ ಇರುವುದರಿಂದ ಎಲ್ಲರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕೆಂದು ಹಳ್ಳಿಹಳ್ಳಿಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ತೆರೆದಿದ್ದೇನೆ ಇಲ್ಲದೆ ಇರುವ ಹಳ್ಳಿಗಳಿಗೆ ಮುಂದೆ ತೆರೆಯುತ್ತೇನೆ ಮತ್ತು ರಸ್ತೆಗಳ ಅಭಿವೃದ್ಧಿಗೆ ಒತ್ತು ಕೊಡುತ್ತೇನೆ ಹಾಗೂ ಚಾಕವೇಲು ವಿನಿಂದ ನಲ್ಲಾಗುಟ್ಟಲಪಲ್ಲಿ ರಸ್ತೆ ಟೆಂಡರ್ ಆಗಿದೆ ಎಂದು ಶೀಘ್ರದಲ್ಲೇ ಕಾಮಗಾರಿ ಪ್ರಾರಂಭಿಸಲಾಗುವುದು ನಾನು ಇನ್ನೂ ಅನೇಕ ಸಮಾಜಸೇವೆ ಮಾಡಬೇಕೆನ್ನುವ ಆಸೆ ಇದೆ ನೀವು ನನ್ನನ್ನು ಶಾಸಕರಾಗಿ ಆಯ್ಕೆ ಮಾಡಿ ಶಾಸಕರ ಭಾಗ್ಯ ಕೊಟ್ಟುಎಂಟು ವರ್ಷಗಳ ಅಧಿಕಾರ ನೀಡಿರುತ್ತೀರಿ ನಿಮಗೆ ನಾನು ಚಿರಋಣಿಯಾಗಿರುತ್ತೇನೆ ಎಂದು ಯಾರಿಗೆ ಆಗಲಿ ಬಿ.ಪಿ.ಎಲ್. ಕಾರ್ಡ್ ಮತದಾರರ ಗುರುತಿನ ಚೀಟಿ ಮತ್ತು ಎಲ್ಲಾ ರೀತಿಯ ಪಿಂಚಣಿಯ ಸೌಲಭ್ಯಗಳು ಇಲ್ಲದಿದ್ದಲ್ಲಿ ನನ್ನ ಕಚೇರಿಗೆ ಭೇಟಿ ಕೊಡಿ ನಾನು ನಿಮಗೆ ಸಹಾಯ ಹಸ್ತ ನೀಡುತ್ತೇನೆಂದು ಮತ್ತು ಯಾರೇ ಆಗಲಿ ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿದ್ಧರೆ ನೀವು ನನಗೆ ಅರ್ಜಿ ಕೊಟ್ಟರೆ ಸಾಕು ನಿಮಗೆ ಸ್ವಂತ ಮನೆ ಮಾಡಿ ದಾಖಲಾತಿಗಳನ್ನು ಕೊಡಿಸುತ್ತೇನೆ ಮತ್ತು ರೈತರು ಸರ್ಕಾರಿ ಭೂಮಿಯಲ್ಲಿ ವ್ಯವಸಾಯ ಮಾಡುತ್ತಿದ್ದಾರೆ.
ಅವರಿಗೂ ಸಹ ಸಾಗುವಳಿ ಚೀಟಿ ಮಾಡಿಸಿ ಪಹಣಿ ಮತ್ತು ಖಾತೆ ನಿಮ್ಮ ಹೆಸರಿಗೆ ಮಾಡಿಸಿಕೊಡುತ್ತೇನೆ ನನ್ನ ಕಚೇರಿಗೆ ಭೇಟಿ ಕೊಡಿ ಅದು ಬಿಟ್ಟು ಎಲ್ಲೋ ಅರಳಿಮರ ಕಟ್ಟೆಯ ಮೇಲೆ ಕೂತು ಎಂ.ಎಲ್.ಎ. ಏನು ಮಾಡುತ್ತಾನೆ ಅವರೇನು ಮಾಡುವುದಿಲ್ಲವೆಂದು ಸುಮ್ಮಸುಮ್ಮನೆ ಕಾಲಹರಣ ಮಾಡದೆ ತಪ್ಪಾಗಿ ತಿಳಿಯಬೇಡಿ ನೀವು 3 ಇಲ್ಲವೇ4 ಕೆಲಸಗಳಿಗೆ ಬಂದರೆ ನಾನು ಎರಡಾದರೂ ಮಾಡುತ್ತೇನೆ ಅದು ಬಿಟ್ಟು ಬರದೇನೆ ನನ್ನನ್ನು ಅಪಾರ್ಥ ಮಾಡಿಕೊಂಡರೆ ಅದು ಸಮಂಜಸವಲ್ಲ.
ಜನಸಾಮಾನ್ಯರು ಎಲ್ಲರೂ ಬರೀ ಬೋರ್ ಗಳಿಗೆ ಮತ್ತು ಲೋನ್ ಗಳಿಗೆ ಬರುತ್ತಾರೆ ಆದರೆ ನನ್ನ ಕೋಟ 20 ಜನಕ್ಕೆ ಮಾತ್ರ ಇರುತ್ತದೆ ಆದರೆ ಎರಡು ಲಕ್ಷ ಜನರಲ್ಲಿ ಯಾವ ರೀತಿ ಯಾರಿಗೆ ಕೊಡುವುದು ಯಾವುದೇ ಸಮಸ್ಯೆ ಇದ್ದರೂ ದಯವಿಟ್ಟು ಬನ್ನಿ ಚಾಕವೇಲು ಪಂಚಾಯಿತಿಯಲ್ಲಿ 2500 ಮನೆಗಳಿವೆ ಆದರೆ ನಾನು 3000 ಕಿಟ್ ತಂದಿದ್ದೇನೆ ಎಲ್ಲರಿಗೂ ಸಿಕ್ಕೆ ಸಿಗುತ್ತದೆ ಎಂದು ಒಬ್ಬರ ಮೇಲೆ ಒಬ್ಬರು ಬೀಳದೆ ಕರೋನ ನೆನಪಿಸಿಕೊಂಡು ಅಂತರ ಕಾಪಾಡಿ ಆತುರ ಪಡದೆ ನಿಧಾನಕ್ಕೆ ತೆಗೆದುಕೊಳ್ಳಿ ಎಂದು ಪ್ರತಿ ಬುಧವಾರ ಜನಸಾಮಾನ್ಯರ ಕುಂದುಕೊರತೆಗಳನ್ನು ಆಲಿಸುತ್ತೇನೆ ದಯವಿಟ್ಟು ಬನ್ನಿ ಎಂದು ವಿನಂತಿಸಿಕೊಂಡರು ನೆರೆದಿದ್ದ ಅಭಿಮಾನಿಗಳು ಕಾರ್ಯಕರ್ತರು ಶಾಲು ಹಾಕಿ ಪೇಟೆ ಧರಿಸಿ ಹಾರ ಹಾಕಿ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಹಿರಿಯ ಮುಖಂಡರಾದ KPCC ಸದಸ್ಯರಾದ ಅಮರನಾಥ ರೆಡ್ಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ H.S. ನರೇಂದ್ರ, ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷರು ಆದ ಕೆ.ಎಂ.ರಾಮರೆಡ್ಡಿ ಆನಂದ್ ಯುವ ಮುಖಂಡರಾದ ಕೆ.ವಿ.ಶೇಖರ್ ರೆಡ್ಡಿ ಭಾಸ್ಕರ್ ರೆಡ್ಡಿ ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಕೆ.ಆರ್. ಸುಧಾಕರ್ ರೆಡ್ಡಿ ಮನೋಹರ್ ರೆಡ್ಡಿ ಕೆ.ಎಂ.ಸುಧಾಕರರೆಡ್ಡಿ ಪ್ರಕಾಶ್ ರೆಡ್ಡಿ ಶೇಖರ್ ರೆಡ್ಡಿ ಎಸ್ .ವಿ.ಶ್ರೀರಾಮರೆಡ್ಡಿ ಜಯರಾಮರೆಡ್ಡಿ ಆಂಜನೇಯ ರೆಡ್ಡಿ ಶೇಖರ್ ರೆಡ್ಡಿ ರಮೇಶ್ ರೆಡ್ಡಿ ವೆಂಕಟರೆಡ್ಡಿ ಇನ್ನೂ ಅನೇಕ ಹಿರಿಯ ಮುಖಂಡರು ಹಿರಿಯ ಮುಖಂಡರು ಭಾಗವಹಿಸಿರುತ್ತಾರೆ.





0 Comments