Ticker

6/recent/ticker-posts

Ad Code

Responsive Advertisement

ಗಾಂಧೀ ಸೇವಾ ಪ್ರಶಸ್ತಿ ಗಳ ಆಯ್ಕೆ ಪ್ರಕ್ರಿಯೆ ಪ್ರಾರಂಭಿಸಬಹುದೇ?

ಕರ್ನಾಟಕ ಸರಕಾರ 2014 ರಲ್ಲಿ ಸ್ಥಾಪಿಸಿ  ಪ್ರತಿ ಗಾಂಧಿ ಜಯಂತಿ ಯಂದು ನೀಡುತ್ತಿರುವ ಈ ಪ್ರಶಸ್ತಿಗೆ ಗಾಂಧೀ ಚಿಂತಕರಾದ ಎಸ್.ಎನ್.ಸುಬ್ಬರಾವ್, ಹೋ. ಶ್ರೀನಿವಾಸಯ್ಯ, ಚನ್ನಮ್ಮಾ  ಹಳ್ಳಿಕೇರಿ, ಹೆಚ್ .ಎಸ್ .ದೊರೆಸ್ವಾಮಿ,ರಂಗಕರ್ಮಿ ಪ್ರಸನ್ನ,  ಜಿ. ಎಸ್. ಜಯದೇವ ಈಗಾಗಲೇ ಭಾಜನರಾಗಿರುವುದು ತೃಪ್ತಿದಾಯಕ.

 ರಾಜ್ಯ ಸರಕಾರ ನೀಡುತ್ತಿರುವ ಈ ಪ್ರತಿಷ್ಠಿತ ಪ್ರಶಸ್ತಿಗೆ ಅರವತ್ತು ಮೀರಿದ ವ್ಯಕ್ತಿಗಳಿಂದ ಮತ್ತು ಇಪ್ಪತೈದು ವರ್ಷಕ್ಕೂ ಹೆಚ್ಚು ಕಾಲ ಗಾಂಧೀ ವಿಚಾರಧಾರೆ ಯಲ್ಲಿ ಕೆಲಸ ಮಾಡುತ್ತಿರುವ ಸಂಘ ಸಂಸ್ಥೆಗಳಿಂದ ಅರ್ಜಿ ಹಾಗೂ ನಾಮ ನಿರ್ದೇಶನ ಗಳನ್ನು ಕಳೆದ ಸೆಪ್ಟೆಂಬರ್ ನಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಹ್ವಾನಿಸಿತ್ತು.
 ಸರಕಾರಕ್ಕೆ ಅರ್ಹ ವ್ಯಕ್ತಿ ಅಥವಾ ಸಂಸ್ಥೆಯನ್ನು ಶಿಫಾರಸು ಮಾಡುವ ಸಲುವಾಗಿ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ತ್ರಿ ಸದಸ್ಯ ಸಮಿತಿಯೊಂದನ್ನು ನೇಮಿಸಲಾಗಿತ್ತು. ಕೊವಿಡ್ ಹಿನ್ನೆಲೆಯಲ್ಲಿ ಈ ಸಮಿತಿಯ ಅವಧಿ ಯನ್ನು 2020 ಹಾಗೂ 2021 ಈ ಎರಡೂ ವರ್ಷಗಳ ಪ್ರಶಸ್ತಿಗಳಿಗೆ  ಆಯ್ಕೆ ಮಾಡುವ ಹೊಣೆ ವಹಿಸಲಾಗಿತ್ತು.
  ವಿವಿಧ ಅಕಾಡೆಮಿ ಮತ್ತು ಇಲಾಖೆಗಳು ಇದೀಗ ಪ್ರಶಸ್ತಿ ವಿತರಣೆ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಿ ರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಸ್ವಾತಂತ್ರ್ಯ ದ ಈ ಅಮೃತ ಮಹೋತ್ಸವದ ಸಂದರ್ಭದಲ್ಲಿ  2020 ಮತ್ತು 21ಸಾಲಿನ ಗಾಂಧೀ ಸೇವಾ ಪ್ರಶಸ್ತಿ ಗಳ ಆಯ್ಕೆ ಪ್ರಕ್ರಿಯೆ ಪ್ರಾರಂಭಿಸಬಹುದೇ?

ಡಾ. ಹೊಸ್ಕೆರೆ .ಎಸ್.ಸುರೇಶ್( 9448027400)
G 4 ಅಕ್ಷಯ ಅಪಾರ್ಟ್ ಮೆಂಟ್ಸ್
ಅಕ್ಷಯನಗರ ಬೇಗೂರು ಪೋಸ್ಟ್
ಬೆಂಗಳೂರು 560114

Post a Comment

0 Comments

Ad Code

Responsive Advertisement