ಸಾಯುವ ಕೊನೆಯಕಾಲದಲ್ಲಿ ಹೇಳುವ ಮಾತನ್ನು ಹೇಗೆ ನ್ಯಾಯಲಯದಲ್ಲಿ ನ್ಯಾಯಾಧೀಶರು ಒಪ್ಪುತ್ತಾರೊ ಹಾಗೆ ಅಷ್ಟವಸುಗಳಳೊರ್ವ ಭರತ ವರ್ಷದ ಋಷಿ ಶ್ರೇಷ್ಠರಾದ ವಸಿಷ್ಠರು, ದೇವತೆಗಳಿಗೆ ಗುರುವಾಗಿರುವ ಬೃಹಸ್ಪತಿ, ಶುಕ್ರಾಚಾರ್ಯ, ಪರಶುರಾಮರಿಂದ ಶಿಕ್ಷಣ ಪಡೆದು ಆಚಾರ್ಯರೆಂದೆನಿಸಿದ ಭೀಷ್ಮಾಚಾರ್ಯರು ಶರಮಂಚದಲ್ಲಿ ಮಲಗಿ ತನ್ನ ಕೊನೆಯ ಕ್ಷಣದಲ್ಲಿ ಜಗದನ್ಯಾಯಧೀಶನಾದ ಭಗವಂತನ ಮಹಿಮೆಯನ್ನು ಈ ಮಹಿಯ ನ್ಯಾಯಲಯದ ಮುಂದೆ ವಿಷ್ಣುಸಹಸ್ರನಾಮದ ಮುಖೇನ ಭಿತ್ತರಿಸಿದರು.
ರೋಗಾರ್ತೋ ಮುಚ್ಯತೇ ರೋಗಾದ್ಬದ್ಧೋ ಮುಚ್ಯೇತ ಬಂಧನಾತ್ | ಭಯಾನ್ಮುಚ್ಯೇತ ಭೀತಸ್ತು ಮುಚ್ಯೇತಾಪನ್ನ ಆಪದಃ||
ರೋಗ ಪೀಡಿತನು ರೋಗದಿಂದ ಮುಕ್ತನಾಗಿ ಆರೋಗ್ಯ ಪಡೆಯುತ್ತಾನೆ, ಸೆರೆಯಲ್ಲಿರುವವನು ಬಿಡುಗಡೆ ಪಡೆದಾನು. ಹೆದರಿಕೊಂಡವನು ಭಯದಿಂದ ಪಾರಾದನು, ತೊಂದರೆಗೊಳಗಾದವ ತೊಂದರೆಯಿಂದ ಪಾರಾದಾನು.
ಈ ಫಲಶುತ್ರಿ ವಿಷ್ಣು ಸಹಸ್ರನಾಮಕ್ಕೊಂದು ಸರ್ಟಿಫಿಕೇಟ್ ಇದ್ದ ಹಾಗೆ.
ಈ ಫಲವನ್ನು ಅನೇಕ ಭಗವತ್ಭಕ್ತರು ವಿಷ್ಣುಸಹಸ್ರನಾಮ ಪಠಣದಿಂದ ಪಡೆದುಕೊಂಡಿರುತ್ತಾರೆ. ರೋಗಪೀಡಿತರು ಅರೋಗ್ಯಪೂರ್ಣ ದೀರ್ಘಾಯುಷ್ಯ ಪಡೆದದ್ದಿದೆ,
ದುರ್ಗಾಣ್ಯತಿತರತ್ಯಾಶು ಪುರುಷಃ ಪುರುಷೋತ್ತಮಮ್ | ಸ್ತುವನ್ನಾಮಸಹಸ್ರೇಣ ನಿತ್ಯಂ ಭಕ್ತಿಸಮನ್ವಿತಃ ||
"ಸಾಧಕನಾದ ಜೀವಿ ಪುರುಷೋತ್ತಮನನ್ನು ಸ್ತುತಿಸುತ್ತಾ ಸಾವಿರ ಹೆಸರಿನಿಂದ , ಅನುದಿನ ಭಕ್ತಿಯಿಂದ ಕೂಡಿದವನಾಗಿ ಬಲು ಬೇಗನೆ ದುಗುಡವನ್ನು ದಾಟುತ್ತಾನೆ."
ಇದು ವಿಷ್ಣುಸಹ್ರಸನಾಮಕ್ಕಿರುವ ಮಹತ್ವ. ತ್ರೆತಾಯುಗ ದ್ವಾಪರಯುಗಳಲ್ಲಿ ಮಹರ್ಷಿಗಳು ಮುನಿಗಳು ಯಾಗಯಜ್ಞಾದಿ ಧಾರ್ಮಿಕ ಪ್ರಕ್ರಿಯಲ್ಲಿ ತೊಡಗಿದಾಗ ಪ್ರಪಂಚದಲ್ಲಿನ ಅಸುರ ಪ್ರವೃತ್ತಿಯ ರಾಕ್ಷಸರು ಒಟ್ಟಾಗಿ ವಿಕೃತ ಮನೋಭಾವದಿಂದ ಅದನ್ನ ಹಾಳುಮಾಡಿ ಮದಾಂದರಾಗಿ ಸಂತಸ ಪಡುತ್ತಿದ್ದರಂತೆ ಅಂತಹಃ ಸಮಯದಲ್ಲಿ ಮುನಿಗಡಣ ಭಕ್ತಿಯಿಂದ ಪುರುಷೋತ್ತಮನಾದ ಭಗವಂತನ ಮೊರೆಹೊಕ್ಕಾಗ ದೇವರ ದೇವನಾದ ಶ್ರೀಮನ್ನಾರಾಯಣ ಅಸುರರನ್ನ ಸಂಹರಿಸಿ ಅಸುರಾಂತಕನಾದ , ಇದು ಅಂದಿನಯುಗಗಳ ದೇವರ ಮಹಾತ್ಮೆ. ಈ ಕಾಲದಲ್ಲಿಯು ವಿಷ್ಣುಸಹಸ್ರನಾಮದ ಜಪಯಜ್ಞ ನಡೆಸುವಾಗ ಅಸುರ ಪ್ರವೃತ್ತಿಯ ಕೆಲವು ವಿಘ್ನಸಂತೋಷಿಗಳು ಪಾರಾಯಣ ಕೈಂಕರ್ಯದಲ್ಲಿ ತೊಡಗಿದವರ ಮೇಲೆ ಮಣ್ಣು ಕಸ ಎಸೆದು ಸಂಭ್ರಮಸಿದ (ವಿನಾಶ ಕಾಲೇ ವಿಪರೀತ ಬುದ್ದಿ) ಮತಾಂದನು ತನ್ನ ಪತನದ ಹಾದಿಗೆ ಸಿಲುಕಿದಾಗ ಇದೇ ವಿಷ್ಣುಸಹಸ್ರನಾಮದ ಜಪಯಜ್ಞ ಹಾಗೂ ಯಾಗಗಳಿಗೆ ಮೊರೆಹೊದದ್ದೆ ಈ ಸಹಸ್ರನಾಮಕ್ಕಿರುವ ಮಹತ್ವ.
"ರಥಾಂಗಪಾಣಿರಕ್ಷೋಭ್ಯಃ ಸರ್ವಪ್ರಹರಣಾಯುಧಃ "ರಥಾಂಗರು ಅಂದರೆ ಧರ್ಮಯುದ್ದಮಾಡುವವರು(ಪಾಂಡವರಿಗೆ ಸಂಭೋದಸಿ) ಆಣಿ - ಅಧಾರವಾಗಿ ನಿಲ್ಲುವ ಭಗವಂತ, ಅಕ್ಷೋಭ್ಯಃ - ಯಾರೂ ಮಣಿಸಲಾಗದ ಸರ್ವಸಮರ್ಥ ಭಗವಂತ, ಸರ್ವಪ್ರಹರಣಾಯುಧಃ (ಭಯಾನ್ಮುಚ್ಯೇತ ಭೀತಸ್ತು ಮುಚ್ಯೇತಾಪನ್ನ ಆಪದಃ)ದುಷ್ಟರ ದಮನಕ್ಕಾಗಿ ಎಲ್ಲಾ ಶಸ್ತ್ರಾಸ್ತ್ರಾಗಳನ್ನ ಆಯುಧವಾಗಿ ತೊಟ್ಟ ಭಗವಂತ. ಭಕ್ತವತ್ಸಲನಾದ ಭಗವಂತನ ಸಹಸ್ರನಾಮ ನಿತ್ಯ ಪಠಿಸಿದರೆ ನಮ್ಮ ಸಂಕಷ್ಟಗಳಿಗೆ ಸರ್ವಪ್ರಹರಣಾಯುಧನಾಗಿರುತ್ತಾನೆ ಎನ್ನುತ್ತ ಮಹಾವಿಷ್ಣು ಅನುಗ್ರಹ ಸರ್ವರಿಗಾಗಲಿ

0 Comments