ಮಧುಗಿರಿ: ತಾಲೂಕಿನ ಪುರವರ ಹೋಬಳಿಯ ಪುರವರ ಗ್ರಾಮದಲ್ಲಿ ಇಂದು ಶ್ರೀಶ್ರೀ ಜಪಾನಂದ ಸ್ವಾಮೀಜಿಗಳು ಆಟೋ ಚಾಲಕರು ಮತ್ತು ಮಾಲೀಕರಗಳಿಗೆ ಆಹಾರದ ಕಿಟ್ ಗಳನ್ನು ವಿತರಿಸಿದರು.
ನಮ್ಮ ವಾರ್ತಾ ಜಾಲ ಪತ್ರಿಕೆಯಲ್ಲಿ ವರದಿಯಾಗಿದ್ದು, ಪತ್ರಿಕೆಯಲ್ಲಿ ಪ್ರಕಟಗೊಂಡ ನಂತರ ಪಾವಗಡದ ರಾಮಕೃಷ್ಣ ಆಶ್ರಮದ ಶ್ರೀ ಶ್ರೀ ಜಪಾನಂದ ಸ್ವಾಮೀಜಿಯವರು ಪತ್ರಿಕೆಯ ಸುದ್ದಿಗೆ ಸ್ಪಂದಿಸಿದ್ದು, ಆಟೋಚಾಲಕರ ಕಷ್ಟದ ದಿನಗಳಲ್ಲಿ ಸಹಾಯ ಮಾಡಿರುವುದು ನಿಜಕ್ಕೂ ಶ್ಲಾಘನೀಯ.
ಆಟೋ ಚಾಲಕರು ತಮ್ಮ ಅಳಲನ್ನು ವಾರ್ತಾ ಜಾಲ ಪತ್ರಿಕೆಯ ಬಳಿ ಹೇಳಿಕೊಂಡಾಗ, ಪತ್ರಿಕೆಯು ವರದಿಯನ್ನು ಪ್ರಕಟಿಸಿತ್ತು. ತದನಂತರ ಆಟೋ ಚಾಲಕರು ಮತ್ತು ಮಾಲೀಕರು ಪಾವಗಡದ ರಾಮಕೃಷ್ಣ ಆಶ್ರಮದ ಶ್ರೀ ಶ್ರೀ ಜಪಾನಂದ ಸ್ವಾಮೀಜಿಯವರಿಗೆ ಆಟೋ ಚಾಲಕರು ಸವಿವರವಾಗಿ ತಮ್ಮ ಸಂಕಷ್ಟವನ್ನು ವಿವರಿಸಿದ್ದರು. ಇದನ್ನು ಮನಗಂಡ ಜಪಾನಂದ ಸ್ವಾಮೀಜಿಗಳು ಇಂದು ಪುರವರ ಗ್ರಾಮಕ್ಕೆ ಆಗಮಿಸಿ ಆಹಾರದ ಕಿಟ್ ಗಳನ್ನು ವಿತರಿಸಿದರು. ಹಾಗೂ ಶ್ರೀ ಜಪಾನಂದ ಸ್ವಾಮೀಜಿ ಮಾತನಾಡಿ ನಿಮಗೆ ಯಾವುದೇ ರೀತಿಯ ಸಹಕಾರ ಬೇಕಾದರೂ ನಮ್ಮೊಂದಿಗೆ ಹಂಚಿಕೊಳ್ಳಿ. ಶ್ರೀಮತಿ ಸುಧಾ ಮೂರ್ತಿ ಅವರ ಸಹಕಾರ ಸದಾಕಾಲ ನಿಮಗೆ ಇದ್ದೇ ಇರುತ್ತೆ ಎಂದು ಹಿತ ಆಶೀರ್ವಚನ ನೀಡಿ ಶುಭಹಾರೈಸಿದರು.
ಇದರಿಂದ ಆಟೋ ಚಾಲಕರು ಮತ್ತು ಮಾಲೀಕರು ಖುಷಿಯನ್ನು ವ್ಯಕ್ತಪಡಿಸಿದರು. ಕಾರಣ ಆಟೋ ಚಾಲಕರು ಮಾತನಾಡಿ ಇಲ್ಲಿವರೆಗೂ ಯಾವುದೇ ಜನಪ್ರತಿನಿಧಿಗಳು ನಮಗೆ ಸ್ಪಂದಿಸಿಲ್ಲ, ಇಂದು ಶ್ರೀ ಜಪಾನಂದ ಸ್ವಾಮೀಜಿ ನಮ್ಮ ಕಷ್ಟಕ್ಕೆ ಸ್ಪಂದಿಸಿರುವುದು ನಮಗೆ ನಿಜಕ್ಕೂ ಸಂತೋಷದ ವಿಷಯ. ಯಾವುದೇ ಸರಕಾರವಾಗಲಿ ನಮ್ಮ ನೋವಿಗೆ ಸ್ಪಂದಿಸಿರಲಿಲ್ಲ ಎಂದರು. ಈ ಸಮಯದಲ್ಲಿ ಪೊಲೀಸ್ ಉಪ ಅಧೀಕ್ಷಕರು ಕರ್ನಾಟಕ ಲೋಕಾಯುಕ್ತ ಎಂ ಆರ್ ಗೌತಮ್, ರಕ್ತದಾನಿ ಶಿಕ್ಷಕರ ಸ್ನೇಹಬಳಗದ ಅಧ್ಯಕ್ಷರಾದ ಶಶಿಕುಮಾರ್, (ಕೆಂಪೇಗೌಡ) ಕರ್ನಾಟಕ ಸಂಪಾದಕರ ಮತ್ತು ವರದಿಗಾರರ ಸಂಘದ ಅಧ್ಯಕ್ಷರಾದ ಕೃಷ್ಣೇಗೌಡ, ಕೊಡಿಗೇನಹಳ್ಳಿ ಪಿಎಸ್ಐ ಆದ ನಾಗರಾಜು, ಸಮಾಜಸೇವಕರಾದ ಯತೀಶ್, ರಾಮಕೃಷ್ಣಾಶ್ರಮದ ನಾಗರಾಜು, ಪುರವರ ಶಂಕರ್ ನಾಗ್ ಆಟೋ ಚಾಲಕರ ಸಂಘದ ಅಧ್ಯಕ್ಷರಾದ ಕಾಂತರಾಜು, ಸದಸ್ಯರುಗಳಾದ ನರಸಿಂಹಮೂರ್ತಿ ನಾರಾಯಣಸ್ವಾಮಿ ನೀರೇಶ ಬಾಬು, ಹರೀಶ್ ಸಂಜೀವಪ್ಪ, ಹನುಮಂತರಾಯಪ್ಪ, ಶಿವಣ್ಣ, ಶ್ರೀನಿವಾಸ್. ಮತ್ತಿತರರಿದ್ದರು.
ವರದಿ: ನಾಗೇಶ್ ಜೀವ ಮಧುಗಿರಿ
0 Comments