Ticker

6/recent/ticker-posts

Ad Code

Responsive Advertisement

ಕೋಚಿಮಲ್ ವತಿಯಿಂದ ಚಿಕ್ಕಬಳ್ಳಾಪುರ ಕೋಲಾರ ಜಿಲ್ಲೆಗಳಲ್ಲಿ ಉಚಿತ ಫುಡ್ ಕಿಟ್ ವಿತರಣೆ

ಜನಪ್ರಿಯ ಕೋಚ್ ಮುಲ್ ನಿರ್ದೇಶಕ ಮಂಜುನಾಥ ರೆಡ್ಡಿ ಬಾಗೇಪಲ್ಲಿ ಕೋಲಾರ ಚಿಕ್ಕಬಳ್ಳಾಪುರ ಹಾಲು ಸಹಕಾರಿ ಒಕ್ಕೂಟ.ನಿ ವತಿಯಿಂದ ತಾಲೂಕಿನ ಎಲ್ಲಾ ಹಾಲು ಉತ್ಪಾದಕರ ಸದಸ್ಯರಿಗೂ ಉಚಿತ ಕಿಟ್ ವಿತರಣೆ ಈ ದಿನ 31/08/2021 ರಂದು ಬೆಳಗ್ಗೆ 7ಗಂಟೆಗೆ ಚಾಕವೇಲು ಹಾಲು ಉತ್ಪಾದಕರ ಸಹಕಾರಿ ಸಂಘದಲ್ಲಿ ವಿತರಣೆ ಮಾಡಲಾಗಿದೆ.

 ರಾಜ್ಯಸರಕಾರಗಳಾಗಲಿ  ಕೇಂದ್ರ ಸರಕಾರಗಳಾಗಲಿ ಮಾಡದ ಮಹಾತ್ಕಾರ್ಯ ಗಳಾದ ಪುಡ್ ಕಿಟ್ ವಿತರಣೆ ಕಾರ್ಯಕ್ರಮವು ಕೋಚ್ ಮುಲ್ ವತಿಯಿಂದ ಅಂದರೆ ಕೋಲಾರ-ಚಿಕ್ಕಬಳ್ಳಾಪುರ ಹಾಲು ಸಹಕಾರಿ ಒಕ್ಕೂಟ(ರಿ )ಇವರು ಎಲ್ಲಾ ತಾಲೂಕಿನ ನಿರ್ದೇಶಕರ ಸಾಮಾನ್ಯಸಭೆಯಲ್ಲಿ ಚರ್ಚಿಸಿ ಕರೋನಾ ಕರೀ ನೆರಳಿಗೆ ತುತ್ತಾದವರ ರೈತರ ಕುಟುಂಬಗಳು ಮತ್ತು ರೈತರು ಯಾವ ರೀತಿ ಕಷ್ಟಪಡುತ್ತಿದ್ದಾರೆ ಮತ್ತು ಏನೇ ಬೆಳೆ ಬೆಳೆದರು ಸಾಲವು ತೀರಿಸಲಾಗದ ಪರಿಸ್ಥಿತಿಯಲ್ಲಿ ಜೀವನ ದೂಡುತ್ತಿದ್ದಾರೆ.

ಇವರ ಕಷ್ಟಗಳಿಗೆ ಯಾರು ಸಹಾಯ ಹಸ್ತ ನೀಡಿದವರಿಲ್ಲ ಆದರೆ ಇದೀಗ ಇವರ ಕಷ್ಟವನ್ನರೆತು ಇವರಿಗೆ ಸಹಾಯ ಹಸ್ತ ನೀಡಲು ಮುಂದಾದ ಕೋಚಿಮಲ್ ದಿನಾಂಕ:- 27/08/2021 ರಂದು ಕರುಣಾಮಯಿ, ಸ್ನೇಹಜೀವಿ, ಬಡವರ ಬಂಧು ರೈತರ ಬಗ್ಗೆ ಕಾಳಜಿ ವಹಿಸಿ ರೈತರಿಗೆ ಸಹಾಯ ಹಸ್ತ ನೀಡಲು ಮುಂದಾದ ನಿರ್ದೇಶಕರಾದ ಬಾಗೇಪಲ್ಲಿ ಮಂಜುನಾಥ್ ರವರು ಜನಪ್ರಿಯ ಶಾಸಕ ಸುಬ್ಬಾರೆಡ್ಡಿ ರವರು ರಾಜ್ಯದಲ್ಲೇ ಪ್ರಥಮ ಬಾರಿಗೆ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಾದ್ಯಂತ ಪಕ್ಷಾತೀತವಾಗಿ ಜಾತ್ಯಾತೀತವಾಗಿ ಬಡವ ಬಲ್ಲಿದ ಎನ್ನದೆ ಪುಡ್ ಕಿಟ್ ವಿತರಣೆ ಮಾಡಿದ ಜನಾನುರಾಗಿ ಶಾಸಕರ ಅಮೃತ ಹಸ್ತದಿಂದ ಪುಟ್ಟಪರ್ತಿಯಲ್ಲಿ ವಿತರಣೆಗೆ ಚಾಲನೆ ನೀಡಿದರು ಸುಮಾರು ಬಾಗೇಪಲ್ಲಿ ವ್ಯಾಪ್ತಿಯಲ್ಲಿ 105 ಸಂಘಗಳು ಬರುತ್ತವೆ ಅದರಲ್ಲಿನ ಸದಸ್ಯರು 3700 ಒಟ್ಟು ಸದಸ್ಯರಿಗೆ ಸುಮಾರು 550 ರೂಗಳ ಬೆಳೆಯುಳ್ಳ ಪ್ರಾಮಾಣಿಕ ಪಾರದರ್ಶಕ ವಾಗಿ ಉತ್ತಮ ಗುಣಮಟ್ಟವುಳ್ಳ 1.1.5kg ಅಡುಗೆ ಎಣ್ಣೆ.2. ಸಕ್ಕರೆ 2 ಕೆಜಿ 3.1.5 ಕೆಜಿ ಭಾಗ್ಯಲಕ್ಷ್ಮಿ ಗೋಧಿ ಹಿಟ್ಟು 4.0.5 ಕೆಜಿ ಮೈದಾ ಹಿಟ್ಟು 5.1ಕೆಜಿ ಶಿವಲಿಂಗ ತೊಗರಿಬೇಳೆ 6.1 ಕೆಜಿ ರವೆ 7. ಕಾರದಪುಡಿ 8. ಹರಶಿನ ಪುಡಿ 9. ಶಾವಿಗೆ 10. ಸಾಸುವೆ11. ಜೀರಿಗೆಯ ಪಾಕೆಟ್ ಗಳುಳ್ಳ ಪುಡ್ ಕಿಟ್ ವಿತರಿಸಲಾಗಿದೆ. ಒಳ್ಳೆಯ ಜನಪ್ರತಿನಿದಿಗಳು ಮುಖಂಡರು ಗಳಿದ್ದರೆ ಈ ರೀತಿಯಾಗಿ ಸಹಾಯ ಹಸ್ತ ನೀಡುತ್ತಾರೆ.

ಚಾಕವೇಲು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರು ಶೇಖರ್ ರೆಡ್ಡಿ ಮತ್ತು ಮಾಜಿ ಅಧ್ಯಕ್ಷರಾದ ಕೆ.ಪಿ. ಶಂಕರ್ ರೆಡ್ಡಿ ಫುಡ್ ಕಿಟ್ ವಿತರಣೆ ಮಾಡುತ್ತಿರುವುದು.
ಸಂಘದ ಕಾರ್ಯದರ್ಶಿಗಳಾದ ಶಿವರೆಡ್ಡಿ ಮತ್ತು ಅಧ್ಯಕ್ಷರಾದ ಶೇಖರ್ ರೆಡ್ಡಿ ಸದಸ್ಯರ ಜೊತೆ ಚಿತ್ರದಲ್ಲಿ ಕಾಣಬಹುದು

ಸುಮಾರು ಸದಸ್ಯರು ಮಂಜುನಾಥ ರೆಡ್ಡಿ ರವರಿಗೆ ನಮ್ಮ ಪತ್ರಿಕೆಯ ಮುಖಾಂತರ ಶುಭಾಶಯಗಳು ತಿಳಿಸಿದ್ದಾರೆ. ಇದಕ್ಕೆ ಪಂಡ್ ಎಲ್ಲಿಂದ ಬರುತ್ತದೆ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ನಿರ್ದೇಶಕರು ನಾವು ಕೊಡುತ್ತಿರುವುದು ರೈತರ ಹಣ ರೈತರಿಂದ ದುಡಿದು ಬಂದಿರುವ ಲಾಭಾಂಶದಲ್ಲಿ ಇಂತಹ ಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿ ಕೊಂಡಿರುತ್ತೇವೆ ಇದು ನಮ್ಮ ಕರ್ತವ್ಯ ನಮ್ಮ ಸೇವೆಯೇ ಹೊರತು ಬೇರೆ ಖಾಸಗಿ ಕಂಪನಿಗಳ ತರ ಬಂದಿರುವ ಲಾಭಾಂಶವು ಜೋಬಿಗೆ ಇಳಿಸಲಾಗುವುದುಲ್ಲ ಆದ್ದರಿಂದ ಕೋ ಆಪರೇಷನ್ ಆರ್ಗನೈಜೆಶನ್ ಗಳಿಗೆ ಅಂದರೆ ಪಿಎಲ್ ಡಿ ಬ್ಯಾಂಕ್ ಅಥವಾ ಡಿಸಿಸಿ ಬ್ಯಾಂಕ್ ಮತ್ತು ವಿವಿಧ ಸಹಕಾರಿ ಸಂಘಗಳಿಗೆ ಸಹಕಾರಿ ಸಂಸ್ಥೆಗಳಿಗೆ ಜನಸಾಮಾನ್ಯರು ಬೆಳಸಿ ಒತ್ತು ಕೊಡಬೇಕೆಂದು ಕರೆ ನೀಡಿರುತ್ತಾರೆ. 





ರೈತರ ಪ್ರವಾಸದ ಬಗ್ಗೆ ಸವಿವರವಾಗಿ ಹೇಳಿರುತ್ತಾರೆ. ಮತ್ತು 1987 ರಲ್ಲಿ ಬೆಂಗಳೂರು ಒಕ್ಕೂಟದಿಂದ ಬೇರ್ಪಟ್ಟು ಕೋಲಾರ ಒಕ್ಕೂಟವಾಯಿತು ಆಗ ನಮಗೇನು ಇರಲಿಲ್ಲ ಆದರೆ ಈವತ್ತು ಇಷ್ಟೊಂದು ಮುಂದುವರೆದಿದ್ದೇವೆ ಅದೇ ರೀತಿ ಈಗ ನಮಗೆ ಕೋಲಾರದಿಂದ ಬೇರ್ಪಟ್ಟು ಚಿಕ್ಕಬಳ್ಳಾಪುರಕ್ಕೆ ಒಂದು ಒಕ್ಕೂಟವನ್ನು ಮಾಡಬೇಕೆಂದು ಮುಖ್ಯಮಂತ್ರಿಗಳ ಸಭೆಯಲ್ಲಿ ಕೋರಿದಾಗ ಮುಖ್ಯಮಂತ್ರಿಗಳು ಮತ್ತು ಉಸ್ತುವಾರಿ ಸಚಿವರಾದ ಸುಧಾಕರ್ ಅವರು ಮತ್ತು ಸಹಕಾರಿ ಸಚಿವರಾದ ಸೋಮಶೇಖರ್ ರವರು ಮತ್ತು ನಮ್ಮ ಕೆಎಂಎಫ್ ಅಧ್ಯಕ್ಷರಾದ ಬಾಲಚಂದ್ರ ಜಾರಕಿಹೊಳಿ ಅವರು ಸಭೆಯಲ್ಲಿ ಒಕ್ಕೂಟದ ಬಗ್ಗೆ ಸಹಕಾರ ನೀಡಿ ಅಸ್ತು ಎಂದಿದ್ದಾರೆ ಇದಕ್ಕೆ ನಾನು ಅವರಿಗೆ ವಂದನೆಗಳು ಮತ್ತು ಚಿರಋಣಿಯಾಗಿರಬೇಕು ಮತ್ತು ಅವರಿಗೆ ನಮ್ಮ ಎರಡು ಜಿಲ್ಲೆಯ ನಿರ್ದೇಶಕರಿಗೆ ಮತ್ತು ಹಾಲು ಉತ್ಪಾದಕರ ರೈತರಾದ ಸದಸ್ಯರುಗಳಿಗೆ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳನ್ನು ನಿಮ್ಮ ಪತ್ರಿಕೆಯವರ ಮುಖಾಂತರ ಕೋರುತ್ತೇನೆ ಎಂದು ಪತ್ರಿಕಾ ಹೇಳಿಕೆ ನೀಡಿರುತ್ತಾರೆ.

Post a Comment

0 Comments

Ad Code

Responsive Advertisement