Ticker

6/recent/ticker-posts

Ad Code

Responsive Advertisement

ರೋಟರಿ ಕೊಡುಗೆಯ ರಕ್ತ ಸಂಗ್ರಹಣೆ ವಾಹನಕ್ಕೆ ರಾಜ್ಯಪಾಲರ ಹಸಿರು ನಿಶಾನೆ

ಬೆಂಗಳೂರು ಆಗಸ್ಟ್ 7 (ಕರ್ನಾಟಕ ವಾರ್ತೆ): ಬೆಂಗಳೂರು ದಕ್ಷಿಣ ರೋಟರಿ ಕ್ಲಬ್ ಅವರು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ರಾಜ್ಯ ಶಾಖೆಗೆ ಕೊಡುಗೆಯಾಗಿ ನೀಡಿದ ರಕ್ತ ಸಂಗ್ರಹಣೆ ಮತ್ತು ವಿತರಣಾ ವಾಹನಕ್ಕೆ ಘನತೆವೆತ್ತ ರಾಜ್ಯಪಾಲರು ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ರಾಜ್ಯ ಶಾಖೆಯ ಅಧ್ಯಕ್ಷರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಶನಿವಾರ ರಾಜಭವನದ ಆವರಣದಲ್ಲಿ ಚಾಲನೆ ನೀಡಿದರು.

ಬೆಂಗಳೂರು ದಕ್ಷಿಣ ರೋಟರಿ ಕ್ಲಬ್ ಅವರು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ರಾಜ್ಯ ಶಾಖೆಗೆ  ರೂ.46 ಲಕ್ಷ ಮೊತ್ತದ ಸುಸಜ್ಜಿತವಾದ ರಕ್ತ ಸಂಗ್ರಹಣೆ ಮತ್ತು ಪೂರೈಕೆ ಮಾಡುವ ಬಸ್ ಕೊಡುಗೆಯಾಗಿ ನೀಡಿದ್ದಾರೆ. ಈ ವಾಹನವು ಜಿಲ್ಲೆಯಾದ್ಯಂತ ಸಂಚರಿಸಿ ದಾನಿಗಳಿಂದ ರಕ್ತ ಸಂಗ್ರಹಿಸಿ, ಬೇಡಿಕೆ ಇರುವ ಕಡೆ ರಕ್ತ ಪೂರೈಸುವ ಮೂಲಕ ರಕ್ತದ ಕೊರತೆ ನೀಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿದೆ.

ಕಾರ್ಯಕ್ರಮದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ರಾಜ್ಯ ಶಾಖೆಯ ಸಭಾಪತಿ ಎಸ್ ನಾಗಣ್ಣ, ಉಪಸಭಾಪತಿ ಡಾ.ವಿ ಎಲ್ ಎಸ್ ಕುಮಾರ್, ಖಜಾಂಚಿ ಆನಂದ್ ಎಸ್ ಜಿಗಜಿನ್ನಿ, ಪ್ರಧಾನ ಕಾರ್ಯದರ್ಶಿ ಎಚ್ ಎಸ್ ಬಾಲಸುಬ್ರಮಣ್ಯ, ರೋಟರಿ ಸಂಸ್ಥೆಯ ಫಜಲ್ ಮೊಹಮ್ಮದ್, ನಾಗೇಂದ್ರ ಪ್ರಸಾದ್ ವಿ ಎಸ್, ಶ್ರೀಧರ್ ಬಿ ಆರ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Post a Comment

0 Comments

Ad Code

Responsive Advertisement