ಬಳ್ಳಾರಿ,ಆ.26: ಕರ್ನಾಟಕ ಆಡಳಿತ ಸುಧಾರಣಾ ಆಯೋಗ-2ರ ಅಧ್ಯಕ್ಷರಾದ ಕರ್ನಾಟಕ ಸರಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಮತ್ತು ಸದಸ್ಯರಾದ ನಿವೃತ್ತ ಐಎಎಸ್ ಅಧಿಕಾರಿ ಪ್ರಸನ್ನಕುಮಾರ್ ಅವರು ಬಳ್ಳಾರಿ ಮಹಾನಗರ ಪಾಲಿಕೆಗೆ ಗುರುವಾರ ಭೇಟಿ ನೀಡಿ ಆಡಳಿತದ ಸುಧಾರಣೆಗೆ ಸಂಬAಧಿಸಿದAತೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿ0ದ ಅಭಿಪ್ರಾಯಗಳನ್ನು ಆಲಿಸಿದರು.
ನಗರ ಸ್ಥಳೀಯ ಸಂಸ್ಥೆಗಳಲ್ಲಿ ಈಗಿರುವ ನಿಯಮಗಳನ್ನು ಮತ್ತಷ್ಟು ಸರಳೀಕರಣಗೊಳಿಸಿ ಜನರಿಗೆ ಪರಿಣಾಮಕಾರಿ ಸೇವೆ ಒದಗಿಸುವ ನಿಟ್ಟಿನಲ್ಲಿ ಆಡಳಿತದ ಸುಧಾರಣಾ ಸಲಹೆಗಳನ್ನು ನೀಡುವಂತೆ ಅವರು ಕೋರಿಕೊಂಡರು.
ಬಳ್ಳಾರಿ ಮಹಾನಗರ ಪಾಲಿಕೆ ಆಯುಕ್ತರಾದ ಪ್ರೀತಿ ಗೆಹ್ಲೋಟ್ ಅವರು ಮಹಾನಗರ ಪಾಲಿಕೆಯ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಮೇಲೆ ನಿಯಂತ್ರಣ ಅಗತ್ಯವಿದೆ. ಸಿ ಮತ್ತು ಡಿ ಗ್ರೂಪ್ ಗಳ ಸಿಬ್ಬಂದಿ ಮೇಲೆ ನಿಯಂತ್ರಣ ಅಧಿಕಾರ ನೀಡುವಂತೆ ಅವರು ಕೇಳಿಕೊಂಡರು.
ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅತಿಕ್ರಮಣ ಮತ್ತು ಸಿವಿಲ್ ಕೆಲಸ ಕಾರ್ಯಗಳು ನಡೆಯುವ ಸಂದರ್ಭದಲ್ಲಿ ಪೊಲೀಸರ ಅಗತ್ಯವಿದೆ. ಪೊಲೀಸ್ ವಿಂಗ್ ವ್ಯವಸ್ಥೆ ಮಾಡಿದಲ್ಲಿ ಅನುಕೂಲವಾಗಲಿದೆ ಎಂದರು.
ಆಯೋಗ-2ರ ಅಧ್ಯಕ್ಷರಾದ ಟಿ.ಎಂ.ವಿಜಯಭಾಸ್ಕರ್ ಅವರು ಬೆಂಗಳೂರು ಬೃಹತ್ ಮಹಾನಗರ ಪಾಲಿಕೆಯಲ್ಲಿ ಪೊಲೀಸ್ ವಿಂಗ್‌ನಲ್ಲಿ ಮಾಜಿ ಸೈನಿಕರನ್ನು ಬಳಸಿಕೊಂಡAತೆ ಇಲ್ಲಿಯೂ ಪೊಲೀಸ್ ವಿಂಗ್ ಮಾಡಿಕೊಳ್ಳಿ ಎಂದು ಅವರು ಸಲಹೆ ನೀಡಿದರು.
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಿಧಿಸಲಾಗುತ್ತಿರುವ ದಂಡಗಳನ್ನು ಪರಿಷ್ಕರಿಸಿ ಹೊಸದಾಗಿ ತಮಗೆ ಸಲ್ಲಿಸಲಾಗಿರುವ ದಂಡಗಳನ್ನು ವಿಧಿಸುವ ನಿಟ್ಟಿನಲ್ಲಿ ನಿಯಮಾವಳಿಗಳನ್ನು ರೂಪಿಸಬೇಕು ಎಂದು ಅವರು ಪಾಲಿಕೆ ಆಯುಕ್ತೆ ಪ್ರೀತಿ ಗೆಹ್ಲೋಟ್ ಅವರು ಕೋರಿಕೊಂಡರು.
ಅಕ್ರಮ ಖಾತಾ ವರ್ಗಾವಣೆ ಅಧಿಕಾರ ಡಿಸಿ ಅವರ ಬದಲಿಗೆ ಪಾಲಿಕೆ ಆಯುಕ್ತರಿಗೆ ನೀಡಿದಲ್ಲಿ ಅನುಕೂಲವಾಗಲಿದೆ. ಅತಿ ಹೆಚ್ಚು ಸಮಸ್ಯೆ ಉಂಟಾಗಿರುವ ಅರ್ಜಿ ನಮೂನೆ-2ಗಳನ್ನು ಸರಳೀಕರಣಗೊಳಿಸಬೇಕು ಮತ್ತ ಉದ್ದಿಮೆ ಪರವಾನಿಗೆ ನಿಯಮಾವಳಿಗಳನ್ನು ಸರಳೀಕರಣಗೊಳಿಸಬೇಕು ಎಂದು ಅವರು ಕೋರಿಕೊಂಡರು.
*ಮೊಬೈಲ್ ಟಾವರ್‌ಗಳಿಗೆ ಸ್ಪಷ್ಟ ನಿಯಮ ರೂಪಿಸಿ: ಗ್ರಾಮೀಣ ಪ್ರದೇಶದಲ್ಲಿ ಮೊಬೈಲ್ ಟಾವರ್‌ಗಳು ಅಳವಡಿಸುವುದಕ್ಕೆ ಸ್ಪಷ್ಟ ನಿಯಮವಾಳಿಗಳಿದ್ದು, ಅದೇ ರೀತಿ ನಗರ ಪ್ರದೇಶಗಳಲ್ಲಿಯೂ ಮೊಬೈಲ್ ಟಾವರ್‌ಗಳನ್ನು ಅಳವಡಿಸುವ ನಿಟ್ಟಿನಲ್ಲಿ ಸಮಗ್ರ ನಿಯಮವಾಳಿಗಳನ್ನು ರೂಪಿಸಬೇಕು ಎಂದು ಪಾಲಿಕೆ ಆಯುಕ್ತೇ ಪ್ರೀತಿ ಅವರು ಕೋರಿಕೊಂಡರು.
ಬಳ್ಳಾರಿ ನಗರದಲ್ಲಿ ಸದ್ಯ 75 ಮೊಬೈಲ್ ಟಾವರ್ ಗಳು ಅಳವಡಿಸಲಾಗಿದ್ದು,ನಿಯಮಾವಳಿಗಳು ಇಲ್ಲದೇ ಇರುವುದರಿಂದ ಅವುಗಳಿಗೆ ತೆರಿಗೆ ವಿಧಿಸಲಾಗುತ್ತಿಲ್ಲ ಎಂಬ ಅಸಹಾಯಕತೆಯನ್ನು ಅವರು ವ್ಯಕ್ತಪಡಿಸಿದರು.
ಬಳ್ಳಾರಿ ನಗರದ ಅಭಿವೃದ್ಧಿಗೆ ಸಲಹೆ-ಸೂಚನೆಗಳನ್ನು ರೂಪಿಸುವ ನಿಟ್ಟಿನಲ್ಲಿ ಅನುಭವಿಗಳ ವಿಂಗ್(ಎಕ್ಸ್ಪರ್ಟ್ ವಿಂಗ್) ಸೃಷ್ಟಿಸಬೇಕು ಎಂದರು.
ನಗರ ಸ್ಥಳೀಯ ಸಂಸ್ಥೆಗಳ ಸಿಬ್ಬಂದಿಗಳನ್ನು ಸರಕಾರಿ ಸಿಬ್ಬಂದಿ ಅಂತ ಪರಿಗಣಿಸಿ ಆದೇಶ ಹೊರಡಿಸಬೇಕು ಎಂದು ಕೆಲ ಅಧಿಕಾರಿಗಳು ಇದೇ ಸಂದರ್ಭದಲ್ಲಿ ಕೋರಿಕೊಂಡರು.
ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬೀದಿದೀಪಗಳು,ಕುಡಿಯುವ ನೀರು ಸರಬರಾಜು,ಕುಡಿಯುವ ನೀರುಗಳಿಗೆ 768 ಆರ್‌ಆರ್ ನಂಬರ್‌ಗಳಿದ್ದು,ಎಲ್ಲವೂಗಳಿಗೆ ಕಡ್ಡಾಯವಾಗಿ ಮೀಟರ್ ಅಳವಡಿಸಬೇಕು ಎಂದು ಅವರು ಆಯೋಗದ ಅಧ್ಯಕ್ಷ ಟಿ.ಎಂ.ವಿಜಯಭಾಸ್ಕರ್ ಅವರು ಹೇಳಿದರು.
ಆಡಳಿತದ ಸುಧಾರಣೆಗೆ ಸಂಬAಧಿಸಿದAತೆ ವಿವಿಧ ವಿಷಯಗಳ ಕುರಿತು ಚರ್ಚಿಸಲಾಯಿತು.

0 Comments