ಶಿವಾಜಿನಗರದಲ್ಲಿನ ಮಾಜಿ ಸಚಿವ ರೋಷನ್ ಬೇಗ್ ಮನೆ ಸೇರಿ 6 ಕಡೆಗಳಲ್ಲಿ ಬೆಳಿಗ್ಗೆಯಿಂದಲೇ ಇ.ಡಿ. ಅಧಿಕಾರಿಗಳು ಶೋಧ ಆರಂಭಿಸಿದ್ದಾರೆ. ಸಿಆರ್‌ಪಿಎಫ್ ಪೊಲೀಸರ ಭದ್ರತೆ ಪಡೆದು ದಾಳಿ ನಡೆಸಲಾಗಿದೆ.
ಐ ಮಾನಿಟರಿ ಅಡ್ವೈಸರಿ (ಐಎಂಎ) ಹಗರಣದಲ್ಲಿ ರೋಷನ್ ಬೇಗ್ ಆಸ್ತಿ ಜಪ್ತಿ ಮಾಡುವಂತೆ ರಾಜ್ಯ ಸರ್ಕಾರದ ಸಕ್ಷಮ ಪ್ರಾಧಿಕಾರಕ್ಕೆ ಹೈಕೋರ್ಟ್ ಆದೇಶ ನೀಡಿತ್ತು. ಅದನ್ನು ಆಧರಿಸಿ ಆಸ್ತಿ ಮುಟ್ಟುಗೋಲಿಗೆ ಸರ್ಕಾರ ಕೂಡ ಆದೇಶಹೊರಡಿಸಿತ್ತು. ಇದೆಲ್ಲದರ ನಡುವೆ ಅಕ್ರಮ ವಿದೇಶಿ ವ್ಯವಹಾರ ಕಂಡು ಬಂದಿರುವುದರಿಂದ ಇ.ಡಿ ಅಧಿಕಾರಿಗಳು ದಾಳಿ
ನಡೆಸಿದ್ದಾರೆ ಎಂದು ಹೇಳಲಾಗಿದೆ.

0 Comments