Ticker

6/recent/ticker-posts

Ad Code

Responsive Advertisement

ವೇಶ್ಯಾವಾಟಿಕೆ ನಡೆಸುತ್ತಿದ್ದ ಆಸಾಮಿ ಗೂಂಡ ಕಾಯಿದೆ ಅಡಿ ಬಂಧನ.

ಬೆಂಗಳೂರು ನಗರ ಸಿಸಿಬಿ ವಿಶೇಷ ಮಹಿಳಾ ಸಂರಕ್ಷಣಾ ದಳದ ಅಧಿಕಾರಿಗಳು ನಗರದಲ್ಲಿ ಹೊರ ರಾಜ್ಯದ ಮಹಿಳೆಯರನ್ನು ಮಾನವ ಕಳ್ಳಸಾಗಾಟದ ಮೂಲಕ ಕರೆತಂದು ಅಕ್ರಮವಾಗಿ ವಿವಿಧ ಸ್ಥಳಗಳಲ್ಲಿ ವೇಶ್ಯಾವಾಟಿಕೆಗೆ ದೂಡುತ್ತಿದ್ದ ಆಸಾಮಿಯಾದ 

ನವೀನ್ ಎಂ ಎನ್ @ ಶರತ್ ಬಿನ್ (ಲೇಟ್) ನಾಗರಾಜ 28 ವರ್ಷ, ಬಂಧಿತ ವ್ಯಕ್ತಿ



ಈತನು ಮೂಲತಃ ಮಂಡ್ಯ ಜಿಲ್ಲೆಯವನಾಗಿದ್ದು, ನಗರದಲ್ಲಿ  ನೆಲೆಸಿ, ತನ್ನ ಸಹಚರರುಗಳ ಮುಖಾಂತರ ಹೊರ ರಾಜ್ಯದ ಯುವತಿಯರನ್ನು ಕರೆತಂದು ಹೋಟೆಲ್ / ಲಾಡ್ಜ್ ಗಳಲ್ಲಿಟ್ಟು, ಗಿರಾಕಿಗಳನ್ನು ಸಂಪರ್ಕಿಸಿ, ವೇಶ್ಯಾವಾಟಿಕೆ ನಡೆಸುತ್ತಿದ್ದನು. ಈತನನ್ನು ಈ ಹಿಂದೆ ಸಿಸಿಬಿ ಪೊಲೀಸರು ಜಯನಗರ, ಜೆ ಪಿ ನಗರ, ಕೆ ಎಸ್ ಲೇಔಟ್ ಮತ್ತು ಬಾಣಸವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ  ವೇಶ್ಯಾವಾಟಿಕೆ ದಂಧೆಯ ಕೇಸಿನಲ್ಲಿ ದಸ್ತಗಿರಿ ಮಾಡಿದ್ದರು. 

ಈತನು ಪದೇ ಪದೇ ಇದೇ ದಂಧೆಯನ್ನು ಮುಂದುವರಿಸಿದ್ದರಿAದ, ಈತನನ್ನು ಗೂಂಡಾ ಕಾಯಿದೆ ಅಡಿಯಲ್ಲಿ ಬಂಧನದಲ್ಲಿಡಲು ಸಿಸಿಬಿ ಅಧಿಕಾರಿಗಳು ವರದಿ ಸಲ್ಲಿಸಿದ್ದರು, ಸಿಸಿಬಿ ಅಧಿಕಾರಿಗಳ ವರದಿಯನ್ನು ಡಿಸಿಪಿ ಅಪರಾಧ ಶ್ರೀ ಕೆ ಪಿ ರವಿಕುಮಾರ್  ಹಾಗೂ ಜಂಟಿ ಪೊಲೀಸ್ ಆಯುಕ್ತರು, (ಅಪರಾಧ) ಶ್ರೀ ಸಂದೀಪ್ ಪಾಟೀಲ್ ರವರು ಈತನ ಬಂಧನಕ್ಕೆ ಶಿಫಾರಸ್ಸು ಮಾಡಿದ್ದರು. ಅದರಂತೆ, ದಿನಾಂಕ 07.08.2021 ರಂದು ಪೊಲೀಸ್ ಆಯುಕ್ತರು, ಬಂಧನ ಆದೇಶ ಹೊರಡಿಸಿದ್ದರು. ಈ ಬಂಧನ ಆದೇಶವನ್ನು ಸಿಸಿಬಿ ಅಧಿಕಾರಿಗಳು ಜಾರಿಗೊಳಿಸಿರುತ್ತಾರೆ. 


Post a Comment

0 Comments

Ad Code

Responsive Advertisement