Ticker

6/recent/ticker-posts

Ad Code

Responsive Advertisement

ಕೇಂದ್ರ ಸಚಿವ ನಾರಾಯಣಸ್ವಾಮಿ ಅವರಿಂದ ಎನ್‍ಜಿಒಗಳ ಕಾರ್ಯವೈಖರಿ ಪರಿಶೀಲನೆ

ಬೆಂಗಳೂರು: ಕೇಂದ್ರ ಸಮಾಜ ಕಲ್ಯಾಣ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವರಾದ ಶ್ರೀ ಎ. ನಾರಾಯಣಸ್ವಾಮಿ ಅವರು ಇಂದು ಕೆಲವು ಸರ್ಕಾರೇತರ ಸೇವಾ ಸಂಸ್ಥೆಗಳಿಗೆ (ಎನ್‍ಜಿಒ) ದಿಢೀರ್ ಆಗಿ ಭೇಟಿ ನೀಡಿ ಅವುಗಳ ಕಾರ್ಯವೈಖರಿ ಕುರಿತಂತೆ ಮಾಹಿತಿ ಪಡೆದುಕೊಂಡರು. ಸರಕಾರಗಳಿಂದ ಸಿಗುವ ಅನುದಾನದ ಬಳಕೆ- ಅನುದಾನ ಸಕಾಲದಲ್ಲಿ ಬಿಡುಗಡೆ ಆಗುತ್ತಿದೆಯೇ ಎಂಬ ವಿಚಾರವಾಗಿ ಪ್ರಶ್ನೆಗಳನ್ನು ಕೇಳಿದ ಅವರು, ಸಮರ್ಪಕ ಮಾಹಿತಿ ಪಡೆದುಕೊಂಡರು.



ನಗರದ ವಿವಿಧೆಡೆ ಸರ್ಕಾರೇತರ ಸಂಸ್ಥೆಗಳಿಗೆ ಮತ್ತು ಜಾಲಹಳ್ಳಿಯಲ್ಲಿ ಅಂಗವಿಕಲರಿಗೆ ನೆರವಾಗುವ ತ್ರಿಚಕ್ರವಾಹನ ತಯಾರಿಕಾ ಘಟಕ ಮತ್ತು ಕೃತಕ ಅಂಗಾಂಗ ಉತ್ಪಾದನಾ ಘಟಕಕ್ಕೆ ಪೂರ್ವನಿಗದಿಯಂತೆ ಭೇಟಿ ನೀಡಿ ಅವುಗಳ ಕಾರ್ಯವೈಖರಿಯನ್ನೂ ಪರಿಶೀಲಿಸಿದರು. 


Post a Comment

0 Comments

Ad Code

Responsive Advertisement