Ticker

6/recent/ticker-posts

Ad Code

Responsive Advertisement

ಮಧುಗಿರಿ - ಕ್ಷೇತ್ರದಲ್ಲಿ ಅಂತರ್ಜಲ ವೃದ್ದಿಗೆ ಹೆಚ್ಚು ಚೆಕ್‍ಡ್ಯಾಂ: ಶಾಸಕ ಎಂ.ವಿ.ವೀರಭದ್ರಯ್ಯ

ಮಧುಗಿರಿ - ಕ್ಷೇತ್ರದಲ್ಲಿ ಅಂತರ್ಜಲ ವೃದ್ದಿಗೆ ಹೆಚ್ಚು ಚೆಕ್‍ಡ್ಯಾಂ ಗಳನ್ನು ನಿರ್ಮಿಸಲಾಗುತ್ತಿದೆ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು.


ತಾಲೂಕಿನ ಪೂಜಾರಹಳ್ಳಿ ಗ್ರಾಮದ ಬಳಿ ಸುವರ್ಣಮುಖಿ ನದಿಯ ಹಳ್ಳಗಳಿಗೆ ಒಟ್ಟು 2 ಕೋಟಿ 90 ಲಕ್ಷ ರೂಗಳ ಚೆಕ್ ಡ್ಯಾಂ ಕಾಮಗಾರಿಗಳಿಗೆ ಭೂಮಿ ಪೂಜೆ ನೇರವೇರಿಸಿ ಮಾತನಾಡಿದ ಅವರು, ಆಪನಹಳ್ಳಿ ಬಳಿಯಲ್ಲಿ ಚೆಕ್ ಡ್ಯಾಂ ನಿರ್ಮಾಣದಿಂದ ಅಂತರ್ಜಲ ವೃದ್ದಿಯಾಗಿ ಕೊಳವೆ ಬಾವಿಗಳಲ್ಲಿ ನೀರು ಸಮೃದ್ದಿಯಾಗಿ ದೊರೆಯುತ್ತಿದೆ. ಇವು ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮಂಜೂರಾಗಿರುವ ಕಾಮಗಾರಿಗಳಾಗಿದ್ದು, ಮುಂದಿನ ದಿನಗಳಲ್ಲಿ ಪರ್ತಿಹಳ್ಳಿ ಬಳಿ 1 ಕೋಟಿ ರೂ ವೆಚ್ಚದ ಹಾಗೂ ತೆರೆಯೂರು ಬಳಿ 2 ಕೋಟಿ ರೂ ವೆಚ್ಚದ ಚೆಕ್ ಡ್ಯಾಂ ಗಳು ನಿರ್ಮಾಣ ವಾಗಲಿದೆ ಎಂದ ಅವರು ಇದಕ್ಕೆ ಉಸ್ತುವಾರಿ ಸಚಿವರಾಗಿದ್ದ ಜೆ.ಸಿ.ಮಾಧುಸ್ವಾಮಿರವರ ಸಹಕಾರ ಕೂಡ ಇತ್ತು ಎಂದರು.

ಸಣ್ಣ ನೀರಾವರಿ ಇಲಾಖೆ ಎಇಇ ರಂಗನಾಥ್, ಎಇಇ ಮಂಜು ಕಿರಣ್ ಯಾದವ್, ಪಿಡಿಒ ಅಲ್ಮಾಸ್, ಗುತ್ತಿಗೆದಾರ ರಾಮಚಂದ್ರರೆಡ್ಡಿ, ಎಪಿಎಂಸಿ ನಿರ್ದೇಶಕರಾದ ಕುಮಾರ್, ಬಸವರಾಜು, ಮುಖಂಡರಾದ ಸಿಡದರಗಲ್ಲು ಶ್ರೀನಿವಾಸ್, ರಂಗನಾಥ, ವಿಶ್ವನಾಥ್, ದಿವಾಕರ ರೆಡ್ಡಿ, ಬೋರ್‍ವೆಲ್ ಕುಮಾರ್ ಹಾಗೂ ಮುಂತಾದವರು ಇದ್ದರು.

ADVT. :



Post a Comment

0 Comments

Ad Code

Responsive Advertisement