Ticker

6/recent/ticker-posts

Ad Code

Responsive Advertisement

ಪ್ರಾಚೀನ ಕವಿಗಳ ಮತ್ತು ವಚನಕಾರರ ಭಾವಚಿತ್ರಗಳ ಅನಾವರಣ

ಕನ್ನಡ ಸಾಹಿತ್ಯ ಪರಿಷತ್ತು ಇಂದು (03-08-2021) ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ “ಪ್ರಾಚೀನ ಕವಿಗಳ ಮತ್ತು ವಚನಕಾರರ ಭಾವಚಿತ್ರಗಳ ಅನಾವರಣ” ಸಮಾರಂಭವನ್ನು ಆಯೋಜಿಸಿತ್ತು. ಹಿರಿಯ ಲೇಖಕಿ ಹಾಗೂ ಮಾಜಿ ಸಚಿವರಾದ ಶ್ರೀಮತಿ ಲೀಲಾದೇವಿ ಆರ್. ಪ್ರಸಾದ್ ಅವರು ಭಾವಚಿತ್ರಗಳನ್ನು ಅನಾವರಣಗೊಳಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮನು ಬಳಿಗಾರ್ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.  

ನಾಡೋಜ ಡಾ. ಮನು ಬಳಿಗಾರ್ ಅವರು ಮಾತನಾಡಿ ಆದಿಕವಿ ಪಂಪನಿAದ ಹಿಡಿದು ಶಿಶುನಾಳ ಶರೀಫರವರೆಗಿನ ಪ್ರಾತಿನಿಧಿಕ ಪ್ರಾಚೀನ ಕವಿಗಳ ಮತ್ತು ವಚನಕಾರರ ಭಾವಚಿತ್ರಗಳು ಇಲ್ಲಿವೆ. ಇವುಗಳನ್ನು ವೀಕ್ಷಿಸಿದರೆ ಕನ್ನಡ ಸಾಹಿತ್ಯ ಪರಂಪರೆಯ ಅಗಾಧತೆ ಮತ್ತು ಆಶಯಗಳ ಅರಿವಾಗುತ್ತದೆ. ‘ಮನುಷ್ಯ ಜಾತಿ ತಾನೊಂದೆ ವಲಂ’ ಎಂಬ ಪಂಪನ ಘೋಷವಾಕ್ಯ ವಿಶ್ವಮಾನವತೆಯ ಕಡೆಗಿನ, ಸರ್ವ ಸಮಾನತೆಯ ಕಡೆಗಿನ ದಿಕ್ಸೂಚಿ ಎಂದರು. 

ಭಾವಚಿತ್ರಗಳನ್ನು ಅನಾವರಣಗೊಳಿಸಿ ಮಾತನಾಡಿದ ಶ್ರೀಮತಿ ಲೀಲಾದೇವಿ ಆರ್. ಪ್ರಸಾದ್ ಅವರು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕನ್ನಡ ಕವಿಗಳ ಹಾಗೂ ಸಾಹಿತ್ಯಕ್ಕೆ ಸಂಬAಧಿಸಿದ ವಸ್ತುಸಂಗ್ರಹಾಲಯವನ್ನು ಪ್ರಾರಂಭಿಸಬೇಕು ಎಂದು ಸಲಹೆ ನೀಡಿದರು. 1956ರಲ್ಲಿ ಅಂದರೆ 65 ವರ್ಷಗಳ ಹಿಂದೆ ತಮ್ಮ ಮಾವ ಶ್ರೀ ಶಿವಮೂರ್ತಿಶಾಸ್ತಿçಗಳು ಅಧ್ಯಕ್ಷರಾಗಿದ್ದಾಗ ಪರಿಷತ್ತಿಗೆ ಬಂದಾಗ ಕಸ ಗುಡಿಸುತ್ತಿದ್ದೆ, ಪುಸ್ತಕ ಜೋಡಿಸುತ್ತಿದ್ದೆ ಇದೆಲ್ಲವೂ ಕನ್ನಡದ ಮೇಲಿನ ಅಭಿಮಾನದಿಂದ ಮಾಡಿದ್ದೆ. ಕನ್ನಡ ಪುಸ್ತಕಗಳ ವಾಚನಾಭಿರುಚಿಯನ್ನು ಬೆಳೆಸಿದ್ದು ಪರಿಷತ್ತಿನೊಂದಿಗೆ ಈ ಒಡನಾಟ ಎಂದು ಸ್ಮರಿಸಿದರು. ಅನಂತರ ತಾವೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದದ್ದು ಬಯಸದೇ ಬಂದ ಭಾಗ್ಯ ಎಂದು ನೆನೆದರು.

ಈ ಸಮಾರಂಭದಲ್ಲಿ ಕ.ಸಾ.ಪ. ಗೌರವ ಕಾರ್ಯದರ್ಶಿಗಳಾದ ಡಾ. ಪದ್ಮರಾಜ ದಂಡಾವತಿ, ಶ್ರೀ ಕೆ. ರಾಜಕುಮಾರ್ ಹಾಗೂ ಗೌರವ ಕೋಶಾಧ್ಯಕ್ಷರಾದ ಶ್ರೀ ಪಿ. ಮಲ್ಲಿಕಾರ್ಜುನಪ್ಪ ಅವರುಗಳು ಉಪಸ್ಥಿತರಿದ್ದರು.


Post a Comment

0 Comments

Ad Code

Responsive Advertisement